Necklace Designs: ದೀಪಾವಳಿ ಹಬ್ಬಕ್ಕೆ ಈ ಸ್ಟೈಲಿಶ್ ಡಿಸೈನ್ ನೆಕ್ಲೇಸ್ ಧರಿಸಿ ಮಿಂಚಿ
Types of Necklace Designs: ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಬಹು ಬೇಗ ಬದಲಾಗುತ್ತದೆ. ಆಭರಣ ವಿಚಾರದಲ್ಲಿ ಸಹ ಹಾಗೆಯೇ ಆಗುತ್ತದೆ. ಮಹಿಳೆಯರಿಗೆ ಸುಂದರವಾಗಿ ಕಾಣುವ ಆಸೆ ಇರುತ್ತದೆ. ಅದಕ್ಕೆ ಹಲವಾರು ಪ್ರಯತ್ನ ಮಾಡುತ್ತಾರೆ. ಸದ್ಯ ದೀಪಾವಳಿ ಹಬ್ಬ ಬಂದಿದೆ. ಹಬ್ಬದ ದಿನ ಚೆಂದ ಸಿಂಗಾರ ಮಾಡಿಕೊಂಡು ತಯಾರಾಗಲು ನಾವು ಕೆಲ ಟಿಪ್ಸ್ ಕೊಟ್ಟಿದ್ದು, ಆಭರಣ ಡಿಸೈನ್ ಸಹ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಬಹು ಬೇಗ ಬದಲಾಗುತ್ತದೆ. ಆಭರಣ ವಿಚಾರದಲ್ಲಿ ಸಹ ಹಾಗೆಯೇ ಆಗುತ್ತದೆ. ಮಹಿಳೆಯರಿಗೆ ಸುಂದರವಾಗಿ ಕಾಣುವ ಆಸೆ ಇರುತ್ತದೆ. ಅದಕ್ಕೆ ಹಲವಾರು ಪ್ರಯತ್ನ ಮಾಡುತ್ತಾರೆ. ಸದ್ಯ ದೀಪಾವಳಿ ಹಬ್ಬ ಬಂದಿದೆ. ಹಬ್ಬದ ದಿನ ಚೆಂದ ಸಿಂಗಾರ ಮಾಡಿಕೊಂಡು ತಯಾರಾಗಲು ನಾವು ಕೆಲ ಟಿಪ್ಸ್ ಕೊಟ್ಟಿದ್ದು, ಆಭರಣ ಡಿಸೈನ್ ಸಹ ಇಲ್ಲಿದೆ.
2/ 9
ಮನೆಯಲ್ಲಿ ಯಾವುದೇ ಹಬ್ಬಕ್ಕಾಗಲಿ, ವಿಶೇಷ ಸಂದರ್ಭಕ್ಕಾಗಲಿ ಹೆಂಗಸರೇ ಮೊದಲು ಅಲಂಕಾರ ಮಾಡುತ್ತಾರೆ. ಅವರ ಡ್ರೆಸ್, ಆಭರಣ, ಮೇಕಪ್ ನೋಡಲು ಎರಡು ಕಣ್ಣು ಸಾಲದು. ಅಲ್ಲಿ ಇಲ್ಲಿ ಓಡಿ ಆಡುವ ಹುಡುಗಿಯರಿಂದ ಶುರುವಾಗಿ ಎಲ್ಲರೂ ಮುದ್ದಾಗಿ ರೆಡಿಯಾಗಿರುತ್ತಾರೆ.
3/ 9
ಮಹಿಳೆಯರು ತಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸಲು ಕಾಲಕಾಲಕ್ಕೆ ಅವರ ಪರಿಕರಗಳನ್ನು ಟ್ರೆಂಡ್ಗೆ ತಕ್ಕಂತೆ ಬದಲಾಯಿಸುವುದು ಅವಶ್ಯಕ. ಟ್ರೆಂಡ್ ಗೆ ತಕ್ಕಂತೆ ನೆಕ್ಲೇಸ್ ಗಳನ್ನು ಖರೀದಿಸಿದರೆ ಯಾವುದೇ ಸಂದರ್ಭಕ್ಕೂ ಧರಿಸಬಹುದು.
4/ 9
ಕುಂದನ್ ನೆಕ್ಲೇಸ್ ಮೊಘಲರ ಅಲಂಕಾರಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಈ ಆಭರಣವು ಈಗ ಬಹಳ ಜನಪ್ರಿಯವಾಗಿದೆ. ಯಾವುದೇ ಬಟ್ಟೆಯ ಜೊತೆ ಇದನ್ನು ಧರಿಸಿದರೂ ಸೂಟ್ ಆಗುತ್ತದೆ. ಈ ಕುಂದನ್ ಜ್ಯುವೆಲ್ಲರಿ ಕ್ಲಾಸಿ ಆಗಿರುತ್ತದೆ. ಹಾಗಾಗಿ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಈ ರೀತಿಯ ದಪ್ಪನೆಯ ನೆಕ್ಲೇಸ್ ಅನ್ನು ಧರಿಸುವುದರಿಂದ ಸುಂದರವಾಗಿ ಕಾಣುತ್ತೀರಿ.
5/ 9
ಲಾಂಗ್ ಹರಾಮ್ ಮತ್ತು ನೆಕ್ಲೇಸ್ ಈ ಆಭರಣ ಸೆಟ್ ನಿಮ್ಮ ಬಳಿ ಇರಲೇಬೇಕು. ಇವು ದಕ್ಷಿಣ ಭಾರತದ ಸಾಂಪ್ರದಾಯಿಕ ಆಭರಣಗಳು. ಈ ಆಭರಣಗಳು ಸೀರೆ ಸೇರಿದಂತೆ ಇತರ ಬಟ್ಟೆಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಸಾಂಪ್ರದಾಯಿಕ ಲುಕ್ ನೀಡುತ್ತದೆ.
6/ 9
ಚೋಕರ್ ನೆಕ್ಲೇಸ್ ಚೋಕರ್ ನೆಕ್ಲೇಸ್ ಸಾಂಪ್ರದಾಯಿಕ ಆಭರಣದಂತೆ. ಅದನ್ನೇ ಇಂದಿನ ಶೈಲಿಯಲ್ಲಿ ವಿನ್ಯಾಸಗೊಳಿಸಿ, ಚೋಕರ್ ನೆಕ್ಲೇಸ್ ಎಂದು ಕರೆಯಲಾಗುತ್ತದೆ. ಇದನ್ನು ಸೆಮಿ ವೆಸ್ಟರ್ನ್ ವೇರ್ ಜೊತೆಯೂ ಧರಿಸಬಹುದು.
7/ 9
ಕಾಲರ್ ನೆಕ್ಲೇಸ್ ಕಾಲರ್ ನೆಕ್ಲೇಸ್ ಸ್ವಲ್ಪ ಹಳೆದು ಅನಿಸಿದರೂ ಮತ್ತೆ ಟ್ರೆಂಡ್ಗೆ ಬಂದಿದೆ. ಇದು ವೆಸ್ಟರ್ನ್, ಸಾಂಪ್ರದಾಯಿಕ ಮತ್ತು ಸೆಮಿ ವೆಸ್ಟರ್ನ್ ಬಟ್ಟೆಗಳ ಜೊತೆ ಸುಂದರವಾಗಿ ಕಾಣುತ್ತದೆ. ಕ್ಯಾಶುಯಲ್ ಔಟಿಂಗ್ಗಳಿಗೆ ಸಹ ಧರಿಸಬಹುದು
8/ 9
ಆಕ್ಸಿಡೈಸ್ಡ್ ನೆಕ್ಲೇಸ್ ಇದು ಇಂದಿನ ಆಧುನಿಕ ಮಹಿಳೆಯರ ಅತ್ಯಂತ ಫೇವರೇಟ್ ಆಭರಣವಾಗಿದೆ. ಇದನ್ನು ಯಾವುದೇ ಬಟ್ಟೆಯೊಂದಿಗೆ ಧರಿಸಬಹುದು. ನಿಮಗೆ ಸೂಪರ್ ಲುಕ್ ನೀಡುತ್ತದೆ.
9/ 9
ಮಲ್ಟಿ ಸ್ಟ್ರಿಂಗ್ ನೆಕ್ಲೇಸ್ ಹೆಚ್ಚು ಆಭರಣಗಳನ್ನು ಧರಿಸದೇ, ರಿಚ್ ಲುಕ್ ಪಡೆಯಲು ಈ ಒಂದು ಆಭರಣವನ್ನು ಧರಿಸಿ ಸಾಕು. ಇದು ಸಾಂಪ್ರದಾಯಿಕ ಆಭರಣ ಶೈಲಿಯೂ ಹೌದು. ಆದರೆ ಆಧುನಿಕ ಮಹಿಳೆಯರು ಹೆಚ್ಚು ಆದ್ಯತೆ ನೀಡುತ್ತಾರೆ.