ಹೀಗಿದ್ದರೂ, ಅನೇಕ ಜನರಿಗೆ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎಂದು ತಿಳಿದಿರುವುದಿಲ್ಲ. ಆದ್ದರಿಂದ ತೂಕ ಕರಗಿಸಿಕೊಳ್ಳುವ ಸಮಯದಲ್ಲಿ, ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡಬೇಕು. ಹಾಗಾಗಿ ನಾವು ನಿಮಗೆ ಇಂದು ತೂಕ ನಷ್ಟಕ್ಕೆ ಸಂಬಂಧಿಸಿದ ಕೆಲವು ಆಸಕ್ತಿದಾಯಕ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ತೂಕ ಇಳಿಸಿಕೊಳ್ಳಲು ಯೋಚಿಸುತ್ತಿದ್ದರೆ, ಈ ಕೆಳಗೆ ತಿಳಿಸಲಾದ 3 ಆಹಾರ ಪದಾರ್ಥಗಳಿಂದ ದೂರವಿರಿ.
ಬ್ರೆಡ್: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಮೊದಲು ಬಿಳಿ ಬ್ರೆಡ್ ತಿನ್ನುವುದನ್ನು ನಿಲ್ಲಿಸಿ, ಏಕೆಂದರೆ ಅದು ತೂಕವನ್ನು ಹೆಚ್ಚಿಸುತ್ತದೆ. ನಿಮಗೆ ಚಹಾದೊಂದಿಗೆ ಬ್ರೆಡ್ ತಿನ್ನುವ ಅಭ್ಯಾಸವಿದ್ದರೆ, ತಕ್ಷಣ ಅದನ್ನು ಬದಲಾಯಿಸಿಕೊಳ್ಳಿ. ಬ್ರೆಡ್ ಸೇವನೆಯು ತೂಕವನ್ನು ಕಡಿಮೆ ಮಾಡುವುದಿಲ್ಲ, ಬದಲಾಗಿ ಹೆಚ್ಚಿಸುತ್ತದೆ. ಅಲ್ಲದೇ ಅನೇಕ ಸಂಶೋಧನೆಗಳಲ್ಲಿ ಬಿಳಿ ಬ್ರೆಡ್ ಅನ್ನು ಹೆಚ್ಚು ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ ಎಂಬ ವಿಚಾರ ಬಹಿರಂಗಗೊಂಡಿದೆ.