Pre-Wed Shoot: ಪ್ರೀ ವೆಡ್ ಫೋಟೋಶೂಟ್ಗೆ ಈ 6 ರೋಮ್ಯಾಂಟಿಕ್ ಸ್ಥಳಗಳೇ ಬೆಸ್ಟ್
Pre-Wedding Shoot: ಇತ್ತೀಚಿಗೆ ಪ್ರೀ ವೆಡ್ಡಿಂಗ್ ಶೂಟ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮದುವೆ ಮುನ್ನ ಫೋಟೋ ಶೂಟ್ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಫೋಟೋಶೂಟ್ಗಾಗಿ ಜನರು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಫೋಟೋಶೂಟ್ಗೆ ಯಾವ ಸ್ಥಳಗಳು ಬೆಸ್ಟ್ ಅನ್ನೋದನ್ನು ತಿಳಿದುಕೊಳ್ಳಿ
ಮದುವೆಯ ಸೀಸನ್ನಲ್ಲಿ ಪ್ರಿ-ವೆಡ್ಡಿಂಗ್ ಶೂಟ್ಗೆ ನೀವು ಉತ್ತಮ ಸ್ಥಳವನ್ನು ಹುಡುಕುತ್ತಿದ್ದೀರಾ ಹಾಗಾದ್ರೆ ವಾರಣಾಸಿ ನಿಮಗೆ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಪ್ರೀ ವೆಡ್ಡಿಂಗ್ ಶೂಟ್ಗಾಗಿ ಸ್ಥಳೀಯ ಜೋಡಿಗಳು ಮಾತ್ರವಲ್ಲದೆ ದೇಶದ ವಿವಿಧ ರಾಜ್ಯಗಳಿಂದಲೂ ಜನರು ವಾರಣಾಸಿಗೆ ಆಗಮಿಸುತ್ತಾರೆ.
2/ 7
ಗಂಗಾ ನದಿಯುದ್ದಕ್ಕೂ ಮರಳಿನ ರಾಶಿ ಇದ್ದು ಈ ಐತಿಹಾಸಿಕ ಘಾಟ್ ಗಳು ಫೋಟೋಶೂಟ್ಗೆ ಬೆಸ್ಟ್ ಜಾಗವಾಗಿದೆ, ದೆಹಲಿ, ಲಕ್ನೋ, ನೋಯ್ಡಾ, ಗಾಜಿಯಾಬಾದ್, ಬೆಂಗಳೂರು ಇತರ ಸ್ಥಳಗಳು ಸಹ ಫೋಟೋಶೂಟ್ ಉತ್ತಮ ಅಯ್ಕೆಯಾಗಿದೆ.
3/ 7
ದಶಾಶ್ವಮೇಘ ಘಾಟ್ ನಲ್ಲಿ ಸಂಪ್ರದಾಯವಾಗಿ ಫೋಟೋಶೂಟ್ ಮಾಡಿಸಲು ಬಯಸುವವರು ಸಂಜೆ ಗಂಗಾ ಆರತಿ ಟೈಮ್ ನಲ್ಲಿ ಫೋಟೋಶೂಟ್ ಮಾಡಿಸಿ. ಗಂಗಾ ಆರತಿ ಸಮಯದಲ್ಲಿ ಬೋಟ್ ನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಗೆ ಭಾರೀ ಡಿಮ್ಯಾಂಡ್ ಇದೆ. ಇಲ್ಲಿ ನಿಮಗೆ ವಿವಿಧ ರೀತಿಯ ಪ್ಯಾಕೇಜ್ ದೊರೆಯುತ್ತದೆ.
4/ 7
ನೀವು ಕ್ಲಾಸಿಕ್ ಶೂಟ್ ಮಾಡಿಸಲು ಬಯಸಿದರೆ ಈ ಸ್ಥಳವು ನಿಮಗೆ ಉತ್ತಮವಾಗಿದೆ. ಲಲಿತಾ ಘಾಟ್ನ ನೇಪಾಳಿ ದೇವಾಲಯವೂ ಬಹಳ ಜನಪ್ರಿಯವಾಗಿದೆ. ದೇವಾಲಯದ ಗತಕಾಲದ ಕೆತ್ತನೆಗಳು ನಿಮ್ಮ ಫೋಟೋಶೂಟ್ ನನ್ನು ಮತ್ತಷ್ಟು ಅಂದವಾಗಿಸುತ್ತದೆ. ಇಲ್ಲಿ ಫೋಟೋಶೂಟ್ ಮಾಡಲು ಜನರು ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತಾರೆ.
5/ 7
ಚುಮುಚುಮು ಚಳಿಯಲ್ಲಿ ಗಂಗಾನದಿಯ ಅಲೆಗಳಲ್ಲಿ ದೋಣಿಯ ಮೇಲೆ ಸುಂದರವಾದ ಸೈಬೀರಿಯನ್ ಪಕ್ಷಿಗಳ ಮಧ್ಯೆ ಫೋಟೋಶೂಟ್ ಮಾಡಿಸಿ ಸಖತ್ ಖುಷಿ ಕೊಡುತ್ತದೆ. ಇಲ್ಲಿಗೆ ಜನರು ಅನೇಕ ಸ್ಥಳಗಳಿಂದ ಬರ್ತಾರೆ.
6/ 7
ಬನಾರಸ್ನ ಚೆಟ್ಸಿಂಗ್ ಘಾಟ್; ಇಲ್ಲಿ ಅನೇಲ ಬಾಲಿವುಡ್ ಸಿನಿಮಾ ಶೂಟಿಂಗ್ ನಡೆದಿದ್ದು, ಫೋಟೋಶೂಟ್ಗೆ ಬೆಸ್ಟ್ ಪ್ಲೇಸ್ ಆಗಿದೆ. ಘಾಟ್ ನಲ್ಲಿ ಸಾಕಷ್ಟು ಮಂದಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸುತ್ತಾರೆ.
7/ 7
ಫೋಟೋಶೂಟ್ಗಾಗಿ ಜನರು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಮದುವೆಗೂ ಮುನ್ನ ಮಾಡಿಸೋ ಈ ಶೂಟ್ ಸಿಹಿ ನೆನಪುಗಳನ್ನು ಮನಸ್ಸಲ್ಲಿ ಉಳಿಯುವಂತೆ ಮಾಡುತ್ತದೆ.