ಅಧಿಕ ಜನರಿಗೆ ಹೊಟ್ಟೆಯ ಬಳಿ ಹೆಚ್ಚು ಕೊಬ್ಬು ಸಂಗ್ರಹವಾಗಿರುತ್ತೆ. ಈ ರೀತಿಯ ಸಮಸ್ಯೆ ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಲ್ಲಿಯೂ ಸಹ ದೇಹದ ಇತರ ಎಲ್ಲಾ ಭಾಗಗಳಲ್ಲಿನ ಕೊಬ್ಬು ಕರಗಿದ ನಂತರವೇ ಹೊಟ್ಟೆಯ ಬಳಿಯ ಕೊಬ್ಬು ಕಡಿಮೆಯಾಗುತ್ತದೆ. ಜೀನ್ಗಳು ಹೊಟ್ಟೆಯಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗಿವೆ. ಆದರೆ, ಕೆಲವು ಜೀವನಶೈಲಿ ಬದಲಾವಣೆಯಿಂದ ಇದನ್ನು ಕಡಿಮೆ ಮಾಡಬಹುದು ಅಂತಾರೆ ಆಯುರ್ವೇದ ತಜ್ಞರು.
ತ್ರಿಫಲ ಚೂರ್ಣ: ಇದನ್ನು ದಿನನಿತ್ಯ ಸೇವನೆ ಮಾಡಿ ತೂಕ ಸುಲಭವಾಗಿ ಇಳಿಬಹುದು. ಇದು ದೇಹದಿಂದ ಎಲ್ಲಾ ವಿಷಗಳನ್ನು ತೆಗೆದು ಹಾಕುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧಗೊಳಿಸುತ್ತದೆ. ಜೀರ್ಣಕ್ರಿಯೆಯು ವೇಗವಾಗಿ ಬದಲಾಗುತ್ತದೆ. ಇದನ್ನು ಹೇಗೆ ಬಳಸಬೇಕೆಂದು ಹೆಚ್ಚಿನವರಿಗೆ ತಿಳಿದಿಲ್ಲ. ತ್ರಿಫಲ ಚೂರ್ಣವನ್ನು ತೆಗೆದುಕೊಂಡು ಅದನ್ನು ಬಿಸಿ ನೀರಿನೊಂದಿಗೆ ಬೆರೆಸಿ ಮತ್ತು ರಾತ್ರಿಯ ಊಟಕ್ಕೆ 2 ಗಂಟೆಗಳ ಮೊದಲು ತೆಗೆದುಕೊಳ್ಳಿ.