Summer Food: ಮನೆಯಲ್ಲೇ ಈಸಿಯಾಗಿ ಮಾಡ್ಬಹುದು ಕಲ್ಲಂಗಡಿ ಕುಲ್ಫಿ; ಮಕ್ಕಳಿಗೂ ಇಷ್ಟ ಆಗುತ್ತೆ!

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತುಂಬಾ ಸುಲಭವಾಗಿ ದೊರೆಯುತ್ತದೆ. ವಾಸ್ತವಾಗಿ ಕಲ್ಲಂಗಡಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಮತ್ತು ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನೂ ಕಲ್ಲಂಗಡಿಯಿಂದ ಏನಾದರೂ ವಿಶೇಷವಾಗಿರುವ ರೆಸಿಪಿ ಮಾಡಬೇಕೆಂದು ನೀವು ಬಯಸಿದರೆ, ಕಲ್ಲಂಗಡಿ ಕುಲ್ಫಿಯನ್ನು ಮನೆಯಲ್ಲಿಯೇ ಮಾಡಿ ಸವಿಯಿರಿ.

First published:

  • 17

    Summer Food: ಮನೆಯಲ್ಲೇ ಈಸಿಯಾಗಿ ಮಾಡ್ಬಹುದು ಕಲ್ಲಂಗಡಿ ಕುಲ್ಫಿ; ಮಕ್ಕಳಿಗೂ ಇಷ್ಟ ಆಗುತ್ತೆ!

    ಬೇಸಿಗೆ ಕಾಲದಲ್ಲಿ ನಮ್ಮನ್ನು ನಾವು ತಂಪಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತೇವೆ. ಅದರಲ್ಲಿಯೂ ದೇಹವನ್ನು ತಂಪಾಗಿಟ್ಟುಕೊಳ್ಳಲು ತಾಜಾವಾಗಿಡುವ ಆಹಾರಗಳನ್ನು ಸಹ ಸೇವಿಸುತ್ತೇವೆ. ಇನ್ನೂ ಈ ಸಮಯದಲ್ಲಿ ಎಲ್ಲರೂ ಕುಲ್ಫಿ ತಿನ್ನಲು ಹೆಚ್ಚಾಗಿ ಇಷ್ಟಪಡುತ್ತಾರೆ. ಏಕೆಂದರೆ ಕುಲ್ಫಿ ತಿನ್ನುವುದರಿಂದ ಸುಡು ಬಿಸಿಲಿನಿಂದ ಕೊಂಚ ರಿಲ್ಯಾಕ್ಸ್ ಆಗುತ್ತದೆ.

    MORE
    GALLERIES

  • 27

    Summer Food: ಮನೆಯಲ್ಲೇ ಈಸಿಯಾಗಿ ಮಾಡ್ಬಹುದು ಕಲ್ಲಂಗಡಿ ಕುಲ್ಫಿ; ಮಕ್ಕಳಿಗೂ ಇಷ್ಟ ಆಗುತ್ತೆ!

    ವಿಶೇಷವೆಂದರೆ ಈ ಸೀಸನ್ನಲ್ಲಿ ಕಲ್ಲಂಗಡಿ ಹಣ್ಣು ತುಂಬಾ ಸುಲಭವಾಗಿ ದೊರೆಯುತ್ತದೆ. ವಾಸ್ತವಾಗಿ ಕಲ್ಲಂಗಡಿ ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಮತ್ತು ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನೂ ಕಲ್ಲಂಗಡಿಯಿಂದ ಏನಾದರೂ ವಿಶೇಷವಾಗಿರುವ ರೆಸಿಪಿ ಮಾಡಬೇಕೆಂದು ನೀವು ಬಯಸಿದರೆ, ಕಲ್ಲಂಗಡಿ ಕುಲ್ಫಿಯನ್ನು ಮನೆಯಲ್ಲಿಯೇ ಮಾಡಿ ಸವಿಯಿರಿ.

    MORE
    GALLERIES

  • 37

    Summer Food: ಮನೆಯಲ್ಲೇ ಈಸಿಯಾಗಿ ಮಾಡ್ಬಹುದು ಕಲ್ಲಂಗಡಿ ಕುಲ್ಫಿ; ಮಕ್ಕಳಿಗೂ ಇಷ್ಟ ಆಗುತ್ತೆ!

    ಕಲ್ಲಂಗಡಿ ಕುಲ್ಫಿ ಮಾಡಲು ಬೇಕಾಗುವ ಸಾಮಾಗ್ರಿಗಳು: ಕತ್ತರಿಸಿದ ಕಲ್ಲಂಗಡಿ - 1 ಕಪ್, ಸಕ್ಕರೆ - ರುಚಿಗೆ ತಕ್ಕಷ್ಟು, ನಿಂಬೆ ರಸ - 3 ಟೀಸ್ಪೂನ್, ಕುಲ್ಫಿ ಪ್ರಿಂಟ್ - 2 ರಿಂದ 3.

    MORE
    GALLERIES

  • 47

    Summer Food: ಮನೆಯಲ್ಲೇ ಈಸಿಯಾಗಿ ಮಾಡ್ಬಹುದು ಕಲ್ಲಂಗಡಿ ಕುಲ್ಫಿ; ಮಕ್ಕಳಿಗೂ ಇಷ್ಟ ಆಗುತ್ತೆ!

    ಕಲ್ಲಂಗಡಿ ಕುಲ್ಫಿ ಮಾಡುವ ವಿಧಾನ: ಕಲ್ಲಂಗಡಿ ಕುಲ್ಫಿ ಮಾಡಲು, ಮೊದಲು ಕಲ್ಲಂಗಡಿ ಕತ್ತರಿಸಿ, ಅದರಲ್ಲಿರುವ ಎಲ್ಲಾ ಬೀಜಗಳನ್ನು ತೆಗೆದುಹಾಕಿ. ಎಲ್ಲಾ ಬೀಜಗಳನ್ನು ತೆಗೆದು ಹಾಕಿದ ನಂತರ, ಸಣ್ಣ ತುಂಡುಗಳಾಗಿ ಕತ್ತರಿಸಿ.

    MORE
    GALLERIES

  • 57

    Summer Food: ಮನೆಯಲ್ಲೇ ಈಸಿಯಾಗಿ ಮಾಡ್ಬಹುದು ಕಲ್ಲಂಗಡಿ ಕುಲ್ಫಿ; ಮಕ್ಕಳಿಗೂ ಇಷ್ಟ ಆಗುತ್ತೆ!

    ಈಗ ಈ ಸಣ್ಣ ತುಂಡುಗಳನ್ನು ಮಿಕ್ಸರ್ ಜಾರ್ಗೆ ಹಾಕಿ ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಿ. ಮಿಶ್ರಣವು ಗಟ್ಟಿಯಾಗುವಂತೆ ಮಾಡಿ. ಆಗ ಅದು ರುಚಿಯಾಗಿರುತ್ತದೆ. ನಿಮಗೆ ಇಷ್ಟವಿದ್ದರೆ ಅದನ್ನು ಪ್ಯೂರೀಯಾಗಿ ಬಳಸಬಹುದು.

    MORE
    GALLERIES

  • 67

    Summer Food: ಮನೆಯಲ್ಲೇ ಈಸಿಯಾಗಿ ಮಾಡ್ಬಹುದು ಕಲ್ಲಂಗಡಿ ಕುಲ್ಫಿ; ಮಕ್ಕಳಿಗೂ ಇಷ್ಟ ಆಗುತ್ತೆ!

    ಈಗ ಈ ಕಲ್ಲಂಗಡಿ ರಸದಲ್ಲಿ 3 ಚಮಚ ನಿಂಬೆ ರಸವನ್ನು ಬೆರೆಸಿ ಸ್ವಲ್ಪ ಸಮಯ ಬಿಡಿ. ತಯಾರಿಸಿದ ರಸವನ್ನು ಕುಲ್ಫಿ ಅಚ್ಚಿನಲ್ಲಿ ಸುರಿಯಿರಿ ಮತ್ತು ಅದನ್ನು 3 ರಿಂದ 4 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಫ್ರೀಜರ್ನಲ್ಲಿ ಇರಿಸಿ.

    MORE
    GALLERIES

  • 77

    Summer Food: ಮನೆಯಲ್ಲೇ ಈಸಿಯಾಗಿ ಮಾಡ್ಬಹುದು ಕಲ್ಲಂಗಡಿ ಕುಲ್ಫಿ; ಮಕ್ಕಳಿಗೂ ಇಷ್ಟ ಆಗುತ್ತೆ!

    ಎರಡನೇ ದಿನ, ಫ್ರೀಜರ್ನಿಂದ ಕುಲ್ಫಿ ಅಚ್ಚನ್ನು ಹೊರತೆಗೆದರೆ, ನಿಮಗೆ ಇಷ್ಟವಾದಂತಹ ಕೂಲ್ ಕಲ್ಲಂಗಡಿ ಕುಲ್ಫಿ ರೆಡಿ ಟೂ ಈಟ್. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES