ಕಾಸ್ಟಿಕ್ ಸೋಡಾ ಬಳಸಿ: ಬಟ್ಟೆಯ ಮೇಲಿನ ಕಲೆಗಳನ್ನು ತೆಗೆದುಹಾಕಲು ನೀವು ಕಾಸ್ಟಿಕ್ ಸೋಡಾವನ್ನು ಸಹ ಬಳಸಬಹುದು. ಇದಕ್ಕಾಗಿ ಕಾಸ್ಟಿಕ್ ಸೋಡಾವನ್ನು ಸ್ವಲ್ಪ ನೀರಿಗೆ ಸೇರಿಸಿ ಮತ್ತು ಬಟ್ಟೆಯನ್ನು ಹತ್ತು ನಿಮಿಷಗಳ ಕಾಲ ಅದರಲ್ಲಿ ಹಾಕಿಡಿ. ನಂತರ ಅದನ್ನು ಹೊರತೆಗೆದು ಸಾಮಾನ್ಯ ನೀರಿನಿಂದ ತೊಳೆಯಿರಿ. ಇದು ಬಟ್ಟೆಯ ಮೇಲಿನ ಯಾವುದೇ ರೀತಿಯ ಕಲೆಗಳನ್ನು ನಿಮಿಷಗಳಲ್ಲಿ ತೆಗೆದುಹಾಕುತ್ತದೆ.
ಸೀಮೆಎಣ್ಣೆ ಬಳಸಿ: ಕೆಲವೊಮ್ಮೆ ಬಟ್ಟೆಯ ಮೇಲೆ ಕಲೆಗಳನ್ನು ಹೋಗಲಾಡಿಸುವುದು ಅಸಾಧ್ಯದ ಕೆಲಸದಂತೆ ತೋರುತ್ತದೆ. ಇದಕ್ಕಾಗಿ ನೀವು ಸೀಮೆ ಎಣ್ಣೆಯ ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ಸೀಮೆಎಣ್ಣೆಯಲ್ಲಿ ಬಟ್ಟೆಯನ್ನು ಕಲೆಯಾದ ಜಾಗದಲ್ಲಿ ಅಪ್ಲೈ ಮಾಡಿ ಹತ್ತು ನಿಮಿಷ ಹಾಗೆಯೇ ಬಿಡಿ. ನಂತರ ಅದನ್ನು ತೆಗೆದುಕೊಂಡು ಸಾಮಾನ್ಯವಾಗಿ ಡಿಟರ್ಜೆಂಟ್ನಿಂದ ತೊಳೆಯಿರಿ. ಇದು ಕೆಲವೇ ನಿಮಿಷಗಳಲ್ಲಿ ಬಣ್ಣದ ಕಲೆಗಳನ್ನು ಮಾಯವಾಗಿಸುತ್ತದೆ. (Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ನ್ಯೂಸ್ 18 ಖಚಿತಪಡಿಸುವುದಿಲ್ಲ)