Diabetes: ಇತ್ತೀಚಿನ ದಿನಗಳಲ್ಲಿ ಬಿಪಿ, ಶುಗರ್ ಇಲ್ಲದ ಮನೆಗಳನ್ನು ಹುಡುಕೋದು ಕಷ್ಟ. ಅಷ್ಟರಮಟ್ಟಿಗೆ ಈ 2 ಮಹಾಮಾರಿಗಳು ಜನರನ್ನು ಆವರಿಸಿಕೊಂಡುಬಿಟ್ಟಿವೆ. ಆಹಾರ ಕ್ರಮ, ಜೀವನ ಶೈಲಿಯಲ್ಲಿನ ಬದಲಾವಣೆಯೇ ಡಯಾಬಿಟಿಸ್/ಮಧುಮೇಹ ಹೆಚ್ಚಾಗಲು ಕಾರಣ ಎಂದು ಹೇಳಬಹುದು. ಆದರೆ ಮುನ್ನೆಚ್ಚರಿಕೆ ವಹಿಸಿದರೆ, ಸರಿಯಾದ ಆಹಾರ ಕ್ರಮ ಪಾಲಿಸಿದರೆ ಈ ಮಧುಮೇಹವನ್ನು ಕಂಟ್ರೋಲ್ ಮಾಡಬಹುದು. ತಜ್ಞರ ಪ್ರಕಾರ, ಬೆಳ್ಳುಳ್ಳಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಆದರೆ ಬೆಳ್ಳುಳ್ಳಿಯನ್ನು ಯಾವ ಪ್ರಮಾಣದಲ್ಲಿ, ಹೇಗೆ ಸೇವಿಸಬೇಕು ಎಂಬುದು ಮುಖ್ಯವಾಗುತ್ತದೆ. ಇಲ್ಲಿದೆ ಆ ಮಾಹಿತಿ.
ಪೌಷ್ಟಿಕಾಂಶ ಗಳ ಆಗರ ಬೆಳ್ಳುಳ್ಳಿ- ಡಾ.ಪಾಖಿ ಅವರ ಪ್ರಕಾರ, ಬೆಳ್ಳುಳ್ಳಿಯಲ್ಲಿ ಕಾರ್ಬೋಹೈಡ್ರೇಟ್ಗಳು, ಕೊಬ್ಬುಗಳು, ಪ್ರೋಟೀನ್ಗಳು, ವಿಟಮಿನ್ಗಳು ಮತ್ತು ಖನಿಜಗಳು, ವಿಟಮಿನ್ ಬಿ1, ವಿಟಮಿನ್ ಬಿ2, ವಿಟಮಿನ್ ಬಿ3, ವಿಟಮಿನ್ ಬಿ5, ವಿಟಮಿನ್ ಬಿ6, ವಿಟಮಿನ್ ಬಿ9, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಮ್ಯಾಂಗನೀಸ್, ರಂಜಕ, ಪೋಷಕಾಂಶಗಳಿವೆ. ಪೊಟ್ಯಾಸಿಯಮ್, ಸೋಡಿಯಂ, ಸತು, ಸೆಲೆನಿಯಮ್ನ್ನೂ ಸಹ ಹೊಂದಿರುತ್ತದೆ.
ಬೆಳ್ಳುಳ್ಳಿಯಲ್ಲಿ ಸತು ಮತ್ತು ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಕಾರ್ಬೋಹೈಡ್ರೇಟ್ಗಳು ತಕ್ಷಣದ ಚಯಾಪಚಯ ವರ್ಧಕವನ್ನು ಉಂಟುಮಾಡುತ್ತವೆ. ಕಾರ್ಬೋಹೈಡ್ರೇಟ್ಗಳು ನೇರವಾಗಿ ರಕ್ತದಲ್ಲಿನ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗುತ್ತವೆ ಮತ್ತು ಬೆಳ್ಳುಳ್ಳಿಯನ್ನು ತಿನ್ನುವುದು ಅದನ್ನು ನಿಯಂತ್ರಿಸಲು ಸಹಾಯಕವಾಗಿದೆ.