ಪ್ರೇಮಿಗಳ ವಾರ ಪ್ರಾರಂಭವಾಗಿದೆ. ಇದರ ಮೊದಲ ದಿನ ಎಂದರೆ ಗುಲಾಬಿ ದಿನ. ಈ ದಿನವನ್ನು ವಿಶ್ವ ಗುಲಾಬಿ ದಿನ ಎಂದೂ ಆಚರಿಸಲಾಗುತ್ತದೆ. ಗುಲಾಬಿ ದಿನದಂದು ಪ್ರೇಮಿಗಳು ಪರಸ್ಪರ ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಅದೇನೇ ಇರಲಿ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಈ ದಿನ ಗುಲಾಬಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಆದರೆ ವಿಶ್ವದ ಅತ್ಯಂತ ದುಬಾರಿ ಗುಲಾಬಿ ಹೂವು ಯಾವುದು ಅಂತ ತಿಳಿದಿದ್ಯಾ ಮತ್ತು ಅದರ ಬೆಲೆ ಎಷ್ಟು ಎಂದು ನಿಮಗೆ ತಿಳಿದಿದೆಯೇ? ಈ ಎಲ್ಲಾ ಡಿಟೇಲ್ಸ್ ಈ ಕೆಳಗಿನಂತಿದೆ.
ಈ ಗುಲಾಬಿ ಹೂವಿಗೂ ಕಥೆ ಇದೆ. ಹೂ ಬೆಳೆಗಾರ ಅಂದರೆ ಹೂಗಾರ ಡೇವಿಡ್ ಆಸ್ಟಿನ್ ಇದನ್ನು ಮೊದಲು ಬೆಳೆಸಿದರು. ಅದನ್ನು ತನ್ನ ತೋಟದಲ್ಲಿ ನೆಟ್ಟು 15 ವರ್ಷಗಳ ಕಾಲ ತಾಳ್ಮೆಯಿಂದ ಕಾಯುತ್ತಿದ್ದರು. ಅಷ್ಟೇ ಅಲ್ಲದೇ ಗಿಡದ ಸಂಪೂರ್ಣ ಆರೈಕೆ ಮಾಡಿದರು. ಇದು ವಾಸ್ತವವಾಗಿ ಮೂಲ ಗುಲಾಬಿ ಅಥವಾ ಪ್ರಕೃತಿಯಿಂದ ನೈಸರ್ಗಿಕವಾಗಿ ಕಂಡು ಬರುವ ಗುಲಾಬಿ ಅಲ್ಲ, ಆದರೆ ಹಲವಾರು ಅಪರೂಪದ ಹೂವುಗಳನ್ನು ಸಂತಾನೋತ್ಪತ್ತಿ ಮಾಡುವ ಮೂಲಕ ರಚಿಸಲಾಗಿದೆ. ಇದನ್ನು ಮೊದಲ ಬಾರಿಗೆ 2006 ರಲ್ಲಿ ಮಾರಾಟ ಮಾಡಲಾಯಿತು.
ಅಂದಹಾಗೆ, ಜಗತ್ತಿನಲ್ಲಿ 16 ವಿವಿಧ ಬಣ್ಣದ ಗುಲಾಬಿಗಳಿವೆ. ಹಲವು ತಳಿಯ ಗುಲಾಬಿಗಳನ್ನು ಬೆರೆಸಿ ತಯಾರಾದ ಜೂಲಿಯೆಟ್ ರೋಸ್ನ ಅತ್ಯಂತ ವಿಶೇಷವಾದ ಅಂಶವೆಂದರೆ ಅದರ ಆಕರ್ಷಕ ವಿನ್ಯಾಸ ಮತ್ತು ಆಕರ್ಷಕವಾಗಿ ಕಾಣುವ ದಳಗಳು. ಈ ರೀತಿಯ ಗುಲಾಬಿ ಹೂವು ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ಅದರ ವಿಶಿಷ್ಟ ಮತ್ತು ಅದ್ಭುತವಾದ ಪರಿಮಳದ ಶೈಲಿಯು ಸಹ ವಿಶಿಷ್ಟವಾಗಿದೆ. ಜೂಲಿಯೆಟ್ ಗುಲಾಬಿಯ ಸುಗಂಧವು ತುಂಬಾ ಹಗುರ ಮತ್ತು ಆಕರ್ಷಕವಾಗಿದೆ ಎಂದು ಈ ಹೂವನ್ನು ಬೆಳೆಸುವ ಡೇವಿಡ್ ಆಸ್ಟಿನ್ ಹೇಳುತ್ತಾರೆ, ಇದು ಸುಗಂಧ ದ್ರವ್ಯದಂತೆ ಭಾಸವಾಗುತ್ತದೆ. ಇದು ಸುಮಾರು 40 ದಳಗಳನ್ನು ಹೊಂದಿದೆ.
ಜೂಲಿಯೆಟ್ ಗುಲಾಬಿಯ ಈ ಸುಗಂಧಕ್ಕೆ ಹೆಚ್ಚಿನ ಜನರು ಈ ಗುಲಾಬಿಯತ್ತ ಆಕರ್ಷಿತರಾಗುತ್ತಾರೆ. ಈಗ ಗುಲಾಬಿ, ತಿಳಿ ಹಳದಿ ಮತ್ತು ಕಡು ಕೆಂಪು ಬಣ್ಣಗಳಲ್ಲಿ ಬೆಳೆಯಲಾಗುತ್ತಿದೆ. ಈ ರೀತಿಯ ಗುಲಾಬಿ ಅಮೆರಿಕ ಮತ್ತು ರಷ್ಯಾದಲ್ಲಿ ಬಹಳ ಜನಪ್ರಿಯವಾಗಿದೆ. ಇದರ ಗಾತ್ರ ಇತರ ಗುಲಾಬಿ ಹೂವುಗಳಿಗಿಂತ ಹೆಚ್ಚು. ಈ ಗುಲಾಬಿಯನ್ನು ಮೊದಲು 2006 ರಲ್ಲಿ ಬ್ರಿಟನ್ನಲ್ಲಿ ನಡೆದ ಚೆಲ್ಸಿಯಾ ಫ್ಲವರ್ ಶೋನಲ್ಲಿ ಪ್ರದರ್ಶಿಸಲಾಯಿತು. ಗುಲಾಬಿಗಳ ಜಗತ್ತಿನಲ್ಲಿ ಇದು ಅಪರೂಪವೆಂದು ಪರಿಗಣಿಸಲಾಗಿದೆ.
ಷೇಕ್ಸ್ಪಿಯರ್ನ ಕಾದಂಬರಿಯ ನಾಯಕಿ ಜೂಲಿಯೆಟ್ ಅವರ ಹೆಸರನ್ನು ಈ ಗುಲಾಬಿಗೆ ಇಡಲಾಗಿದೆ. ರೋಮಿಯೋ ಮತ್ತು ಜೂಲಿಯೆಟ್ನ ಪ್ರೇಮಕಥೆಯನ್ನು ವಿಶ್ವದ ಅತ್ಯಂತ ರೋಮ್ಯಾಂಟಿಕ್ ಎಂದು ಪರಿಗಣಿಸಲಾಗಿದೆ. ಅನೇಕ ಅತ್ಯುತ್ತಮ ಗುಲಾಬಿಗಳ ಮಿಶ್ರಣವಾದ ಗುಲಾಬಿಯನ್ನು ಉತ್ಪಾದಿಸಬೇಕು ಎಂಬ ಯೋಜನೆಯು ಅಮೆರಿಕಾದಲ್ಲಿ ಆಸ್ಟಿನ್ ಅವರ ಮನಸ್ಸಿಗೆ ಬಂದಾಗ ಅದರ ಕಥೆ ಪ್ರಾರಂಭವಾಯಿತು. ಈಗ ಜೂಲಿಯೆಟ್ ಗುಲಾಬಿಯ ಬೆಲೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂದು ಭಾವಿಸಲಾಗಿದೆ. ಡೇವಿಡ್ ಆಸ್ಟಿನ್ ಇನ್ನಿಲ್ಲ, ಆದರೆ ಅವರ ನರ್ಸರಿ ತನ್ನ ವಿಶಾಲವಾದ ಪ್ರದೇಶದಲ್ಲಿ ಸಾವಿರಾರು ಜಾತಿಯ ಗುಲಾಬಿಗಳನ್ನು ಬೆಳೆಸುತ್ತದೆ ಮತ್ತು ಪ್ರಪಂಚದಾದ್ಯಂತ ಆನ್ಲೈನ್ ಮೂಲಕ ಮಾರಾಟ ಮಾಡಲಾಗುತ್ತದೆ.