ಅನೇಕ ಜನರು ಬೇಸಿಗೆಯಲ್ಲಿ ಹೆಚ್ಚು ಬೆವರುತ್ತಾರೆ. ಹೆಚ್ಚು ಬೆವರಿದಾಗ ಧೂಳು ಮತ್ತು ಇತರ ಕಲ್ಮಶಗಳು ಚರ್ಮಕ್ಕೆ ಅಂಟಿಕೊಳ್ಳುತ್ತವೆ. ಇದು ಮುಖದ ಮೇಲೆ ಮೊಡವೆಗಳನ್ನು ಉಂಟುಮಾಡುತ್ತದೆ. ಆದರೆ ಚರ್ಮದ ಆರೈಕೆಗಾಗಿ ಮನೆಯಲ್ಲಿ ತಯಾರಿಸಿದ ಫೇಸ್ ಪ್ಯಾಕ್ ಎಣ್ಣೆಯುಕ್ತ ಚರ್ಮವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಕೆಲವು ಫೇಸ್ ಪ್ಯಾಕ್‌ಗಳು ಎಣ್ಣೆಯುಕ್ತ ಚರ್ಮದ ಚಿಕಿತ್ಸೆಯಲ್ಲಿ ಬಹಳಷ್ಟು ಸಹಕಾರಿಯಾಗಿದೆ.
ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್. ಮುಲ್ತಾನಿ ಮಿಟ್ಟಿ ಎಲ್ಲ ಹುಡುಗಿಯರಿಗೂ ಗೊತ್ತು. ಮುಲ್ತಾನಿ ಮಿಟ್ಟಿ ಜೊತೆಗೆ ರೋಸ್ ವಾಟರ್ ತೆಗೆದುಕೊಳ್ಳಿ. ಒಂದು ಬಟ್ಟಲಿನಲ್ಲಿ ಒಂದು ಚಮಚ ಮುಲ್ತಾನಿ ಮಿಟ್ಟಿಗೆ 2 ಚಮಚ ರೋಸ್ ವಾಟರ್ ಮಿಶ್ರಣ ಮಾಡಿ. ಚರ್ಮ ಮತ್ತು ಕುತ್ತಿಗೆ ಪ್ರದೇಶಕ್ಕೆ ನಂತರ ಅನ್ವಯಿಸಿ. ಒಣಗಿದ ನಂತರ, ಸಾಮಾನ್ಯ ನೀರಿನಿಂದ ತೊಳೆಯಿರಿ. ಈ ಫೇಸ್ ಪ್ಯಾಕ್ ಅನ್ನು ವಾರಕ್ಕೆ ಎರಡು ಬಾರಿ ಹಚ್ಚುವುದರಿಂದ ಮುಖದಲ್ಲಿರುವಂತಹ ಪಿಂಪಲ್ ಅನ್ನು ಕಡಿಮೆ ಮಾಡಬಹುದು.
ಅಲೋವೆರಾ ಫೇಸ್ ಮಾಸ್ಕ್: ಅಲೋವೆರಾ ಫೇಸ್ ಮಾಸ್ಕ್ ಮಾಡಲು ಮೊದಲಿಗೆ ಅಲೋವೆರಾ ಜೆಲ್, ಅರ್ಧ ಚಮಚ ಅರಿಶಿನ ಪುಡಿಯನ್ನು ಒಂದು ಬಟ್ಟಲಿನಲ್ಲಿ ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಚರ್ಮದ ಮೇಲೆ ಅದನ್ನು ಅನ್ವಯಿಸಿ. 7 ನಿಮಿಷಗಳ ನಂತರ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದರಿಂದ ಮುಖದಲ್ಲಿರುವ ಮೊಡವೆಯನ್ನು ಇದು ಹೋಗಲಾಡಿಸುತ್ತದೆ.