Success Tips: ಈ ಅಭ್ಯಾಸಗಳು ನಿಮ್ಮ ಲೈಫನ್ನೇ ಚೇಂಜ್ ಮಾಡ್ಬಹುದು!

ನಾವು ದಿನನಿತ್ಯ ಅನುಸರಿಸುವ ಅಭ್ಯಾಸಗಳೇ ನಮ್ಮ ಯಶಸ್ಸನ್ನು ನಿರ್ಮಿಸುತ್ತವೆ ಎಂದು ಹಿರಿಯರು ಆಗಾಗ ನಮಗೆ ಹೇಳುತ್ತಲೇ ಇರುತ್ತಾರೆ. ದಿನನಿತ್ಯದ ಅಭ್ಯಾಸಗಳು ಎಷ್ಟೊಂದು ಶಕ್ತಿಯುತವೆಂದು ನಾವು ಕೆಲವೊಮ್ಮೆ ಗಮನಿಸುವುದೇ ಇಲ್ಲ.‌ ಆದರೆ ಇವುಗಳೇ ನಮ್ಮ ಯಶಸ್ಇಗೆ ಕಾರಣವಂತೆ. ಹಾಗಿದ್ರೆ ನಮ್ಮ ಜೀವನ ಬದಲಾಯಿಸಲು ಪಾಲಿಸಬೇಕಾದ ಆ ದೈನಂದಿನ ಅಭ್ಯಾಸಗಳು ಯಾವುದೆಲ್ಲಾ ಎಂಬುದನ್ನು ಈ ಲೇಖನದಲ್ಲಿದೆ ಓದಿ.

First published:

  • 18

    Success Tips: ಈ ಅಭ್ಯಾಸಗಳು ನಿಮ್ಮ ಲೈಫನ್ನೇ ಚೇಂಜ್ ಮಾಡ್ಬಹುದು!

    ನಾವು ದಿನನಿತ್ಯ ಅನುಸರಿಸುವ ಅಭ್ಯಾಸಗಳೇ ನಮ್ಮ ಯಶಸ್ಸನ್ನು ನಿರ್ಮಿಸುತ್ತವೆ ಎಂದು ಹಿರಿಯರು ಆಗಾಗ ನಮಗೆ ಹೇಳುತ್ತಲೇ ಇರುತ್ತಾರೆ. ದಿನನಿತ್ಯದ ಅಭ್ಯಾಸಗಳು ಎಷ್ಟೊಂದು ಶಕ್ತಿಯುತವೆಂದು ನಾವು ಕೆಲವೊಮ್ಮೆ ಗಮನಿಸುವುದೇ ಇಲ್ಲ.‌ ಚಿಕ್ಕ ಚಿಕ್ಕ ದೈನಂದಿನ ಕೆಲಸ ಕಾರ್ಯಗಳು ನಾವು ಊಹೆ ಮಾಡುವುದಕ್ಕಿಂತ ಹೆಚ್ಚಾಗಿ ನಮ್ಮ ಜೀವನವನ್ನು ರೂಪಿಸುತ್ತವೆ. ಹಾಗಾಗಿ ನಮ್ಮ ಜೀವನ ಬದಲಾಯಿಸಲು ನಾವು ಕೆಲವೊಂದು ದೈನಂದಿನ ಅಭ್ಯಾಸಗಳನ್ನು ಮಾಡಬೇಕಿದೆ. ಅವಗಳನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

    MORE
    GALLERIES

  • 28

    Success Tips: ಈ ಅಭ್ಯಾಸಗಳು ನಿಮ್ಮ ಲೈಫನ್ನೇ ಚೇಂಜ್ ಮಾಡ್ಬಹುದು!

    ನಿಮ್ಮ ನಾಳೆಯ ಕೆಲಸಗಳ ಬಗ್ಗೆ ಹಿಂದಿನ ರಾತ್ರಿಯೇ ಪ್ಲಾನ್‌ ಮಾಡಿ:  "ನೀವು ಮಾಡೋ ಯೋಜನೆ ನಿಮ್ಮ ಕನಸಿನ ಭವಿಷ್ಯವನ್ನು ಇಂದೇ ಹೊತ್ತು ತರುತ್ತದೆ. ಆದ್ದರಿಂದ ಅದರ ಬಗ್ಗೆ ನೀವು ಈಗ ಕೆಲಸ ಮಾಡಲೇಬೇಕು” ಎಂದು ಅಮೆರಿಕಾದ ಲೇಖಕರು ಆಗಿರುವ ಅಲನ್‌ ಲೇಕಿನ್‌‌ ತಿಳಿಸಿದ್ದಾರೆ. ನಿಮ್ಮ ನಾಳೆಯ ದಿನದ ಬಗ್ಗೆ ಹಿಂದಿನ ರಾತ್ರಿಯೇ ಪ್ಲಾನ್‌ ಮಾಡೋದ್ರಿಂದ ಕೆಲಸದಲ್ಲಿ ಹೆಚ್ಚು ನಿಯಂತ್ರಣ ಹೊಂದಿ ಉತ್ಪಾದಕತೆಯನ್ನು ಹೆಚ್ಚಿಸಬಹುದು. ಹಿಂದಿನ ರಾತ್ರಿಯೇ ಗುರಿಗಳನ್ನು ಇಟ್ಟುಕೊಂಡು ಅವುಗಳನ್ನು ಮರುದಿನ ಮಾಡುವುದರಿಂದ ಮಹತ್ವದ ಕೆಲಸ ಕಾರ್ಯಗಳಿಗೆ ಹೆಚ್ಚು ಆದ್ಯತೆ ನೀಡಬಹುದು.

    MORE
    GALLERIES

  • 38

    Success Tips: ಈ ಅಭ್ಯಾಸಗಳು ನಿಮ್ಮ ಲೈಫನ್ನೇ ಚೇಂಜ್ ಮಾಡ್ಬಹುದು!

    ಬೆಳಿಗ್ಗೆ ಬೇಗನೆ ಏಳಿ: "ಬೇಗ ಮಲಗಿ ಮತ್ತು ಬೇಗ ಏಳುವುದು ಮನುಷ್ಯನನ್ನು ಆರೋಗ್ಯವಂತ, ಶ್ರೀಮಂತ ಮತ್ತು ಬುದ್ಧಿವಂತನನ್ನಾಗಿ ಮಾಡುತ್ತದೆ." ಎಂದು ಖ್ಯಾತ ಲೇಖಕ ಬೆಂಜಮಿನ್ ಫ್ರಾಂಕ್ಲಿನ್ ಹೇಳಿದ್ದಾರೆ. ಬೆಳಿಗ್ಗೆ ಬೇಗನೆ ಏಳುವುದರಿಂದ ಆ ದಿನವನ್ನು ಹೆಚ್ಚು ಉತ್ಸಾಹದಿಂದ ಕಳೆಯಬಹುದು. ಇದು ನಿಮಗೆ ಉತ್ತಮ ಆರಂಭವನ್ನು ನೀಡುತ್ತದೆ. ಇದರಿಂದ ನಮ್ಮ ನಿದ್ದೆ ಹಾಳಾಗುತ್ತದೆ ಎಂದು ಯಾವತ್ತಿಗೂ ಭಾವಿಸಬೇಡಿ. ಇದು ತಪ್ಪು ಕಲ್ಪನೆ. ಬೆಳಿಗ್ಗೆ ಬೇಗ ಏಳುವುದರಿಂದ, ರಾತ್ರಿ ಬೇಗ ಮಲಗಲೇಬೇಕು. ಇದು ನಮ್ಮ ಜೈವಿಕ ಕ್ರಿಯೆಯ ಮೇಲೆ ಪರಿಣಾಮ ಬೀರಿ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ.

    MORE
    GALLERIES

  • 48

    Success Tips: ಈ ಅಭ್ಯಾಸಗಳು ನಿಮ್ಮ ಲೈಫನ್ನೇ ಚೇಂಜ್ ಮಾಡ್ಬಹುದು!

    ಪ್ರತಿನಿತ್ಯ ವ್ಯಾಯಾಮ ಮಾಡಿ: “ವ್ಯಾಯಾಮವೆಂಬುದು ನಿಮ್ಮ ದೇಹ ಏನು ಮಾಡಬಲ್ಲದು ಎಂಬುದರ ಸಂಕೇತವಾಗಿದೆ. ಆದರೆ ಇದು ನೀವು ಎಷ್ಟು ತಿಂದಿರಿ ಎಂಬುದರ ಶಿಕ್ಷೆಯ ಸಂಕೇತವಲ್ಲ” ಎಂದು ಅನಾಮಧೇಯ ಲೇಖಕರೊಬ್ಬರು ಹೇಳಿದ್ದಾರೆ. ಆದ್ದರಿಂದ ನಿಮ್ಮ ದಿನವನ್ನು ಯಾವಾಗಲೂ ವ್ಯಾಯಾಮ ಮಾಡುವುದರಿಂದ ಪ್ರಾರಂಭಿಸಿ. ನಿಯಮಿತ ವ್ಯಾಯಾಮವು ದೈಹಿಕ ಮತ್ತು ಮಾನಸಿಕವಾಗಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

    MORE
    GALLERIES

  • 58

    Success Tips: ಈ ಅಭ್ಯಾಸಗಳು ನಿಮ್ಮ ಲೈಫನ್ನೇ ಚೇಂಜ್ ಮಾಡ್ಬಹುದು!

    ನಿಮ್ಮ ಆದ್ಯತೆಗಳ ಕೆಲಸಗಳಿಗೆ ಗಮನಕೊಡಿ: "ನಿಮ್ಮ ವೇಳಾಪಟ್ಟಿಯಲ್ಲಿ ಏನಿದೆ ಎಂಬುದು ನಿಮ್ಮ ಆದ್ಯತೆ ಅಲ್ಲ. ನಿಮ್ಮ ಆದ್ಯತೆಗಳೇ ನಿಮ್ಮ ವೇಳಾಪಟ್ಟಿಯಾಗಬೇಕು” ಎಂದು ಲೇಖಕ ಸ್ಟೀಫನ್ ಕೋವಿ ಹೇಳಿದ್ದಾರೆ. ಉತ್ತಮ ಜೀವನವನ್ನು ನಡೆಸುವುದು ಎಂದರೆ ನಿಮ್ಮ ದೈನಂದಿನ ಚಟುವಟಿಕೆಗಳನ್ನು ನಿಮ್ಮ ಆದ್ಯತೆಗಳೊಂದಿಗೆ ರೂಪಿಸಿಕೊಳ್ಳುವುದು. ನಿಮ್ಮ ಕೆಲಸಗಳಲ್ಲಿ ಯಾವುದು ತುಂಬಾ ಮುಖ್ಯ ಎಂಬುದು ನಿಮ್ಮ ಆದ್ಯತೆಗಳಿಂದ ತಿಳಿದು ಬರುತ್ತದೆ.

    MORE
    GALLERIES

  • 68

    Success Tips: ಈ ಅಭ್ಯಾಸಗಳು ನಿಮ್ಮ ಲೈಫನ್ನೇ ಚೇಂಜ್ ಮಾಡ್ಬಹುದು!

    ಹೆಚ್ಚು ಸಂಘಟಿತರಾಗಿರಿ: "ನೀವು ಕೆಲಸದ ಸಂಘಟನೆಗೆ ಕಳೆದ ಪ್ರತಿ ನಿಮಿಷವು, ಒಂದು ಗಂಟೆ ಗಳಿಸುವಷ್ಟು ಹಣವನ್ನು ತಂದುಕೊಡಬಲ್ಲದು” ಎಂದು ಲೇಖಕ ಬೆಂಜಮಿನ್ ಫ್ರಾಂಕ್ಲಿನ್ ಹೇಳಿದ್ದಾರೆ. ಸಂಘಟಿತ ಜೀವನವು ನಮ್ಮ ಸ್ಪಷ್ಟ ಮನಸ್ಸಿನ ಸಂಕೇತವಾಗಿರುತ್ತದೆ. ನಿಮ್ಮ ಕೆಲಸದ ಸ್ಥಳವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು, ನಿಮ್ಮ ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಮತ್ತು ನಿಮ್ಮ ವೈಯಕ್ತಿಕ ಜೀವನವನ್ನು ಕ್ರಮಬದ್ಧವಾಗಿ ನಿರ್ವಹಿಸುವುದು ಕೆಲಸದಲ್ಲಿನ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ನಿಮ್ಮ ಕೆಲಸದಲ್ಲಿನ ಉತ್ಪಾದಕತೆಯನ್ನು ಹೆಚ್ಚಿಸಬಲ್ಲದು.

    MORE
    GALLERIES

  • 78

    Success Tips: ಈ ಅಭ್ಯಾಸಗಳು ನಿಮ್ಮ ಲೈಫನ್ನೇ ಚೇಂಜ್ ಮಾಡ್ಬಹುದು!

    ಕೆಲಸದ ಬಗ್ಗೆ ಹೆಚ್ಚು ಫೋಕಸ್ ಆಗಿರಿ: “ಕೆಲಸಕ್ಕೆ ಬಾರದ ಆಲೋಚನೆಗಳ ಬಗ್ಗೆ ಯೋಚಿಸುವುದಕ್ಕಿಂತ, ಆ ಪೋಕಸ್‌ ಅನ್ನು ಕೈಯಲ್ಲಿರುವ ಕೆಲಸದ ಮೇಲೆ ಕೇಂದ್ರೀಕರಿಸಿ. “ ಎಂದು ಅಲೆಕ್ಸಾಂಡರ್ ಗ್ರಹಾಂ ಬೆಲ್ ಹೇಳಿದ್ದಾರೆ. ಇಂದಿನ ಆಧುನಿಕ ಕಾಲವು ಅನೇಕ ಗೊಂದಲಗಳ ಯುಗವೆಂದ್ರೂ ತಪ್ಪಾಗಲಾರದು. ಒಂದೇ ಕೆಲಸದ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸುವುದು ಇಂದಿನ ಕಾಲದಲ್ಲಿ ಅಮೂಲ್ಯವಾದ ಕೌಶಲ್ಯವಾಗಿದೆ. ಪೋಕಸ್‌ ನಮ್ಮ ಕೆಲಸದ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಗುಣಮಟ್ಟದ ಕೆಲಸಕ್ಕೆ ಕಾರಣವಾಗುತ್ತದೆ.

    MORE
    GALLERIES

  • 88

    Success Tips: ಈ ಅಭ್ಯಾಸಗಳು ನಿಮ್ಮ ಲೈಫನ್ನೇ ಚೇಂಜ್ ಮಾಡ್ಬಹುದು!

    ನಿಮ್ಮ ಕೆಲಸದಲ್ಲಿ ಕೃತಜ್ಞತೆ ಭಾವನೆ ಇರಲಿ:  "ಕೃತಜ್ಞತೆಯು ನಮ್ಮಲ್ಲಿರುವ ಉತ್ತಮವಾದ ಕೆಲಸವನ್ನು ಇನ್ನಷ್ಟು ಪರಿವರ್ತಿಸುತ್ತದೆ." ಎಂದು ಅನಾಮಧೇಯ ಲೇಖಕರೊಬ್ಬರು ಹೇಳಿದ್ದಾರೆ. ಆದ್ದರಿಂದ ಯಾವುದೇ ಕೆಲಸ ಇರಲಿ ಅಥವಾ ಯಾರೇ ಇರಲಿ ಅವರಿಗೆ ಕೃತಜ್ಞತೆಯನ್ನು ತಿಳಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಮಾನಸಿಕ ಆರೋಗ್ಯವು ಮತ್ತಷ್ಟು ಸುಧಾರಿಸುತ್ತದೆ. ಇದು ಪಾಸಿಟಿವಿಟಿಯನ್ನು ಬೆಳೆಸುತ್ತದೆ, ನಿಮ್ಮಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಸ್ವಾಭಿಮಾನವನ್ನು ಸುಧಾರಿಸುತ್ತದೆ.

    MORE
    GALLERIES