Trip Plan: ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಮಾರ್ಚ್-ಏಪ್ರಿಲ್‌ನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ, ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಿ!

ಮೇಘಾಲಯದಲ್ಲಿನ ಹಲವು ಸಂಗತಿಗಳು ನಿಮ್ಮನ್ನು ಮತ್ತೆ, ಮತ್ತೆ ಇಲ್ಲಿಗೆ ಬರುವಂತೆ ಮಾಡುತ್ತದೆ. ಆದ್ದರಿಂದ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಇಲ್ಲಿಗೆ ಬರುವ ಮೂಲಕ ನೀವು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.

First published:

  • 16

    Trip Plan: ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಮಾರ್ಚ್-ಏಪ್ರಿಲ್‌ನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ, ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಿ!

    ಮೇಘಾಲಯವನ್ನು ಭೂಮಿಯ ಮೇಲಿನ ಸ್ವರ್ಗ ಎಂದೇ ಕರೆಯಲಾಗುತ್ತದೆ. ಹಸಿರು ಕಣಿವೆಗಳು, ಕಾಡುಗಳ ಮೂಲಕ ಹರಿಯುವ ನದಿಗಳು, ಜಲಪಾತಗಳು ಪ್ರಕೃತಿಯ ಒಂದು ಅದ್ಭುತವಾದಂತಹ ದೃಶ್ಯವಾಗಿದೆ. ಸುಂದರವಾದ ಚೆರ್ರಿ ಹೂವುಗಳ ಕಾಡಿನ ತುಂಬೆಲ್ಲಾ ಹರಡಿಕೊಂಡಿದೆ. ಈ ರೀತಿ ಕಣ್ಮನ ಸೆಳೆಯುವ ದೃಶ್ಯಗಳು ನಿಮ್ಮನ್ನು ಮತ್ತೆ ಮತ್ತೆ ಈ ರಾಜ್ಯಕ್ಕೆ ಬರುವಂತೆ ಮಾಡುತ್ತದೆ. ಆದ್ದರಿಂದ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಇಲ್ಲಿಗೆ ಬರುವ ಮೂಲಕ ನಿಮ್ಮ ರಜಾದಿನಗಳನ್ನು ಕಳೆಯಬಹುದು. ಮೇಘಾಲಯದಲ್ಲಿ ನೀವು ಯಾವ ಸ್ಥಳವನ್ನು ನೋಡಬಹುದು ಎಂಬುದಕ್ಕೆ ಕೆಲವು ಟಿಪ್ಸ್ಗಳನ್ನು ಈ ಕೆಳಗೆ ನೀಡಲಾಗಿದೆ.

    MORE
    GALLERIES

  • 26

    Trip Plan: ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಮಾರ್ಚ್-ಏಪ್ರಿಲ್‌ನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ, ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಿ!

    ಈ ಡಬಲ್ ಡೆಕ್ಕರ್ ಲಿವಿಂಗ್ ರೂಟ್ ಬ್ರಿಡ್ಜ್ ಅನ್ನು ನೀವು ಇಂಟರ್ನೆಟ್ ಅಥವಾ ಟಿವಿಗಳಲ್ಲಿ ನೋಡಿರಬಹುದು. ಕಾಡಿನಲ್ಲಿ ನೈಸರ್ಗಿಕವಾಗಿ ನಿರ್ಮಿಸಲಾದ ಈ ಸೇತುವೆ ಸುಮಾರು 200 ವರ್ಷಗಳಷ್ಟು ಹಳೆಯದ್ದಾಗಿದೆ. ಈ ಸೇತುವೆ ಬಹಳ ಜನಪ್ರಿಯವಾಗಿದೆ. ಇದನ್ನು ನೋಡಲು ಮತ್ತು ಫೋಟೋ ಕ್ಲಿಕ್ಕಿಸಿಕೊಳ್ಳಲು ಪ್ರಪಂಚದಾದ್ಯಂತದಿಂದ ಜನರು ಇಲ್ಲಿಗೆ ಬರುತ್ತಾರೆ. ಈ ಸೇತುವೆಯು ಕಾಡಿನ ಮಧ್ಯೆ ಇದೆ.

    MORE
    GALLERIES

  • 36

    Trip Plan: ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಮಾರ್ಚ್-ಏಪ್ರಿಲ್‌ನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ, ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಿ!

    ಎಲಿಫೆಂಟ್ ಫಾಲ್ಸ್ ಎಂಬುದು ಎತ್ತರದ ಪ್ರಸ್ಥಭೂಮಿಯಿಂದ ಹಾಲಿನ ಹೊಳೆಯಂತೆ ಬೀಳುವ ಜಲಪಾತವಾಗಿದೆ. ಇದು ಮೇಘಾಲಯದ ಪ್ರಮುಖ ಜಲಪಾತವಾಗಿದೆ. ಆನೆಯ ಆಕಾರದಲ್ಲಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಆದರೆ ಇದು 1897 ರಲ್ಲಿ ಭೂಕಂಪದಿಂದ ಹಾನಿಗೊಳಗಾಯಿತು. ಆದರೆ ಇಂದಿಗೂ ಈ ಜಲಪಾತ ಪ್ರವಾಸಿಗರಲ್ಲಿ ಬಹಳ ಜನಪ್ರಿಯವಾಗಿದೆ. ಈ ಎಲಿಫೆಂಟ್ ಫಾಲ್ಸ್ ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಗರದ ಹೊರವಲಯದಲ್ಲಿದೆ. ಮುಖ್ಯರಸ್ತೆಯಿಂದ ಸುಮಾರು 1 ಕಿ.ಮೀ ಒಳಗೆ ಹೋಗಬೇಕು. ಈ ಜಲಪಾತಗಳ ಬಳಿ ವಾಯು ಸೇನೆಯ ನಿಲ್ದಾಣವೂ ಇದೆ.

    MORE
    GALLERIES

  • 46

    Trip Plan: ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಮಾರ್ಚ್-ಏಪ್ರಿಲ್‌ನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ, ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಿ!

    ಚಿರಾಪುಂಜಿ ಕೂಡ ಮೇಘಾಲಯದ ಜನಪ್ರಿಯ ಸ್ಥಳಗಳಲ್ಲಿ ಒಂದಾಗಿದೆ. ಇದೊಂದು ಸುಂದರವಾದ, ಅದ್ಭುತವಾದ ಪ್ರವಾಸಿ ಸ್ಥಳವೆಂದು ಪರಿಗಣಿಸಲಾಗಿದ್ದು, ಈ ಸ್ಥಳಕ್ಕೆ ನೀವು ಭೇಟಿ ನೀಡಬಹುದು. ಇಲ್ಲಿ ನೀವು ಅನೇಕ ಸುಂದರವಾದ ಸ್ಥಳಗಳನ್ನು ಕಾಣಬಹುದು, ಅದನ್ನು ನೋಡಿದಾಗ ಯಾರ ಮನಸ್ಸನ್ನು ಸಂತೋಷದಿಂದ ಹಿಗ್ಗಿಸುತ್ತದೆ. ಈ ಸ್ಥಳದ ವಾತಾವರಣ ಮತ್ತು ಸೌಂದರ್ಯವು ಪ್ರವಾಸಿಗರನ್ನು ಮತ್ತೆ ಮತ್ತೆ ಬರುವಂತೆ ಆಕರ್ಷಿಸುತ್ತದೆ.

    MORE
    GALLERIES

  • 56

    Trip Plan: ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಮಾರ್ಚ್-ಏಪ್ರಿಲ್‌ನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ, ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಿ!

    ಮೌಸಿನ್ರಾಮ್ ಪ್ರಕೃತಿ ಪ್ರಿಯರಿಗೆ ಸ್ವರ್ಗಕ್ಕಿಂತ ಕಡಿಮೆಯಿಲ್ಲ. ನೀವು ಮೇಘಾಲಯದಲ್ಲಿ ಮಳೆಯನ್ನು ಆನಂದಿಸಲು ಬಯಸಿದರೆ ಮೌಸಿನ್ರಾಮ್ ಅನ್ನು ಭೇಟಿ ಮಾಡಬೇಕು. ಮೌಸಿನ್ರಾಮ್ ಭಾರತದಲ್ಲಿ ಮಾತ್ರವಲ್ಲದೇ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಮಳೆ ಬೀಳುವ ಸ್ಥಳವೆಂದು ಹೆಸರುವಾಸಿಯಾಗಿದೆ. ಇಲ್ಲಿನ ಹಸಿರು ನಿಸರ್ಗ ರಮಣೀಯ. ಈ ಸ್ಥಳವು ಪ್ರತಿ ಋತುವಿನಲ್ಲಿ ಅದ್ಭುತವಾಗಿ ಕಾಣುತ್ತದೆ.

    MORE
    GALLERIES

  • 66

    Trip Plan: ಟ್ರಿಪ್ ಪ್ಲ್ಯಾನ್ ಮಾಡ್ತಿದ್ದೀರಾ? ಮಾರ್ಚ್-ಏಪ್ರಿಲ್‌ನಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ, ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಿ!

    ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಗರ ಜೀವನ ಮತ್ತು ನೈಸರ್ಗಿಕ ಸೌಂದರ್ಯವನ್ನು ನೋಡಬಹುದಾದ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ 1491 ಮೀಟರ್ ಎತ್ತರದಲ್ಲಿದೆ. ಇದನ್ನು ಪೂರ್ವದ ಸ್ಕಾಟ್ಲ್ಯಾಂಡ್ ಎಂದೂ ಕರೆಯಲಾಗುತ್ತದೆ. ಪರ್ವತಗಳು, ಜಲಪಾತಗಳು, ಸರೋವರಗಳು ಮತ್ತು ಗುಹೆಗಳು ಶಿಲ್ಲಾಂಗ್ನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ನೀವು ಇಲ್ಲಿಗೆ ಬಂದರೆ, ನೀವು ಶಿಲ್ಲಾಂಗ್ ಶಿಖರ, ಉಮಿಯಂ ಸರೋವರ, ಹಾಥಿ ಜರ್ನಾ, ಸಿಹಿ ಜಲಪಾತಗಳಂತಹ ಇತರ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು.

    MORE
    GALLERIES