ಪ್ರತಿಯೊಬ್ಬರೂ ತಮ್ಮ ಮಸಾಜ್ ಮಾಡಲು ಇಷ್ಟಪಡುತ್ತಾರೆ. ಆದರೆ ಇದಕ್ಕಾಗಿ ಸಾಕಷ್ಟು ಹಣ ಮತ್ತು ಸಮಯ ವ್ಯಯಿಸಬೇಕಾಗುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಪಾರ್ಲರ್ ಗೆ ಹೋಗಿ ಗಂಟೆಗಟ್ಟಲೆ ಕಾದು ಸಾವಿರಾರು ರೂಪಾಯಿ ಖರ್ಚು ಮಾಡಿ ಫೇಸ್ ಮಸಾಜ್ ಮಾಡಿಸಿಕೊಳ್ಳಲು ಸಮಯವಿಲ್ಲದವರು ಮನೆಯಲ್ಲಿಯೇ ಮಸಾಜ್ ಉಪಕರಣಗಳನ್ನಿಟ್ಟು ಮಾಡಿ. ಫೇಶಿಯಲ್ ಟೂಲ್ ಗಳಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ಸ್ನಾಯುಗಳು ಸಡಿಲಗೊಂಡು ಮನಸ್ಸು ರಿಲ್ಯಾಕ್ಸ್ ಆಗುತ್ತದೆ.
ಬೆಳಿಗ್ಗೆಯಿಂದ ಕೆಲಸ ಮಾಡುವ ಮಹಿಳೆಯರು ರಾತ್ರಿಯಲ್ಲಿ ತಮಗಾಗಿ ಸ್ವಲ್ಪ ಸಮಯವನ್ನು ಮೀಸಲಿಡಬೇಕು. ಆದ್ದರಿಂದ ಸಮಯ ಲಭ್ಯವಿರುವಾಗ ಚರ್ಮದ ಆರೈಕೆಯಲ್ಲಿ ತೊಡಗಿಸಿಕೊಳ್ಳಿ. ಇದಕ್ಕಾಗಿ ನೀವು ಮನೆಯಲ್ಲಿಯೇ ಸಾವಯವ ಉತ್ಪನ್ನಗಳೊಂದಿಗೆ ಫೇಸ್ ಪ್ಯಾಕ್, ಫೇಶಿಯಲ್ ಮತ್ತು ಎಣ್ಣೆ ಮಸಾಜ್ ಮಾಡಬಹುದು. ಇದು ನಿಮ್ಮ ತ್ವಚೆಗೆ ಮಾತ್ರವಲ್ಲದೇ ಮರುದಿನ ಬೆಳಗ್ಗೆ ಮನಸ್ಸಿಗೂ ಉತ್ತಮ ಉಲ್ಲಾಸವನ್ನು ನೀಡುತ್ತದೆ