ಸಲಾಡ್, ಹಣ್ಣುಗಳು, ಮೊಸರು, ತರಕಾರಿಗಳ ಬಟ್ಟಲು, ಮಸೂರ, ಒಣ ಹಣ್ಣುಗಳು, ಬೀಜಗಳು ಇತ್ಯಾದಿಗಳನ್ನು ನಿಮ್ಮ ಆಹಾರದ ಜೊತೆಗೆ ತಿನ್ನಿ. ಈ ಸಿಂಪಲ್ ಟಿಪ್ಸ್ ಫಾಲೋ ಮಾಡುವ ಮೂಲಕ, ನೀವು ಮನೆಯಲ್ಲಿ ಕುಳಿತುಕೊಂಡೆ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ನೀವು ಜಿಮ್ಗೆ ಹೋಗಿ ಭಾರೀ ವ್ಯಾಯಾಮ ಮಾಡುವ ಅಗತ್ಯವಿಲ್ಲ. ನೀವು ಒಂದು ದಿನದಲ್ಲಿ ಕನಿಷ್ಠ 5 ರಿಂದ 10 ಸಾವಿರ ಹೆಜ್ಜೆಗಳನ್ನು ನಡೆಯಲು ಪ್ರಯತ್ನಿಸಿದರೂ ತೂಕ ಇಳಿಸಿಕೊಳ್ಳಬಹುದು.