Happy Valentine's Day 2019: ಲವ್ ಬರ್ಡ್ಸ್ ಅಲ್ಲ..ಬರ್ಡ್ಸ್ ಲವರ್ಸ್: ಇದು ಪಕ್ಷಿ ಪ್ರೇಮ
ಪ್ರೀತಿ-ಪ್ರೇಮದ ಮಾಯೆ ಬರೀ ಮನುಷ್ಯರಲ್ಲಿ ಮಾತ್ರ ಮೂಡುವ ಭಾವನೆಯಲ್ಲ. ಮೂಕ ಪ್ರಾಣಿಗಳೂ ಕೂಡ ಮಾನವರನ್ನೇ ನಾಚಿಸುವಂತೆ ಪ್ರೇಮ ಸಲ್ಲಾಪದಲ್ಲಿ ತೊಡಗಿಸಿಕೊಳ್ಳುತ್ತವೆ. ಇದಕ್ಕೆ ತಾಜಾ ಉದಾಹರಣೆ ಆಫ್ರಿಕನ್ ಪೆಂಗ್ವಿನ್ಗಳ ಈ ರೊಮ್ಯಾಂಟಿಕ್ ಚಿತ್ರಗಳು.
ಫೆಬ್ರವರಿ 14 ವಿಶ್ವ ಪ್ರೇಮಿಗಳ ದಿನ. ಈ ದಿನಾಚರಣೆಯ ಮೂಲ ಹುಡುಕಿದರೆ ಹಲವು ಕಥೆಗಳು ತೆರೆದುಕೊಳ್ಳುತ್ತದೆ. ಅದರಲ್ಲೊಂದು ಪ್ರೇಮ ಪಕ್ಷಿಗಳೂ ಕೂಡುವಿಕೆಯ ಕಹಾನಿಯೊಂದು ಕಾಣಿಸಿಗುತ್ತದೆ. ಇದು ನಿಜವೇ ಎಂಬ ಸಂಶಯ ಮೂಡಿಸುವಂತೆ ಪಕ್ಷಿಗಳೇ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಳ್ಳುತ್ತಿದೆ.
2/ 5
ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಕ್ಯಾಲಿಫೋರ್ನಿಯಾ ಅಕಾಡೆಮಿ ಆಫ್ ಸೈನ್ಸ್ ಅಕ್ವೇರಿಯಂನಲ್ಲಿ ಪೆಂಗ್ವಿನ್ ಗಳು ವ್ಯಾಲೆಂಟೈನ್ಸ್ ಡೇ ಆಚರಿಸಿಕೊಂಡಿದೆ. ತಮ್ಮ ಸಂಗಾತಿಯೊಂದಿಗೆ ಪ್ರೇಮದ ಅಲೆಯಲ್ಲಿ ತೇಲಾಡಿದೆ.
3/ 5
ತಮ್ಮ ಜೋಡಿಯೊಂದಿಗೆ ಕಾಲ ಕಳೆಯುವ ಈ ಹಕ್ಕಿಗಳಿಗೆ ಹೃದಯದಾಕಾರ ಕಾಗದಗಳನ್ನು ನೀಡಲಾಗಿತ್ತು. ಈ ಪ್ರೇಮ ಕಾಣಿಕೆಯನ್ನು ತನ್ನ ಜೋಡಿಹಕ್ಕಿಯೊಂದಿಗೆ ಹಂಚಿಕೊಂಡು ಆಫ್ರಿಕನ್ ಪೆಂಗ್ವಿನ್ಗಳು ವಿಶೇಷವಾಗಿ ಪ್ರೇಮಿಗಳ ದಿನವನ್ನು ಆಚರಿಸಿದೆ.
4/ 5
ಅಪರೂಪ ಎಂಬತಿರುವ ಆಫ್ರಿಕನ್ ಪೆಂಗ್ವಿನ್ಗಳು ಅಪಾಯದ ಅಂಚಿನಲ್ಲಿರುವ ಪಕ್ಷಿಗಳು. ಇವುಗಳ ಉಳಿವಿಗಾಗಿ ಈಗ ಅಪಾರ ಕಾಳಜಿವಹಿಸಲಾಗುತ್ತಿದೆ.
5/ 5
ಸದ್ಯ ಪೆಂಗ್ವಿನ್ಗಳ ಪ್ರೇಮ ಕಹಾನಿಯ ಚಿತ್ರಗಳು ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಪ್ರೀತಿ ಪ್ರೇಮವಿಲ್ಲದಿದ್ದರೆ ಜೀವನವೇ ಬರಡು ಎಂಬುದನ್ನು ಪ್ರೇಮಿಗಳ ದಿನದಂದು ಈ ಪಕ್ಷಿಗಳು ನಿರೂಪಿಸಿದಂತಿದೆ.