ಅಧಿಕ ರಕ್ತದೊತ್ತಡಕ್ಕೆ ಕಾರಣ: ಆಹಾರದ ಮೇಲೆ ಉಪ್ಪನ್ನು ಸಿಂಪಡಿಸುವುದರಿಂದ ಅನೇಕ ರೋಗಗಳಿಗೆ ಕಾರಣವಾಗುತ್ತೆ. ಅಡುಗೆ ಮಾಡುವ ವೇಳೆ ಉಪ್ಪು ಹಾಕಿ ಬೇಯಿಸಿದಾಗ ಉಪ್ಪಿನಲ್ಲಿರುವ ಕಬ್ಬಿಣಾಂಶವು, ಸುಲಭವಾಗಿ ಜೀರ್ಣವಾಗುತ್ತದೆ. ಆದರೆ, ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಹಸಿ ಉಪ್ಪನ್ನು ಜೀರ್ಣಿಸಿಕೊಳ್ಳುವುದಿಲ್ಲ. ಇದು ಅಧಿಕ ರಕ್ತದೊತ್ತಡವನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಹೆಚ್ಚಾಗಿರುತ್ತೆ.
ಪ್ರತಿ ದಿನ ಒಂದೇ ಪ್ರಮಾಣದಲ್ಲಿ ಉಪ್ಪನ್ನು ಸೇವಿಸಿ: ಅಧಿಕ ಉಪ್ಪು ಸೇವನೆಯು ದೇಹಕ್ಕೆ ಹಾನಿಕಾರಕವಾಗಿರುತ್ತೆ ಜೊತೆಗೆ ಉಪ್ಪಿನ ಕೊರತೆಯು ದೇಹಕ್ಕೆ ಹಾನಿಕಾರಕವಾಗಿದೆ. ಇದು ಹಲವು ಅಧ್ಯಯನ ವರದಿಗಳಲ್ಲಿ ಸಾಬೀತಾಗಿದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಮತ್ತು ಆರೋಗ್ಯ ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಯು ದಿನಕ್ಕೆ ಕೇವಲ 2 ಚಮಚ ಉಪ್ಪನ್ನು ಸೇವಿಸಬೇಕು. ಹಾಗೆಯೇ ಅಧಿಕ ರಕ್ತದೊತ್ತಡ ಇರುವವರು ದಿನಕ್ಕೆ ಅರ್ಧ ಚಮಚದಷ್ಟು ಉಪ್ಪನ್ನು ಮಾತ್ರ ಸೇವಿಸಬೇಕು.
ಮೂಳೆಗಳು ದುರ್ಬಲವಾಗುತ್ತವೆ. ಆಹಾರದಲ್ಲಿ ಹಸಿ ಉಪ್ಪನ್ನು ಸೇವಿಸುವುದರಿಂದ ಮೂತ್ರಪಿಂಡದ ಕಲ್ಲು ಮತ್ತು ಆಸ್ಟಿಯೊಪೊರೋಸಿಸ್ನಂತಹ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು. ಉಪ್ಪಿನಲ್ಲಿ ಸೋಡಿಯಂ ಅಧಿಕವಾಗಿರುವುದು ಸಂಶೋಧನೆಯಿಂದ ತಿಳಿದುಬಂದಿದೆ. ಇದು ದೇಹದಲ್ಲಿನ ಕ್ಯಾಲ್ಸಿಯಂ ಪ್ರಮಾಣವನ್ನು ಸಹ ಕಡಿಮೆ ಮಾಡುತ್ತದೆ. ಇದು ಕ್ರಮೇಣ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.