ಸಾಮಾನ್ಯವಾಗಿ ಉದ್ದ ಕೂದಲನ್ನು ಹೊಂದಿರುವ ಅನೇಕ ಮಂದಿ ಮಲಗುವ ಮುನ್ನ ತಮ್ಮ ಕೂದಲನ್ನು ಕಟ್ಟಿಕೊಂಡು ಮಲಗುತ್ತಾರೆ. ದಿನವಿಡೀ ಕೂದಲನ್ನು ಫ್ರೀ ಆಗಿಯೇ ಬಿಟ್ಟಿದ್ದರೂ ಕೂಡ, ಮಲಗುವ ಮುನ್ನ ಮಾತ್ರ ಕೂದಲನ್ನು ಕಟ್ಟಿಕೊಳ್ಳುವ ಅಭ್ಯಾಸ ಅನೇಕ ಮಂದಿಗಿದೆ. ಇದು ಉತ್ತಮ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ನಿದ್ರೆಯ ಸಮಯದಲ್ಲಿ ಅಸ್ವಸ್ಥತೆ ಕೂಡ ಕಡಿಮೆಯಾಗುತ್ತದೆ ಎನ್ನಲಾಗುತ್ತದೆ. ಆದರೆ ನಿಜಕ್ಕೂ ಈ ಅಭ್ಯಾಸ ಒಳ್ಳೆಯದಾ?