Weight Loss Tips: ಈ ಕಲರ್ ಕಲರ್ ತರಕಾರಿಗಳು ನಿಮ್ಮ ತೂಕ ಕಡಿಮೆ ಮಾಡುತ್ತವೆ
Colorful Vegetables For Weight Loss: ಸಾಮಾನ್ಯ ತರಕಾರಿಗಳಂತೆ, ಬಣ್ಣಬಣ್ಣದ ತರಕಾರಿಗಳು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮುಖ್ಯವಾಗಿ ನಿಮ್ಮ ತೂಕ ಇಳಿಸಲು. ಯಾವ ಬಣ್ಣದ ತರಕಾರಿ ನಿಮಗೆ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.
ತೂಕ ಇಳಿಸಲು ಜನ ಏನೂ ಬೇಕಾದರೂ ಮಾಡಲು ಸಿದ್ದರಿದ್ದಾರೆ. ಡಯೆಟ್, ವ್ಯಾಯಾಮ ಹೀಗೆ. ಆದರೆ ನಾವು ಮರೆಯುವ ಒಂದು ವಿಚಾರ ಎಂದರೆ ಪ್ರತಿನಿತ್ಯ ಸೇವಿಸುವ ತರಕಾರಿಗಳು ಸಹ ನಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ ಎಂಬುದು.
2/ 8
ಸಾಮಾನ್ಯ ತರಕಾರಿಗಳಂತೆ, ಬಣ್ಣಬಣ್ಣದ ತರಕಾರಿಗಳು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮುಖ್ಯವಾಗಿ ನಿಮ್ಮ ತೂಕ ಇಳಿಸಲು. ಯಾವ ಬಣ್ಣದ ತರಕಾರಿ ನಿಮಗೆ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.
3/ 8
ಈ ವರ್ಣರಂಜಿತ ತರಕಾರಿಗಳನ್ನು ಅವುಗಳ ಪ್ರಯೋಜನಗಳ ಕಾರಣದಿಂದಾಗಿ ಸೂಪರ್ ಫುಡ್ಎಂದು ಕರೆಯಲಾಗುತ್ತದೆ. ಈ ತರಕಾರಿಗಳು ಪೌಷ್ಟಿಕಾಂಶದ ಶಕ್ತಿ ಕೇಂದ್ರಗಳಾಗಿವೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ತರಕಾರಿಗಳು ತುಂಬಾ ಪ್ರಯೋಜನಕಾರಿ.
4/ 8
ಕಪ್ಪು ಬೆಳ್ಳುಳ್ಳಿ ಕಪ್ಪು ಬೆಳ್ಳುಳ್ಳಿ ತಾಜಾ ಬಿಳಿ ಬೆಳ್ಳುಳ್ಳಿಗಿಂತ ಕಡಿಮೆ ಖಾರವಿರುತ್ತದೆ. ಈ ಬೆಳ್ಳುಳ್ಳಿ ಅಲರ್ಜಿ, ಮಧುಮೇಹ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅದೇ ಸಮಯದಲ್ಲಿ, ಈ ಬೆಳ್ಳುಳ್ಳಿ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ತೂಕ ಇಳಿಸಲು ಸಹಾಯ ಮಾಡುತ್ತದೆ.
5/ 8
ಸಿಹಿಕುಂಬಳ ಅಥವಾ ಚೀನೀಕಾಯಿ ಇದು ಪಿಷ್ಟರಹಿತ ತರಕಾರಿ ಎನ್ನಬಹುದು. ಇದರಲ್ಲಿ ವಿಟಮಿನ್ ಸಿ ಮತ್ತು ಬಿ6, ಮ್ಯಾಂಗನೀಸ್, ಪೊಟ್ಯಾಸಿಯಮ್ ಮತ್ತು ಪಿರಿಡಾಕ್ಸಿನ್ ಸಮೃದ್ಧವಾಗಿದೆ. ಇದರಲ್ಲಿ ಫೈಬರ್ ಸಹ ಸಮೃದ್ಧವಾಗಿದ್ದು, ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
6/ 8
ಕಪ್ಪು ಕ್ಯಾರೆಟ್ ಕಪ್ಪು ಕ್ಯಾರೆಟ್ ಆಂಥೋಸಯಾನಿನ್ಗಳ ಅತ್ಯುತ್ತಮ ಮೂಲವಾಗಿದೆ. ಇದು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸತುವುಗಳಂತಹ ಖನಿಜಗಳಲ್ಲಿ ಸಮೃದ್ಧವಾಗಿದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಿಂದ ದೇಹವನ್ನು ವಿವಿಧ ಕ್ಯಾನ್ಸರ್ಗಳಿಂದ ರಕ್ಷಿಸಲು ಇದು ಪ್ರಯೋಜನಕಾರಿಯಾಗಿದೆ
7/ 8
ಪರ್ಪಲ್ ಟೊಮ್ಯಾಟೋ ಇದು ಟೊಮ್ಯಾಟೋ ತರಹದ ರುಚಿಯನ್ನು ಹೊಂದಿರುತ್ತದೆ ಮತ್ತು ಕೆಂಪು ಟೊಮ್ಯಾಟೋಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಈ ಟೊಮ್ಯಾಟೋಗಳು ಆಂಥೋಸಯಾನಿನ್ಗಳು ಮತ್ತು ಆಂಟಿಆಕ್ಸಿಡೆಂಟ್ಗಳಲ್ಲಿ ಸಮೃದ್ಧವಾಗಿವೆ
8/ 8
ನೇರಳೆ ಹೂಕೋಸು ಈ ಹೂಕೋಸು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ ಮತ್ತು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಆಂಥೋಸಯಾನಿನ್ಗಳಲ್ಲಿ ಸಮೃದ್ಧವಾಗಿದೆ ಮತ್ತು ಹೃದಯರಕ್ತನಾಳದ ಕಾಯಿಲೆ, ಮಾರಣಾಂತಿಕ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.