Ugadi 2023: ಯುಗಾದಿ ಹಬ್ಬದ ದಿನ ಎಣ್ಣೆ ಸ್ನಾನ ಮಾಡೋದು ಏಕೆ? ನಿಮಗೆ ಗೊತ್ತಿರದ ವಿಷಯ ಇಲ್ಲಿದೆ
Ugadi 2023: ನಾಳೆ ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬ. ಎಲ್ಲೆಡೆ ಜನರು ಸಂಭ್ರಮದಿಂದ ಹಬ್ಬದ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಯುಗಾದಿ ಹಬ್ಬವನ್ನು ಹಿಂದೂಗಳು ವಿಶೇಷವಾಗಿ ಆಚರಿಸುತ್ತಾರೆ. ಅಂದರೆ ಎಣ್ಣೆ ಮಜ್ಜನ ಈ ಹಬ್ಬದ ವಿಶೇಷತೆ. ಯುಗಾದಿ ಹಬ್ಬದ ದಿನ ಜನರು ಎಣ್ಣೆ ಸ್ನಾನ ಮಾಡುವುದು ವಾಡಿಕೆ. ಇದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಹಾಗಿದ್ರೆ ಹಬ್ಬದ ದಿನ ಈ ಎಣ್ಣೆ ಸ್ನಾನ ಮಾಡುವುದು ಏಕೆ? ನಮ್ಮ ಪೂರ್ವಜರು ಏನೇ ಸಂಪ್ರದಾಯ ಮುಂದುವರೆಸಿಕೊಂಡು ಬಂದರೂ ಸಹ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣವಿರುತ್ತದೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ.
ಯುಗಾದಿ ಹಬ್ಬದ ಸಮಯದಲ್ಲಿ ಎಲ್ಲೆಡೆ ಮರಗಳು ಚಿಗುರುತ್ತಿರುತ್ತವೆ. ವಸಂತ ಕಾಲದಲ್ಲಿ ಕೋಗಿಲೆಗಳ ನಿನಾದ ಕೇಳಿಸುತ್ತದೆ. ಎಲ್ಲರೂ ಹಬ್ಬಕ್ಕೆ ಹೊಸ ಬಟ್ಟೆ ಧರಿಸಿ ಕಂಗೊಳಿಸುತ್ತಾರೆ. ಹಿಂದೂಗಳು ಪ್ರತೀ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ.
2/ 7
ಆದರೆ ಯುಗಾದಿ ಹಬ್ಬದ ದಿನ ತಲೆ ಸ್ನಾನ ಮಾಡಬೇಕು ಎಂದು ಪೂರ್ವಜರು ಹೇಳುತ್ತಾರೆ. ಹಾಗಿದ್ರೆ ಹಬ್ಬದ ದಿನ ವಿಶೇಷವಾಗಿ ಎಣ್ಣೆ ಸ್ನಾನವನ್ನು ಏಕೆ ಮಾಡಬೇಕು ಎಂದು ಇಲ್ಲಿ ತಿಳಿಯೋಣ.
3/ 7
ಸಾಮಾನ್ಯವಾಗಿ ನಾವು ಪ್ರತಿದಿನ ಸ್ನಾನ ಮಾಡುತ್ತೇವೆ. ಆದರೆ ಯುಗಾದಿ ಹಬ್ಬದ ದಿನ ಎಣ್ಣೆ ಸ್ನಾನ ಮಾಡಬೇಕು.
4/ 7
ಯುಗಾದಿ ದಿನ ಸ್ನಾನ ಮಾಡುವ ಮುನ್ನ ದೇಹಕ್ಕೆ ಎಣ್ಣೆಯನ್ನು ಹಚ್ಚುತ್ತೇವೆ. ಇದು ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಪ್ರಜ್ಞೆಯನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ.
5/ 7
ಅಷ್ಟೇ ಅಲ್ಲದೇ, ದೇಹಕ್ಕೆ ಎಣ್ಣೆಯನ್ನು ಹಚ್ಚುವುದರಿಂದ ನಮ್ಮೊಳಗಿನ ಚೈತನ್ಯವನ್ನು ಹೆಚ್ಚಿಸುತ್ತದೆ. ಜೊತೆಗೆ ನಿಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ.
6/ 7
ಅಲ್ಲದೆ, ಎಣ್ಣೆಯುಕ್ತ ಚರ್ಮದ ಮೇಲೆ ಬೀಳುವ ಬಿಸಿನೀರು ದೇಹದ ಮೇಲೆ ರಕ್ಷಣಾತ್ಮಕ ಪದರವನ್ನು ಸೃಷ್ಟಿಸುತ್ತದೆ.
7/ 7
ಎಣ್ಣೆ ಹಚ್ಚಿ ಸ್ನಾನ ಮಾಡಿದರೆ ನಮ್ಮ ತ್ವಚೆ ಫ್ರೆಶ್ ಮತ್ತು ಮೃದುವಾಗಿರುತ್ತದೆ.
First published:
17