Virat Kohli: ಇನ್ಸ್ಟಾದಲ್ಲೂ 'ಶತಕ' ಬಾರಿಸಿದ ಕಿಂಗ್ ಕೊಹ್ಲಿ ಏಷ್ಯಾದಲ್ಲೇ ನಂಬರ್ 1..!
ನಂತರದ ಸ್ಥಾನದಲ್ಲಿ ಮತ್ತೋರ್ವ ಫುಟ್ಬಾಲ್ ಆಟಗಾರ ಅರ್ಜೆಂಟಿನಾದ ಲಿಯೊನಲ್ ಮೆಸ್ಸಿ(18.7 ಕೋಟಿ) ಇದ್ದು, ಹಾಗೆಯೇ ಮೂರನೇ ಸ್ಥಾನದಲ್ಲಿ ಬ್ರೆಜಿಲ್ನ ಫುಟ್ಬಾಲ್ ಆಟಗಾರ ನೇಮರ್ (14.7 ಕೋಟಿ) ಇದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಅಂಗಳದಲ್ಲಿ ಶತಕವೀರ ಎಂಬುದು ಗೊತ್ತಿರುವ ಸಂಗತಿ. ಆದರೆ ಇದೀಗ ಸೋಷಿಯಲ್ ಮೀಡಿಯಾದಲ್ಲೂ ಸೆಂಚುರಿ ಬಾರಿಸಿ ನಂಬರ್ 1 ಎನಿಸಿಕೊಂಡಿದ್ದಾರೆ.
2/ 6
ಹೌದು, ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ 100 ಮಿಲಿಯನ್ ಫಾಲೋವರ್ಸ್ ಹೊಂದಿದ ಏಷ್ಯಾದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಹಾಗೆಯೇ ಮೊದಲ ಭಾರತೀಯ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
3/ 6
ಮಾರ್ಚ್ 1 ರಂದು ಕೊಹ್ಲಿ ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 10 ಕೋಟಿ ದಾಟಿದೆ. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲೂ ಶತಕ ಮಿಲಿಯನ್ ಫಾಲೋವರ್ಸ್ ಹೊಂದಿದ ಪ್ರಥಮ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.
4/ 6
ಇನ್ನು ಇನ್ಸ್ಟಾಗ್ರಾಮ್ನಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ಭಾರತೀಯರ ಪಟ್ಟಿಯಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ 60.8 ಮಿಲಿಯನ್ ಫಾಲೋವರ್ಸ್ ಜೊತೆಗೆ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೆಯೇ 58 ಮಿಲಿಯನ್ ಫಾಲೋವರ್ಸ್ ಹೊಂದಿದ ನಟಿ ಶ್ರದ್ಧಾ ಕಪೂರ್ ಮೂರನೇ ಸ್ಥಾನದಲ್ಲಿದ್ದಾರೆ.
5/ 6
ಹಾಗೆಯೇ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಪೋರ್ಚುಗಲ್ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೊ ರೊನಾಲ್ಡೋ (26.6 ಕೋಟಿ) ಮೊದಲ ಸ್ಥಾನದಲ್ಲಿದ್ದಾರೆ.
6/ 6
ನಂತರದ ಸ್ಥಾನದಲ್ಲಿ ಮತ್ತೋರ್ವ ಫುಟ್ಬಾಲ್ ಆಟಗಾರ ಅರ್ಜೆಂಟಿನಾದ ಲಿಯೊನಲ್ ಮೆಸ್ಸಿ(18.7 ಕೋಟಿ) ಇದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಬ್ರೆಜಿಲ್ನ ಫುಟ್ಬಾಲ್ ಆಟಗಾರ ನೇಮರ್ (14.7 ಕೋಟಿ) ಇದ್ದಾರೆ.