ಪದಗಳಿಗೆ ನಿಲುಕದ ಪ್ರೀತಿಯನ್ನು ನಾ ಮುತ್ತಿನಲ್ಲೇ ತಿಳಿಸಲೇ... ಹೌದು ಇಂದು ಪ್ರೇಮಿಗಳ ವಾರದ ಮುತ್ತಿನ ದಿನ. ಮುತ್ತಿನ ಕಿಮ್ಮತ್ತು ಗಮ್ಮತ್ತು ಏನೆಂದು ತಿಳಿಯಲು ಪ್ರೇಮಿಗಳನ್ನೇ ಕೇಳಬೇಕು. ಏಕೆಂದರೆ ಅಧರದಿಂದ ಮೂಡಿ ಬರುವ ಒಂದು ಸಿಹಿಮುತ್ತು ಪ್ರೇಮಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂಬುದು ನಿಜ. ಆದರೆ ನಿಮ್ಮ ಸಂಗಾತಿಗೆ ಮೊದಲ ಬಾರಿ ಚುಂಬಿಸುವಾಗ ನಾಚಿಕೆ, ಆತಂಕ ಮತ್ತು ಹಿಂಜರಿಕೆ ಇರುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಮನಸ್ಸಿನಲ್ಲಿ ಭಾವನೆಗಳ ಅಲೆಯೆದ್ದಿರುತ್ತದೆ. ಪ್ರೀತಿಯಲ್ಲಿ ನಂಬಿಕೆಯ ಹಂತವನ್ನು ದಾಟಿಯೇ ಮಧುರ ಅಧರದ ಸ್ಪರ್ಶವಾಗುತ್ತದೆ ಎಂಬುದು ನೆನಪಿನಲ್ಲಿರಲಿ. ಒಂದಾರ್ಥದಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಲು ವಿಭಿನ್ನವಾಗಿ ಚುಂಬಿಸಲಾಗುತ್ತದೆ. ವ್ಯಾಲೆಂಟೈನ್ಸ್ ಡೇಯ ಮುತ್ತಿನ ದಿನದಲ್ಲಿ ಕೆಲ ಕಿಸ್ಮತ್ ಕನೆಕ್ಷನ್ ಬಗ್ಗೆ ತಿಳಿಸಲಾಗಿದೆ.
ದೂರದಿಂದಲೇ ತನ್ನ ಜೊತೆಗಾರ ಅಥವಾ ಜೊತೆಗಾತಿಗೆ ಗಾಳಿಯಲ್ಲಿ ನೀಡುವ ಚುಂಬನವನ್ನು ಫ್ಲೈಯಿಂಗ್ ಕಿಸ್ ಎಂದು ಕರೆಯಲಾಗುತ್ತದೆ. ಶತಕ ಬಾರಿಸಿದಾಗ ವಿರಾಟ್ ಕೊಹ್ಲಿ ಪೆವಿಲಿಯನ್ನಲ್ಲಿದ್ದ ಅನುಷ್ಕಾಗೆ ಹಲವು ಬಾರಿ ಫ್ಲೈಯಿಂಗ್ ಕಿಸ್ ಮಾಡಿ ಗಮನ ಸೆಳೆದಿದ್ದರು. ಕಿಸ್ನಲ್ಲಿ ಹಲವು ಬಗೆಯಿದ್ದರೂ, ಚುಂಬಿಸುವ ಮುನ್ನ ನಿಮ್ಮ ಸಂಗಾತಿಯ ಒಪ್ಪಿಗೆ ಇರಲಿ ಎಂಬುದು ಮಾತ್ರ ನಮ್ಮ ಸಲಹೆ.