ನಿಮಗೆ ಟ್ರೆಕ್ಕಿಂಗ್ ಮಾಡುವ ಹವ್ಯಾಸವಿದ್ದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಬಹುದು. ಇಲ್ಲಿನ ಮುಳ್ಳಯ್ಯನ ಗಿರಿ ಶಿಖರವು ಸೂಪರ್ ಟ್ರೆಕ್ಕಿಂಗ್ ಸ್ಪಾಟ್ ಆಗಿದೆ. ಬೆಂಗಳೂರಿನಿಂದ ಈ ವಾರದ ವೀಕೆಂಡ್ ಗೆ ಈ ಸ್ಥಳ ಸಹ ಉತ್ತಮವಾಗಿರುತ್ತದೆ. ಇದಲ್ಲದೆಯೇ ಇಲ್ಲಿನ ಸುತ್ತಲಿನ ಜಲಪಾತಗಳು, ವನ್ಯಜೀವಿ ಅಭಯಾರಣ್ಯಗಳು, ದೇವಾಲಯಗಳು ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳಿವೆ.
ಬೆಂಗಳೂರಿನಿಂದ ಕೇವಲ 45 ಕಿ.ಮೀ ದೂರದಲ್ಲಿರುವ ನಂದಿ ಹಿಲ್ಸ್ ರಜಾ ದಿನದಲ್ಲಿ ಭೇಟಿ ನೀಡಬಹುದಾದ ಉತ್ತಮ ಸ್ಥಳವಾಗಿದೆ. ಬೆಳಗಿನ ಜಾವ ಸ್ನೇಹಿತರ ಜೊತೆ ಬೈಕ್ ರೈಡ್ ಮೂಲಕ ನಂದಿ ಹಿಲ್ಸ್ ತಲುಪಿದರೆ ನಿಮಗೆ ಸುರ್ಯೋದಯವನ್ನು ನೋಡಲು ಸಾಧ್ಯವಾಗುತ್ತದೆ. ಅಲ್ಲದೇ ಅಲ್ಲೆ ಬೆಟ್ಟದ ಮೇಲಿರುವ ದೇವಾಲಯಕ್ಕೂ ಭೇಟಿ ನೀಡಬಹುದಾಗಿದ್ದು, ಫೋಟೋಶೂಟ್ ಮಾಡುವವರಿಗೆ ಇದು ಸಖತ್ ಜಾಗವಾಗಿದೆ.