Weight Loss: ಕಡಿಮೆ ಸಮಯದಲ್ಲಿ ತೂಕ ಇಳಿಸೋಕೆ ಇಲ್ಲಿವೆ ಬೆಸ್ಟ್ ಸಲಹೆಗಳು

ವೇಟ್ ಲಾಸ್ ಜರ್ನಿಯೇ ಆಗಿರಲಿ ಅಥವಾ ಸಾಮಾನ್ಯ ದಿನವೇ ಆಗಿರಲಿ. ಪದೇ ಪದೆ ಹಸಿವಾಗುವುದು ಸಾಮಾನ್ಯ ಸಂಗತಿ. ನೀವು ವೇಟ್ ಲಾಸ್ ಪ್ರಯಾಣದಲ್ಲಿದ್ದರೆ, ಪದೆ ಪದೇ ತಿನ್ನುವುದನ್ನು ನಿಯಂತ್ರಿಸಬೇಕಾಗುತ್ತದೆ. ಅದಕ್ಕಾಗಿ ಮತ್ತು ತ್ವರಿತ ವೇಟ್ ಲಾಸ್ ಫಲಿತಾಂಶಕ್ಕಾಗಿ ಈ ಮೀಲ್ ಪ್ಲಾನ್ ಫಾಲೋ ಮಾಡಿ.

First published:

  • 18

    Weight Loss: ಕಡಿಮೆ ಸಮಯದಲ್ಲಿ ತೂಕ ಇಳಿಸೋಕೆ ಇಲ್ಲಿವೆ ಬೆಸ್ಟ್ ಸಲಹೆಗಳು

    ತೂಕ ಇಳಿಸುವಾಗ ಪದೆ ಪದೇ ಉಂಟಾಗುವ ಹಸಿವನ್ನು ನಿಯಂತ್ರಿಸುವುದು ತುಂಬಾ ಕಷ್ಟ. ಜೊತೆಗೆ ಜಂಕ್ ಫುಡ್ ಕ್ರೇವಿಂಗ್ಸ್ ಕಡಿಮೆ ಮಾಡುವುದು ಕಷ್ಟ. ಹಸಿದ ಭಾವನೆ ದೇಹದಲ್ಲಿ ಕ್ಯಾಲೋರಿ ಸೇವನೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ವಿವಿಧ ಮಸಾಲೆ, ಸಾಸೇಜ್‌ ಮತ್ತು ಚೀಸ್‌ ತುಂಬಿದ ಜಂಕ್ ಫುಡ್ ತೂಕ ಹೆಚ್ಚಿಸುತ್ತದೆ.

    MORE
    GALLERIES

  • 28

    Weight Loss: ಕಡಿಮೆ ಸಮಯದಲ್ಲಿ ತೂಕ ಇಳಿಸೋಕೆ ಇಲ್ಲಿವೆ ಬೆಸ್ಟ್ ಸಲಹೆಗಳು

    ಜಂಕ್ ಫುಡ್ ಸೇವನೆಯು ನಿಮ್ಮ ದೇಹಕ್ಕೆ ಅಪಾಯಕಾರಿಯೂ ಆಗಿದೆ. ಹಾಗಾಗಿ ನೀವು ಪದೇ ಪದೇ ಹಸಿವಿನ ಅನುಭವಿಸುತ್ತಿದ್ದರೆ ಹೆಚ್ಚು ನೀರು ಕುಡಿಯಿರಿ. ಇದು ಇಡೀ ದೇಹವನ್ನು ಹೈಡ್ರೇಟ್ ಮಾಡುತ್ತದೆ. ಜೊತೆಗೆ ಅತಿಯಾದ ಕ್ಯಾಲೋರಿ ಸೇವನೆ ತಪ್ಪಿಸುತ್ತದೆ. ನೀರು ಕುಡಿಯುತ್ತಾ ಇರುವುದು ಆಹಾರದ ಹಸಿವಿನ ಸಮಸ್ಯೆ ನಿವಾರಿಸುತ್ತದೆ.

    MORE
    GALLERIES

  • 38

    Weight Loss: ಕಡಿಮೆ ಸಮಯದಲ್ಲಿ ತೂಕ ಇಳಿಸೋಕೆ ಇಲ್ಲಿವೆ ಬೆಸ್ಟ್ ಸಲಹೆಗಳು

    ಪ್ರೋಟೀನ್ ಭರಿತ ಆಹಾರ ಸೇವಿಸಿ. ಆಹಾರದಲ್ಲಿ ನೀವು ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಸೇವಿಸಿ. ಅದು ಕಡುಬಯಕೆ ಕಡಿಮೆ ಮಾಡುತ್ತದೆ. ಪ್ರೋಟೀನ್ ಅಂತಹ ಒಂದು ಪ್ರಮುಖ ಅಂಶ. ಚರ್ಮ, ಸ್ನಾಯು, ಮೂಳೆ, ಕೂದಲು ಮತ್ತು ಉಗುರು ಬಲಪಡಿಸುತ್ತದೆ. ವಿಧದ ಅಮೈನೋ ಆಮ್ಲಗಳು ದೇಹಕ್ಕೆ ಶಕ್ತಿ ಸಿಗುತ್ತದೆ.

    MORE
    GALLERIES

  • 48

    Weight Loss: ಕಡಿಮೆ ಸಮಯದಲ್ಲಿ ತೂಕ ಇಳಿಸೋಕೆ ಇಲ್ಲಿವೆ ಬೆಸ್ಟ್ ಸಲಹೆಗಳು

    ಹುದುಗಿಸಿದ ಆಹಾರವನ್ನು ಊಟದ ಭಾಗವಾಗಿ ಮಾಡಿ. ದೇಹವು ಆರೋಗ್ಯಕರ ಪ್ರೋಬಯಾಟಿಕ್ ಪಡೆಯುತ್ತದೆ. ಊಟದಲ್ಲಿ ಮೊಸರು, ಹುದುಗಿಸಿದ ಸೋಯಾಬೀನ್‌ ಖಾದ್ಯ, ಹುದುಗಿಸಿದ ತರಕಾರಿಗಳಿಂದ ತಯಾರಿಸಿದ ಕಿಮ್ಚಿ ಸೇವಿಸಬಹುದು. ಇದು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಡುಬಯಕೆ ತಪ್ಪಿಸುತ್ತದೆ.

    MORE
    GALLERIES

  • 58

    Weight Loss: ಕಡಿಮೆ ಸಮಯದಲ್ಲಿ ತೂಕ ಇಳಿಸೋಕೆ ಇಲ್ಲಿವೆ ಬೆಸ್ಟ್ ಸಲಹೆಗಳು

    ಸ್ವಲ್ಪ ಸಮಯ ಗಾಳಿಯಲ್ಲಿ ವಾಕಿಂಗ್ ಮಾಡಿ. ದಿನಕ್ಕೆ 15 ರಿಂದ 20 ನಿಮಿಷ ವಾಕಿಂಗ್ ಮಾಡಿ. ಇದು ದೇಹದಲ್ಲಿ ಸಂತೋಷ ಮತ್ತು ಶಕ್ತಿ ಹೆಚ್ಚುತ್ತದೆ. ಮತ್ತೆ ಮತ್ತೆ ಆಹಾರ ಸೇವನೆಯತ್ತ ಗಮನ ಹೋಗಲ್ಲ. ದೇಹವನ್ನು ಆರೋಗ್ಯಕರವಾಗಿಡಲು ಸ್ಕ್ವಾಟ್‌ ವ್ಯಾಯಾಮ ಸಹಕಾರಿ.

    MORE
    GALLERIES

  • 68

    Weight Loss: ಕಡಿಮೆ ಸಮಯದಲ್ಲಿ ತೂಕ ಇಳಿಸೋಕೆ ಇಲ್ಲಿವೆ ಬೆಸ್ಟ್ ಸಲಹೆಗಳು

    ವಾರದ ಆಹಾರ ಯೋಜನೆಯನ್ನು ಸರಿಯಾಗಿ ನಿರ್ವಹಿಸಿ. ವಾರದ ಮೊದಲ ದಿನ ಬೆಳಗಿನ ಉಪಾಹಾರದಲ್ಲಿ ಹುದುಗಿಸಿದ ಸೋಯಾಬೀನ್‌ ಮಾಡಿದ ಟ್ಯಾಮ್ಫೆ, ಮಧ್ಯಾಹ್ನದ ಊಟಕ್ಕೆ ಒಂದು ಬಟ್ಟಲು ಉದ್ದಿನಬೇಳೆ ಮತ್ತು ಮಿಶ್ರ ತರಕಾರಿ, ಸಂಜೆಯ ತಿಂಡಿಯಲ್ಲಿ ಬಟಾಣಿ ಜೊತೆ ಪೋಹಾ, ರಾತ್ರಿಯ ಊಟದಲ್ಲಿ ತರಕಾರಿ ಮತ್ತು ಹಣ್ಣು ಸಲಾಡ್ ಸೇವಿಸಿ.

    MORE
    GALLERIES

  • 78

    Weight Loss: ಕಡಿಮೆ ಸಮಯದಲ್ಲಿ ತೂಕ ಇಳಿಸೋಕೆ ಇಲ್ಲಿವೆ ಬೆಸ್ಟ್ ಸಲಹೆಗಳು

    ಎರಡನೇ ದಿನ ಬೆಳಗಿನ ಉಪಹಾರದಲ್ಲಿ ತರಕಾರಿ ಸ್ಮೂಥಿ, ಮಧ್ಯಾಹ್ನದ ಊಟಕ್ಕೆ ಎರಡು ಚಪಾತಿ, ಒಂದು ಲೋಟ ಮೊಸರು ಮತ್ತು ತುಪ್ಪದ ಕರಿ, ಸಂಜೆಯ ತಿಂಡಿಯಲ್ಲಿ ರವೆ ಚೀಲ, ರಾತ್ರಿಯ ಊಟಕ್ಕೆ ತರಕಾರಿ ಸೂಪ್ ಸೇವಿಸಿ. ಮೂರನೇ ದಿನ ಬೆಳಗ್ಗೆ ಮೊಸರು ಹಣ್ಣು, ಮಧ್ಯಾಹ್ನ ಮಿಶ್ರ ತರಕಾರಿ ಓಟ್ಸ್, ಸಂಜೆಗೆ ರವೆ ಬೇಯಿಸಿದ ಅಪ್ಪೆ, ರಾತ್ರಿ ಹೂಕೋಸು ಅನ್ನ ಸೇವಿಸಿ.

    MORE
    GALLERIES

  • 88

    Weight Loss: ಕಡಿಮೆ ಸಮಯದಲ್ಲಿ ತೂಕ ಇಳಿಸೋಕೆ ಇಲ್ಲಿವೆ ಬೆಸ್ಟ್ ಸಲಹೆಗಳು

    ನಾಲ್ಕನೇ ದಿನ ಬೆಳಗ್ಗೆ ರಾಗಿ ಅಪ್ಪಂ, ಮಧ್ಯಾಹ್ನ ಬಾಜ್ರಾ ರೊಟ್ಟಿ ಮತ್ತು ಮಿಶ್ರ ತರಕಾರಿ ರೈತಾ, ಸಂಜೆ ಚಿಯಾ ಪುಡ್ಡಿಂಗ್, ರಾತ್ರಿ ಬೇಯಿಸಿದ ಬೀನ್ಸ್ ಸೇವಿಸಿ. ಐದನೇ ದಿನ ಡ್ರೈಪ್ರೂಟ್ಸ್ ವಿಥ್ ಓಟ್ ಮೀಲ್, ಮಧ್ಯಾಹ್ನ ಗೋಧಿ ಹಿಟ್ಟಿನ ರೊಟ್ಟಿ ಮತ್ತು ಸೋಯಾಬೀನ್ ತರಕಾರಿ, ಅವಕಾಡೊ ಮೈಲೋ ಪಾನೀಯ, ರಾತ್ರಿ ಟ್ಯಾಕೋ ಸಲಾಡ್ ಸೇವಿಸಿ.

    MORE
    GALLERIES