Under Eye Care: ಕಣ್ಣುಗಳ ಕೆಳಗೆ ಚರ್ಮ ಕಪ್ಪಾಗಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ಕಣ್ಣುಗಳ ಕೆಳಗಿನ ಭಾಗದಲ್ಲಿ ಚರ್ಮವು ಸುಕ್ಕುಗಟ್ಟುವುದು ಮತ್ತು ಕಪ್ಪಾಗುವುದನ್ನು ತೊಡೆದು ಹಾಕಲು ಸರಿಯಾಗಿ ಆರೈಕೆ ಮಾಡುವುದು ಮುಖ್ಯ. ಇದು ಅಕಾಲಿಕ ವಯಸ್ಸಾಗುವಿಕೆ ಲಕ್ಷಣಗಳನ್ನು ತಡೆಯುತ್ತದೆ. ಇಲ್ಲಿ ನಾವು ಕಣ್ಣುಗಳ ಕೆಳಗಿನ ಭಾಗವು ಕಪ್ಪಾಗದಂತೆ ತಡೆಯುವುದು ಹೇಗೆ ಅಂತಾ ನೋಡೋಣ.

First published:

  • 18

    Under Eye Care: ಕಣ್ಣುಗಳ ಕೆಳಗೆ ಚರ್ಮ ಕಪ್ಪಾಗಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ವಯಸ್ಸಾದಂತೆ ಚರ್ಮದ ಸ್ಥಿತಿಸ್ಥಾಪಕತ್ವ ಕಡಿಮೆಯಾಗುತ್ತದೆ. ಚರ್ಮದ ಮೇಲೆ ಸುಕ್ಕುಗಳು ಕಾಣಿಸುತ್ತವೆ. ಜೆನೆಟಿಕ್ಸ್, ಸೂರ್ಯನ ಕಿರಣಗಳು, ಪರಿಸರ ಅಂಶಗಳು ಸುಕ್ಕು ಹೆಚ್ಚಾಗುವಂತೆ ಮಾಡುತ್ತವೆ. ಕಣ್ಣುಗಳ ಕೆಳಗಿನ ಭಾಗವು ಕಪ್ಪಾಗುತ್ತದೆ. ಮತ್ತು ಚರ್ಮವು ತೆಳುವಾಗುತ್ತದೆ. ಕಣ್ಣುಗಳ ಕೆಳಗೆ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳು ಕಾಣಿಸುವುದು ವಯಸ್ಸಾಗುವಿಕೆಯ ಸಂಕೇತವಾಗಿದೆ.

    MORE
    GALLERIES

  • 28

    Under Eye Care: ಕಣ್ಣುಗಳ ಕೆಳಗೆ ಚರ್ಮ ಕಪ್ಪಾಗಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ಯುವಿ ವಿಕಿರಣ, ವಯಸ್ಸಾಗುವಿಕೆ, ನಿರ್ಜಲೀಕರಣ, ಧೂಮಪಾನ, ಮಲಗುವ ಅಭ್ಯಾಸ ಸರಿಯಾಗಿರದಿರುವುದು, ನಿದ್ರೆಯ ಕೊರತೆ, ಅತಿಯಾದ ಮದ್ಯಪಾನ, ಕಣ್ಣುಗಳನ್ನು ಉಜ್ಜುವುದು, ಕೆಟ್ಟ ಆಹಾರ ಪದ್ಧತಿ, ಹೆಚ್ಚು ಒತ್ತಡದ ಸ್ಥಿತಿಯು ಕಣ್ಣುಗಳ ಕೆಳಗೆ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳು ಕಾಣಿಸಲು ಕಾರಣವಾಗಿದೆ.

    MORE
    GALLERIES

  • 38

    Under Eye Care: ಕಣ್ಣುಗಳ ಕೆಳಗೆ ಚರ್ಮ ಕಪ್ಪಾಗಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ಹಾಗಾಗಿ ಕಣ್ಣುಗಳ ಕೆಳಗಿನ ಭಾಗದಲ್ಲಿ ಚರ್ಮವು ಸುಕ್ಕುಗಟ್ಟುವುದು ಮತ್ತು ಕಪ್ಪಾಗುವುದನ್ನು ತೊಡೆದು ಹಾಕಲು ಸರಿಯಾಗಿ ಆರೈಕೆ ಮಾಡುವುದು ಮುಖ್ಯ. ಇದು ಅಕಾಲಿಕ ವಯಸ್ಸಾಗುವಿಕೆ ಲಕ್ಷಣಗಳನ್ನು ತಡೆಯುತ್ತದೆ. ಇಲ್ಲಿ ನಾವು ಕಣ್ಣುಗಳ ಕೆಳಗಿನ ಭಾಗವು ಕಪ್ಪಾಗದಂತೆ ತಡೆಯುವುದು ಹೇಗೆ ಅಂತಾ ನೋಡೋಣ.

    MORE
    GALLERIES

  • 48

    Under Eye Care: ಕಣ್ಣುಗಳ ಕೆಳಗೆ ಚರ್ಮ ಕಪ್ಪಾಗಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ಹೊರಗೆ ಹೋಗುವ ಮೊದಲು ಸನ್‌ಸ್ಕ್ರೀನ್ ಹಚ್ಚುವುದು. ಇದು ಕಣ್ಣುಗಳ ಕೆಳಗೆ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕು ತಪ್ಪಿಸಲು ಸಹಕಾರಿ. ಚರ್ಮದ ಮೇಲೆ ಕನಿಷ್ಠ 30 ಎಸ್‌ಪಿ ಸನ್‌ಸ್ಕ್ರೀನ್ ಹಚ್ಚಿರಿ. ಸನ್‌ಸ್ಕ್ರೀನ್ ಸೂರ್ಯನ ಹಾನಿಕಾರಕ ಕಿರಣಗಳು ಮತ್ತು ಸ್ವತಂತ್ರ ರಾಡಿಕಲ್‌ ಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಸೂಕ್ಷ್ಮ ರೇಖೆಗಳು ಮತ್ತು ಸುಕ್ಕು ತಡೆಯುತ್ತದೆ.

    MORE
    GALLERIES

  • 58

    Under Eye Care: ಕಣ್ಣುಗಳ ಕೆಳಗೆ ಚರ್ಮ ಕಪ್ಪಾಗಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ವಿಟಮಿನ್ ಸಿ ಸಮೃದ್ಧ ಆಹಾರ ಸೇವನೆ ಮಾಡಿ. ಕಣ್ಣುಗಳ ಕೆಳಗೆ ವಿಟಮಿನ್ ಸಿ ಸೀರಮ್ ಮತ್ತು ಕ್ರೀಮ್ ಹಚ್ಚಿರಿ. ಇದು ಚರ್ಮವನ್ನು ಹೈಡ್ರೀಕರಿಸುತ್ತದೆ. ಹಾಗೂ ರೇಖೆಗಳು ಮತ್ತು ಸುಕ್ಕುಗಳ ಸಮಸ್ಯೆ ಕಡಿಮೆ ಮಾಡುತ್ತದೆ. ವಿಟಮಿನ್ ಸಿ ಚರ್ಮದಲ್ಲಿ ತೇವಾಂಶ ಇರಿಸುತ್ತದೆ. ಕಾಲಜನ್ ಉತ್ಪಾದನೆಗೆ ಉತ್ತೇಜಿಸುತ್ತದೆ. ಇದು ವಯಸ್ಸಾಗುವಿಕೆ ಪ್ರಕ್ರಿಯೆ ನಿಧಾನಗೊಳಿಸುತ್ತದೆ.

    MORE
    GALLERIES

  • 68

    Under Eye Care: ಕಣ್ಣುಗಳ ಕೆಳಗೆ ಚರ್ಮ ಕಪ್ಪಾಗಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ಮುಖದ ವ್ಯಾಯಾಮ ಮಾಡಿ. ಇದು ಕಣ್ಣುಗಳ ಕೆಳಗಿರುವ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ತೊಡೆದು ಹಾಕಲು ಸಹಕಾರಿ. ನಿಯಮಿತವಾಗಿ ಮುಖದ ವ್ಯಾಯಾಮ ಮಾಡುವುದು ಚರ್ಮಕ್ಕೆ ರಕ್ತದ ಹರಿವು ಹೆಚ್ಚಿಸುತ್ತದೆ. ಚರ್ಮಕ್ಕೆ ಸಾಕಷ್ಟು ಪ್ರಮಾಣದ ಆಮ್ಲಜನಕ ಮತ್ತು ಪೋಷಕಾಂಶ ಒದಗಿಸುತ್ತದೆ. ಕಣ್ಣುಗಳ ಕೆಳಗೆ ಸ್ನಾಯುಗಳನ್ನು ಆರೋಗ್ಯವಾಗಿರಿಸುತ್ತದೆ.

    MORE
    GALLERIES

  • 78

    Under Eye Care: ಕಣ್ಣುಗಳ ಕೆಳಗೆ ಚರ್ಮ ಕಪ್ಪಾಗಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ರೆಟಿನಾಯ್ಡ್ . ಇದು ವಿಟಮಿನ್ ಎ ನಿಂದ ಪಡೆದ ವಯಸ್ಸಾದ ವಿರೋಧಿ ಅಂಶ. ಇದು ಚರ್ಮದ ಮೇಲೆ ಕಂಡುಬರುವ ವಯಸ್ಸಾಗುವಿಕೆ ಸಂಕೇತ ಕಡಿಮೆ ಮಾಡುತ್ತದೆ. ಸುಕ್ಕುಗಳು ಮತ್ತು ಸೂಕ್ಷ್ಮ ರೇಖೆಗಳನ್ನು ತೆಗೆದು ಹಾಕುತ್ತದೆ. ರೆಟಿನಾಯ್ಡ್ಗಳು ಚರ್ಮದಲ್ಲಿ ಕಾಲಜನ್ ಉತ್ಪಾದನೆ ಹೆಚ್ಚಿಸುತ್ತದೆ.

    MORE
    GALLERIES

  • 88

    Under Eye Care: ಕಣ್ಣುಗಳ ಕೆಳಗೆ ಚರ್ಮ ಕಪ್ಪಾಗಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

    ಮನೆಮದ್ದುಗಳನ್ನು ಟ್ರೈ ಮಾಡಿ. ಚರ್ಮದ ಮೇಲೆ ಗೋಚರಿಸುವ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳ ಸಮಸ್ಯೆ ಕಡಿಮೆ ಮಾಡಲು ಅಲೋವೆರಾ ಜೆಲ್ ಹಚ್ಚಿರಿ. ಕಣ್ಣುಗಳ ಕೆಳಗೆ ಸುಕ್ಕುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಚರ್ಮಕ್ಕೆ ಸಾಕಷ್ಟು ಜಲಸಂಚಯನ ಒದಗಿಸುತ್ತದೆ. ಕಾಫಿ, ಜೇನುತುಪ್ಪ, ಕಡಲೆ ಹಿಟ್ಟು ಪ್ಯಾಕ್ ಹಾಕಿರಿ.

    MORE
    GALLERIES