ಇಂದಿನಿಂದ ಒಂದು ವಾರದವರೆಗೆ ಗುಲಾಬಿ ಹೂವುಗಳು, ಚಾಕೊಲೇಟ್ಗಳು, ಟೆಡ್ಡಿ ಬೇರ್ಗಳು ಮತ್ತು ಉಡುಗೊರೆ ಉತ್ಪನ್ನಗಳ ಮಾರಾಟ ಹೆಚ್ಚಳವಾಗಲಿದೆ. ದೇಶಾದ್ಯಂತ ಗುಲಾಬಿ ಹೂವಿಗೆ ರೈತರಿಗೆ ಭಾರೀ ಆರ್ಡರ್ಗಳು ಬಂದಿವೆ. ಸಾಮಾನ್ಯ ದಿನಗಳಲ್ಲಿ ಕೆಂಪು ಗುಲಾಬಿ ಹೂವು ಒಂದಕ್ಕೆ 20 ರೂ. ಆಗಿತ್ತು. ಆದರೆ ಈಗ 70ರಿಂದ 80 ರೂ. ಆಗಿದೆ. ಇಷ್ಟು ಬೆಲೆಯನ್ನು ರೈತರು ಹೆಚ್ಚಿಸಿದ್ದಾರೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ರೋಸ್ ಡೇ ದಿನ ನೀಡುವ ಹೂಗಳು ದೊಡ್ಡ ಹೂಜಿಯನ್ನು ಹೊಂದಿರುತ್ತವೆ. ಎಲ್ಲಾ ಹೂವುಗಳನ್ನು ಅಂತಹ ದೊಡ್ಡ ಹೂಜಿಗಳಲ್ಲಿ ಹಾಕಲಾಗುವುದಿಲ್ಲ. ಅದರಲ್ಲಿಯೂ ರೋಸ್ ಡೇಯಂದು ನೀಡುವ ಹೂವುಗಳನ್ನು ದೊಡ್ಡ ಹೂಜಿಯಲ್ಲಿ ಹಾಕಲಾಗಿರುತ್ತದೆ. ಈ ದಿನದಂದು ಉದ್ದನೆಯ ಕಾಂಡದ ಹೂವುಗಳನ್ನು ವಿಶೇಷವಾಗಿ ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಇಂದು ರೋಜ್ಗೆ ಬೆಲೆ ಹೆಚ್ಚಾಗಿರುತ್ತದೆ. ಎರಡು ಮೂರು ಹೂಗಳನ್ನು ಸೇರಿಸಿ ಹೂಗುಚ್ಛ ಮಾಡಿದರೆ 120ರಿಂದ 300 ರೂ. ಆಗಿರುತ್ತದೆ. ಇನ್ನೂ ಒಂದು ದೊಡ್ಡ ಹೂಗುಚ್ಛವನ್ನು ಖರೀದಿಸಲು ನೀವು ಇಷ್ಟಪಟ್ಟರೆ ಅದರ ಬೆಲೆ ಕೂಡ 2000 ರಿಂದ 3000 ರೂ. ಆಗಿರುತ್ತದೆ.
ಪ್ರತಿ ವರ್ಷ ಫೆಬ್ರವರಿ ಬಂತೆಂದರೆ ಗುಲಾಬಿ ಹೂಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಗುಲಾಬಿ ಕೃಷಿ ಕೈಗೊಳ್ಳುವ ರೈತರು ಸರಿಯಾದ ಸಮಯಕ್ಕೆ ಬೆಳೆ ಹಾಕುತ್ತಾರೆ. ಈ ತಿಂಗಳು ಹೂವುಗಳಿಗೆ ಬೇಡಿಕೆ ಇರುತ್ತದೆ. ಪ್ರೇಮಿಗಳ ದಿನದಂದು ಪ್ರಪೋಸ್ ಮಾಡುವ ಜೋಡಿಗಳು ಮದುವೆಗೆ ತಯಾರಿ ನಡೆಸುತ್ತಾರೆ. ಹಾಗಾಗಿ ಫೆಬ್ರವರಿ 14ರ ನಂತರವೂ ಗುಲಾಬಿ ಹೂಗಳಿಗೆ ಬೇಡಿಕೆ ಮುಂದುವರಿಯಲಿದೆ.
ಗುಲಾಬಿ ಹೂಗಳ ಬದಲಿಗೆ ಲಿಲ್ಲಿ ಹೂಗಳನ್ನು ಸಹ ಇಂದು ನೀಡಬಹುದು. ಈ ಹೂವು ತುಂಬಾ ಸುಂದರವಾಗಿರುವುದರ ಜೊತೆಗೆ ಕ್ಲಾಸಿಕ್ ಲುಕ್ ಕೂಡ ನೀಡುತ್ತದೆ. ಆದರೆ ಗುಲಾಬಿ ಹೂವಿನ ಬೆಲೆಗಿಂತ ಲಿಲ್ಲಿ ಹೂವುಗಳ ಬೆಲೆ ಇನ್ನೂ ಹೆಚ್ಚಾಗಿರುತ್ತದೆ. ಒಂದು ಲಿಲ್ಲಿ ಹೂವಿನ ಬೆಲೆ 200 ರೂ. ಇದ್ದರೆ, ಹೂಗುಚ್ಛ 2,500 ರೂ.ನಿಂದ 4,000 ರೂ. ಆಗಿದೆ. ಕೆಲವರಿಗೆ ಮಧ್ಯದಲ್ಲಿ 1 ಗುಲಾಬಿ ಇರುವ 6 ಲಿಲ್ಲಿ ಹೂವುಗಳ ಗುಚ್ಛವಿದ್ದರೆ ಇನ್ನೂ ಸುಂದರವಾಗಿರುತ್ತದೆ. ಒಟ್ಟಾರೆ ಈ ಪ್ರೇಮಿಗಳ ವಾರ ರೈತರಿಗೆ ಮತ್ತು ವ್ಯಾಪಾರಿಗಳಿಗೆ ಲಾಭದಾಯಕವಾಗಿದೆ.