ಅಶ್ಲೀಲತೆಯ ವಿಷಯದಲ್ಲಿ ಲಿಂಗ ಆಧಾರಿತ ವ್ಯತ್ಯಾಸಗಳು ಪರಿಣಾಮ ಬೀರುತ್ತಿದೆ. ಆದರೆ ಇಲ್ಲಿ ವಿಷಯವೆಂದರೆ, ಪೋರ್ನ್ ವಿಡಿಯೋವನ್ನು ಒಟ್ಟಿಗೆ ನೋಡುವುದು ದಂಪತಿಗಳಿಗೆ ಆರೋಗ್ಯಕರವೆಂದು ಸಾಬೀತಾಗಿದೆ. ಅಶ್ಲೀಲ ಚಿತ್ರಗಳನ್ನು ನೋಡುವ ವೈವಾಹಿಕ ಸಂಬಂಧ ಅನ್ಯೋನ್ಯತೆಯಿಂದ ಕೂಡಿದೆ. ಜೊತೆಯಾಗಿ ಪೋರ್ನ್ ನೋಡುವವರಲ್ಲಿ ಲೈಂಗಿಕ ಅನ್ಯೋನ್ಯತೆಯ ಹೆಚ್ಚಿದೆ ಎಂದು ಅಧ್ಯಯನವು ಹೇಳುತ್ತದೆ.
ಈ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ 8.4% ರಷ್ಟು ಜನರು ಆಗಾಗ್ಗೆ ಪೋರ್ನ್ ವಿಡಿಯೋ ನೋಡಿದ್ದಾರೆಂದು ಹೇಳಿದರೆ, 39.2% ಮಂದಿ ಇದನ್ನು ಕೆಲವೊಮ್ಮೆ ಮಾತ್ರ ನೋಡುತ್ತೇವೆ ಎಂದಿದ್ದಾರೆ. ಇನ್ನು 52.4% ಮಂದಿ ಅಶ್ಲೀಲ ವಿಡಿಯೋ ನೋಡುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಸಂಗಾತಿಯೊಂದಿಗೆ 3.2% ಜನರು ಮಾತ್ರ ಪೋರ್ನ್ ವಿಡಿಯೋ ನೋಡುತ್ತಿರುವುದಾಗಿ ತಿಳಿಸಿದರೆ, 40.1% ಜನರು ಕೆಲವೊಮ್ಮೆ ಜೊತೆಯಾಗಿ ಪೋರ್ನ್ ನೋಡುವುದಾಗಿ ತಿಳಿಸಿದ್ದಾರೆ. ಇನ್ನು 56.7% ಮಂದಿ ಜೊತೆಯಾಗಿ ಪೋರ್ನ್ ವೀಕ್ಷಣೆ ಮಾಡುವುದಿಲ್ಲ ಎಂದಿದ್ದಾರೆ.
ಈ ಬಗ್ಗೆ ಎಚ್ಚರವಿರಲಿ: ಅಶ್ಲೀಲ ವಿಡಿಯೋ ವೀಕ್ಷಣೆಯು ದಂಪತಿಗಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಏಕಾಂಗಿಯಾಗಿ ನೋಡುವುದು ಮತ್ತು ಒಟ್ಟಿಗೆ ನೋಡುವುದು ಎರಡೂ ಕೂಡ ಪಾಲುದಾರರ ನಡುವಣ ಆಕ್ರಮಣಕಾರಿ ಮನೋಭಾವವನ್ನು ಹೆಚ್ಚಿಸಬಹುದು. ಅತಿಯಾಗಿ ಅಶ್ಲೀಲ ವಿಡಿಯೋ ವೀಕ್ಷಣೆಯು ಒಬ್ಬರ ಸಂಬಂಧದಲ್ಲಿ ಕೆಲವು ಅಗತ್ಯಗಳನ್ನು ಪೂರೈಸಲಾಗುವುದಿಲ್ಲ ಎಂಬುದನ್ನು ಸೂಚಿಸಬಹುದು. ಹೀಗಾಗಿ ಲೈಂಗಿಕ ಶಿಕ್ಷಣ, ಸಂಬಂಧ ಶಿಕ್ಷಣ ಮತ್ತು ಜೋಡಿಗಳ ಚಿಕಿತ್ಸೆಯ ಪರಿಣಾಮಗಳನ್ನು ಚರ್ಚಿಸಬೇಕಾಗುತ್ತದೆ ಎಂದು ಅಧ್ಯಯನವು ತಿಳಿಸುತ್ತದೆ.