Thyroid Weight Loss: ಥೈರಾಯ್ಡ್ನಿಂದ ಹೆಚ್ಚಾದ ತೂಕ ಇಳಿಸೋಕೆ ಇಲ್ಲಿದೆ ಸಿಂಪಲ್ ಟಿಪ್ಸ್
Thyroid Patients Weight Loss: ಥೈರಾಯ್ಡ್ ಸಮಸ್ಯೆ ಇದ್ದರೆ ತೂಕ ಸಹ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಮ್ಮ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ಅವಶ್ಯಕ. ಥೈರಾಯ್ಡ್ ಕಾರಣದಿಂದ ತೂಕ ಹೆಚ್ಚಾಗಿದ್ರೆ ಅದನ್ನು ಇಳಿಸಲು ಕೆಲ ಟಿಪ್ಸ್ ಇಲ್ಲಿದೆ.
ಥೈರಾಯ್ಡ್ ಹಾರ್ಮೋನ್ ವ್ಯತ್ಯಾಸವಾದರೆ ಒಂದೆಲ್ಲಾ ಒಂದು ಸಮಸ್ಯೆಗಳು ಬರುತ್ತದೆ. ತೂಕ ಹೆಚ್ಚಾಗುವುದು, ಪಿರಿಯಡ್ಸ್ನಲ್ಲಿ ವ್ಯತ್ಯಾಸ ಹೀಗೆ ಒಂದೆಲ್ಲಾ ಒಂದು ತೊಂದರೆ ಸಾಲಾಗಿ ಬರುತ್ತದೆ. ಅದರಲ್ಲೂ ತೂಕ ಹೆಚ್ಚಾಗುವುದು ಒಂದು ದೊಡ್ಡ ತಲೆನೋವು.
2/ 8
ಈ ತೂಕ ಹೆಚ್ಚಾದಾಗ ಸಾಮಾನ್ಯವಾಗಿ ಎಲ್ಲರೂ ಜಿಮ್ ಹೋಗುವುದು ಅಥವಾ ಡಯೆಟ್ ಮಾಡಲು ಆರಂಭ ಮಾಡುತ್ತಾರೆ. ಕೆಲ ಆಹಾರಗಳನ್ನು ತೂಕ ಹೆಚ್ಚಾಗಿ ಬಿಟ್ಟರೆ ಎಂಬ ಭಯಕ್ಕೆ ತಿನ್ನುವುದಿಲ್ಲ. ಆದರೆ ಅವುಗಳು ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ.
3/ 8
ಸಾಮಾನ್ಯವಾಗಿ ತೂಕ ಹೆಚ್ಚಾದಾಗ ಇಳಿಸುವ ವಿಧಾನಕ್ಕೂ ಹಾಗೂ ಥೈರಾಯ್ಡ್ನಿಂದ ಹೆಚ್ಚಾದ ತೂಕ ಇಳಿಸುವ ಪ್ರಕ್ರಿಯೆಗೆ ಸಹ ಬಹಳ ವ್ಯತ್ಯಾಸವಿದೆ. ಹಾಗೆಯೇ ಈ ಸಮಯದಲ್ಲಿ ಸೇವಿಸುವ ಆಹಾರಗಳು ಸಹ ವಿಭಿನ್ನ.
4/ 8
ಐಯೋಡಿನ್ ಆಹಾರಗಳು: ಥೈರಾಯ್ಡ್ ಕಾರಣದಿಂದ ನಿಮ್ಮ ತೂಕ ಹೆಚ್ಚಾಗಿದ್ರೆ ಅದಕ್ಕೆ ಐಯೋಡಿನ್ ಅವಶ್ಯಕತೆ ಬಹಳಷ್ಟಿದೆ. ಅದಕ್ಕಾಗಿ ನೀವು ಉಪ್ಪು, ಮೀನು ಸೇರಿದಂತೆ ವಿವಿಧ ಸಮುದ್ರದ ಆಹಾರಗಳನ್ನು ಸೇವಿಸುವುದು ಪ್ರಯೋಜನ ನೀಡುತ್ತದೆ.
5/ 8
ಫೈಬರ್ ಆಹಾರಗಳು: ಫೈಬರ್ ಸಮೃದ್ಧವಾಗಿರುವ ಆಹಾರಗಳು ಯಾವಾಗಲೂ ನಿಮಗೆ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹದಿಂದ ಅನಗತ್ಯ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
6/ 8
ವಿಟಮಿನ್ ಡಿ: ವಿಟಮಿನ್ ಡಿ ಕೇವಲ ತೂಕ ಇಳಿಸಲು ಮಾತ್ರವಲ್ಲದೇ ಥೈರಾಯ್ಡ್ ಅಸಮತೋಲನವನ್ನು ಕಡಿಮೆ ಮಾಡಲು ಸಹ ಸಹಕಾರಿ. ಹಾಗಾಗಿ ಮೊಟ್ಟೆ, ಫ್ಯಾಟಿ ಫಿಶ್, ಮಶ್ರೂಮ್ ಸೇರಿದಂತೆ ವಿಟಮಿನ್ ಡಿ ಹೆಚ್ಚಿರುವ ಆಹಾರಗಳನ್ನು ಸೇವಿಸಿ.
7/ 8
ತಾಮ್ರ ಹೆಚ್ಚಿರುವ ಆಹಾರ: ಬಾದಾಮಿ, ಎಳ್ಳಿನ ಬೀಜ ಸೇರಿದಂತೆ ವಿವಿಧ ಆಹಾರಗಳಲ್ಲಿ ತಾಮ್ರದ ಅಂಶ ಹೆಚ್ಚಿರುತ್ತದೆ. ಈ ರೀತಿಯ ಆಹಾರಗಳು ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ.
8/ 8
ಓಮೆಗಾ-3: ಓಮೆಗಾ 3 ಇರುವ ಆಹಾರಗಳು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಜವಾಗಿ ಸಹಾಯ ಮಾಡುತ್ತದೆ. ಅದರ ಜೊತೆಗೆ ಥೈರಾಯ್ಡ್ನಿಂದ ಹೆಚ್ಚಾದ ತೂಕವನ್ನು ಸಹ ಇಳಿಸಲು ಇದು ಸಹಾಯ ಮಾಡುತ್ತದೆ. ವಾಲ್ನಟ್ಸ್, ಚಿಯಾ ಬೀಜಗಳಲ್ಲಿ ಓಮೆಗಾ ಆಹಾರಗಳು ಹೆಚ್ಚಿರುತ್ತದೆ. ಅವುಗಳನ್ನು ಸೇವಿಸಿ.