Aditi Prabhudeva: ತೂಕ ಇಳಿಸೋ ಟಿಪ್ಸ್ ಕೊಟ್ಟ ಕನ್ನಡದ ಟಾಪ್ ಹುಡುಗಿ.. ಅವ್ರು ಇದನ್ನೇ ಕುಡಿತಾರಂತೆ!
Aditi Prabhudeva: ಹೀರೋಯಿನ್ಗಳು ಎಂದ ಮೇಲೆ ತಮ್ಮ ಅಂದ, ಚಂದ ಕಾಪಾಡಲು ಹಲವಾರು ಪ್ರಯತ್ನ ಮಾಡುತ್ತಾರೆ. ಡಯಟ್, ಪ್ರೋಟೀನ್ ಶೇಕ್ ಹೀಗೆ. ಹಾಗೆಯೇ ನಮ್ಮ ಕನ್ನಡದ ಚೆಲುವೆ ಅದಿತಿ ಪ್ರಭುದೇವ ಕೂಡ ತೂಕ ಇಳಿಸಲು ಮತ್ತು ಸೌಂದರ್ಯ ಕಾಪಾಡಲು ಮನೆಯಲ್ಲಿಯೇ ಕೆಲ ಜ್ಯೂಸ್ಗಳನ್ನು ತಯಾರಿಸಿ ಕುಡಿಯುತ್ತಾರೆ. ಅವರ ಈ ಸೌಂದರ್ಯದ ರಹಸ್ಯವನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅಭಿಮಾನಿಗಳಿಗೆ ಸಹ ತಿಳಿಸಿದ್ದಾರೆ. ನೀವು ಸಹ ಅವರ ಈ ಜ್ಯೂಸ್ಗಳನ್ನು ಟ್ರೈ ಮಾಡಬಹುದು. ಯಾವುವು ಆ ಜ್ಯೂಸ್ಗಳು ಎಂಬುದು ಇಲ್ಲಿದೆ.
ಧಾರಾವಾಹಿ ಮೂಲಕ ಮನೆಮಾತಾದ ನಟಿ ಅದಿತಿ ಪ್ರಭುದೇವ ನಂತರ ಚಂದನವನಕ್ಕೆ ಕಾಲಿಟ್ಟಿದ್ದರು. ಸರಳತೆಗೆ ಹೆಸರಾಗಿರುವ ನಟಿ, ಆಗಾಗ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅಭಿಮಾನಿಗಳ ಜೊತೆ ಕೆಲ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಹಾಗೆಯೇ ನಮ್ಮ ಫಿಟ್ನೆಸ್ ಸೀಕ್ರೇಟ್ ಅನ್ನು ಸಹ ಬಹಿರಂಗಪಡಿಸಿದ್ದಾರೆ.
2/ 7
ಮೊದಲನೆಯದು ನಿಂಬೆ ಮತ್ತು ಜೇನುತುಪ್ಪ. ಇದನ್ನ ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ, ಬೆಚ್ಚಗಿನ ನೀರಿಗೆ ಒಂದು ಹನಿ ನಿಂಬೆರಸ, 1 ಚಮಚ ಜೇನುತುಪ್ಪ ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ನಿಮ್ಮ ತೂಕ ಇಳಿಸಲು ಸಹಕಾರಿ ಎನ್ನುತ್ತಾರೆ ನಟಿ.
3/ 7
ಎರಡನೆಯದು, 4 ಸೇಬು ತುಂಡು, 4 ಸೌತೆಕಾಯಿ ತುಂಡು, ಸ್ವಲ್ಪ ಟೊಮ್ಯಾಟೋ, ಪುದೀನಾ ಶುಂಠಿ, ಕ್ಯಾರೆಟ್, ಬೀಟ್ರೂಟ್ ಎಲ್ಲವನ್ನು ಸೇರಿಸಿ ಮಿಕ್ಸಿ ಮಾಡಿ ಕುಡಿಯಿರಿ. ಇದನ್ನು ನೀವು ತಿಂಡಿ ಅಥವಾ ಊಟದ ಬದಲಿಗೆ ಸಹ ಕುಡಿಯಬಹುದು. ಇದು ನಿಮ್ಮ ತೂಕ ಇಳಿಸುವುದರ ಜೊತೆಗೆ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
4/ 7
ಮೊದಲು, ಬೆರ್ರಿಗಳು ಅಥವಾ ಕಿತ್ತಳೆ ಹಣ್ಣು, ಬಾಳೆಹಣ್ಣು, ಪ್ರೋಟೀನ್ ಪೌಡರ್, ಚಮಚ ನಿಂಬೆರಸ ಹಾಕಿ ಮಿಕ್ಸಿ ಮಾಡಿ. ಇದನ್ನು ನೀವು ಬೆಳಗ್ಗೆ ತಿಂಡಿ ಬದಲಿಗೆ ಸಹ ಕುಡಿಯಬಹುದು.
5/ 7
ಅರಿಶಿನ ಹಾಲಿನ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದರ ಆರೋಗ್ಯ ಪ್ರಯೋಜನಗಳನ್ನು ಪಟ್ಟಿ ಮಾಡಿದಷ್ಟು ಬೆಳೆಯುತ್ತದೆ. ಆದರೆ ಅದಿತಿ ಪ್ರಕಾರ ಈ ಹಾಲಿಗೆ ಸ್ವಲ್ಪ ಬೆಲ್ಲ ಹಾಕಿ ಸೇವನೆ ಮಾಡಿದರೆ ಇನ್ನೂ ಉತ್ತಮ.
6/ 7
ಪಾಲಕ್ ಸೊಪ್ಪು, ಬಾಳೆಹಣ್ಣು, ಸೌತೆಕಾಯಿ ಸಿಪ್ಪೆ ಸಮೇತ, 8 ಬಾದಾಮಿ ಮಿಕ್ಸ್ ಮಾಡಿ ಜ್ಯೂಸ್ ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ತೂಕ ಇಳಿಸೋಕೆ ಸಹಾಯ ಮಾಡುತ್ತದೆ.
7/ 7
ಒಂದು ಕ್ಯಾರೆಟ್ ತೆಗೆದುಕೊಂಡು ತುರಿದುಕೊಳ್ಳಿ, ನಂತರ ಹಾಲನ್ನು ಕುದಿಯಲು ಇಟ್ಟು, ಹಾಲು ಕುದಿಯುವಾಗ ತುರಿದ ಕ್ಯಾರೆಟ್ ಹಾಕಿ ಚನ್ನಾಗಿ ಬೇಯಿಸಿ ಕುಡಿಯುವುದು ದೇಹಕ್ಕೆ ತುಂಬಾ ಒಳ್ಳೆಯದು.