ತೂಕ ಇಳಿಸೋದು ಒಂದು ಸಾಹಸಮಯ ಕೆಲಸವೇ ಸರಿ. ಏನೇ ಡಯೆಟ್ ಪ್ಲ್ಯಾನ್ ಮಾಡಿದರೂ, ಎಷ್ಟೇ ವರ್ಕೌಟ್ ಮಾಡಿದರೂ ತೂಕವೇ ಇಳಿಯುತ್ತಿಲ್ಲ ಅಂತ ಬೇಜಾರಾಗುವ ಒಂದು ವರ್ಗವಿದೆ. ಆದ್ರೆ ಅಡುಗೆ ಮನೆಯಲ್ಲೇ ಇರುವ ಕೆಲವು ಪದಾರ್ಥಗಳಿಂದ ಆರಾಮಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ನೀರಿಗೆ ಈ ಪುಡಿ ಹಾಕಿ ಕುಡಿದರೆ, ಹೊಟ್ಟೆ ಭಾಗದ ಕೊಬ್ಬು ಕರಗಿ ತೂಕ ಇಳಿಯುವುದಲ್ಲದೇ, ಹೊಟ್ಟೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹಾಗಿದ್ರೆ ಆ ಮ್ಯಾಜಿಕಲ್ ಪುಡಿ ಯಾವುದು? ಮುಂದೆ ಓದಿ.
ಒಂದು ಲೋಟ ಉಗುರುಬೆಚ್ಚನೆಯ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಕಾಲು ಚಿಟಿಕೆ ಇಂಗು ಸೇರಿಸಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಕುಡಿಯಿರಿ. ತೂಕ ಇಳಿಕೆ ಸೇರಿದಂತೆ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಪಾನೀಯದ ಉತ್ಕರ್ಷಣ ನಿರೋಧಕ ಗುಣಮಟ್ಟವನ್ನು ಹೆಚ್ಚಿಸಲು ನೀವು ಒಂದು ಚಿಟಿಕೆ ಅರಿಶಿನ ಪುಡಿಯನ್ನು ಕೂಡ ಸೇರಿಸಬಹುದು.(ಸೂಚನೆ: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಯಾವಾಗಲೂ ವೈದ್ಯರ ಸಲಹೆಯನ್ನು ಪಡೆಯಿರಿ.)