ಕಾರ್ಡಿಯೋ ವ್ಯಾಯಾಮ ತೂಕವನ್ನು ಕಳೆದುಕೊಳ್ಳಲು ಅತ್ಯುತ್ತಮ ವ್ಯಾಯಾಮ ಎಂದು ಪರಿಗಣಿಸಲಾಗುತ್ತದೆ. ಕಾರ್ಡಿಯೋ ತೂಕ ನಷ್ಟದ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂಬುದು ತಿಳಿದಿರುವ ವಿಚಾರವೇ. ಆದರೆ ನೀವು ಜಿಮ್ ಅನ್ನು ಪ್ರವೇಶಿಸಿದಾಗ ಹಲವಾರು ಯಂತ್ರಗಳನ್ನು ನೋಡುತ್ತೀರಾ. ಟ್ರೆಡ್ ಮಿಲ್, ಎಲಿಪ್ಟಿಕಲ್, ರೋಯಿಂಗ್ ಮೆಷಿನ್, ಸೈಕಲಿಂಗ್, ಮೆಟ್ಟಿಲು ಹತ್ತುವ ಇತ್ಯಾದಿ ಉಪಕರಣಗಳನ್ನು ನೋಡುತ್ತೀರಾ.