ನೀವು ವಿದೇಶಕ್ಕೆ ಪ್ರವಾಸ ಮಾಡಬೇಕು ಅಂದುಕೊಂಡರೆ ಅಂಟಾರ್ಕ್ಟಿಕಾಗೆ ಪ್ರಯಾಣ ಮಾಡಬಹುದು. ನೀವು ಅಷ್ಟು ಶ್ರೀಮಂತರಾಗಿದ್ದರೆ ಮಾತ್ರ ಈ ದೇಶಕ್ಕೆ ಕಾಲಿಡಲು ಸಾಧ್ಯ. ಯಾಕಂದ್ರೆ ಈ ಪ್ರವಾಸಕ್ಕೆ ತಗುಲುವ ಬರೋಬ್ಬರಿ ವೆಚ್ಚ ಒಬ್ಬ ವ್ಯಕ್ತಿಗೆ 14 ಲಕ್ಷ. ನೀವೇನಾದರು ಪ್ರಯಾಣ ಆರಂಭಿಸಬೇಕು ಎಂದರೆ ವಿಮಾನದಲ್ಲಿ ಪ್ರಯಾಣ ಮಾಡುವುದಕ್ಕಿಂತ ಹಡಗಿನಲ್ಲಿ ಪ್ರಯಾಣ ಮಾಡುವುದೇ ಬೆಸ್ಟ್.
ಅಂಟಾರ್ಕ್ಟಿಕಾಗೆ ತಲುಪಲು ನೀವು ಹಿಮನದಿಗಳ ಮೇಲೆ ಪ್ರಯಾಣ ಮಾಡಬೇಕಾಗುತ್ತದೆ. ವಿಮಾನದಲ್ಲಿ ಪ್ರಯಾಣ ಮಾಡಲು ಬಯಸುವುದಾದರೆ ನೀವು ಮೂರು ನಿಲ್ದಾಣಗಳಿಗೆ ಭೇಟಿ ನೀಡಬೇಕಾಗುತ್ತದೆ ಅಂದರೆ ನೀವು ಮೊದಲು ವಿಮಾನ ಹತ್ತುವ ನಿಲ್ದಾಣ ನಂತರ ಸ್ಯಾಂಟಿಯಾಗೊ (ಚಿಲಿ) ಅಥವಾ ಬ್ಯೂನಸ್ ಐರಿಸ್ (ಅರ್ಜೆಂಟೈನಾ) ಗೆ ಭೇಟಿ ನೀಡಬೇಕಾಗುತ್ತದೆ. ಇದು ವಿಶ್ವದ ಅತ್ಯಂತ ದುಬಾರಿ ಪ್ರವಾಸಗಳಲ್ಲಿ ಒಂದಾಗಿದೆ. ವಿಮಾನದಲ್ಲಿ ಹೊರಟರೆ ನೀವು ಯುರೋಪಿನಲ್ಲಿ ಒಮ್ಮೆ ಉಳಿದುಕೊಳ್ಳಬೇಕಾಗುತ್ತದೆ.
ಪ್ರಯಾಣಕ್ಕೆ ವಿಮಾನಕ್ಕಿಂತ ಹಡಗೇ ಬೆಸ್ಟ್ ಆದರೆ ಐಶಾರಾಮಿ ಹಡಗಿನಲ್ಲಿ ಪ್ರಯಾಣಿಸುವುದರಲ್ಲಿರುವ ಸುಖ ಯಾವುದರಲ್ಲೂ ಇಲ್ಲ. ನೀವು ವಿಮಾನದಲ್ಲಿ ಪ್ರಯಾಣ ಮಾಡುವುದಕ್ಕಿಂತ ಹಡಗಿನಲ್ಲಿ ಪ್ರಯಾಣ ಮಾಡುವುದೇ ಹೆಚ್ಚು ಸುಲಭ. ಹಡಗಿನಲ್ಲಿ ವಸತಿಯಿಂದ ಹಿಡಿದು ಊಟದವರೆಗೆ ಎಲ್ಲಾ ವ್ಯವಸ್ಥೆಗಳೂ ಲಭ್ಯವಿರುತ್ತದೆ. ಹಡಗನ್ನು ಆಯ್ಕೆ ಮಾಡುವಾಗ ಮಾತ್ರ ನೀವು ತುಂಬಾ ಜಾಗರೂಕತೆ ವಹಿಸಬೇಕು. ಏಕೆಂದರೆ ಎಷ್ಟೋ ಹಡಗುಗಳು ತುಂಬಾ ಮಾಲಿನ್ಯಕಾರವಾಗಿರುತ್ತದೆ. ಸರಿಯಾದ ಸೌಲಭ್ಯಗಳಿರುವುದಿಲ್ಲ. ನೀವೇನಾದರು ಅಂತ ಹಡಗಿನಲ್ಲಿ ಪ್ರಯಾಣ ಮಾಡಿದರೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.
ದುಬಾರಿಯಾದರೂ ಪರವಾಗಿಲ್ಲ ಈ ಹಡಗಿನಲ್ಲೇ ಪ್ರಯಾಣ ಮಾಡಿ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಬಹುದಾದ ಹಡಗು ಎಂದು ನೀವು ಅದನ್ನು ಆಯ್ಕೆ ಮಾಡಿಕೊಂಡರೆ ಪ್ರವಾಸ ಮುಗಿಯುವುದರೊಳಗೆ ನೀವು ತೀರಾ ಕಟ್ಟ ಪರಿಸ್ಥಿತಿಯಲ್ಲಿರುತ್ತೀರಾ. ಮತ್ತು ತುಂಬಾ ದೊಡ್ಡ ಹಡಗನ್ನು ಬಳಸಿಕೊಂಡರೆ ಅದರ ಗಾತ್ರದ ಕಾರಣದಿಂದ ಕೆಲವೊಂದು ಪ್ಲೇಸ್ಗಳಿಗೆ ಭೇಟಿ ನೀಡಲು ಸಾಧ್ಯವಾಗದೇ ಹೋಗಬಹುದು. ಹೊರಗಿನ ತಾಪಮಾನದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು , ಬಿಸಿಯಾದ ಕೊಠಡಿಗಳು, ಜಿಮ್ಗಳು, ಬಿಸಿ ಶವರ್ಗಳು ಮತ್ತು ವಿಶ್ರಾಂತಿ ಕೊಠಡಿಗಳಿದ್ದರೆ ಮಾತ್ರ ನೀವು ಆರಾಮವಾಗಿ ಪ್ರಯಾಣ ಮಾಡಬಹುದು.
ನಿಮ್ಮ ಬಳಿ ಅಷ್ಟು ಹಣ ಇಲ್ಲವಾದರೆ ಕೆಲವು ವರ್ಷಗಳ ಕಾಲ ಕಾದು ನಂತರ ಹಣ ಒಟ್ಟುಗೂಡಿದ ನಂತರ ನೀವು ಪ್ರಯಾಣ ಆರಂಭಿಸಿ. ಇಲ್ಲವಾದರೆ ನೀವು ಎಷ್ಟೋ ಅದ್ಭುತ ಅನುಭವಗಳನ್ನು ಮಿಸ್ ಮಾಡ್ಕೊಳ್ತೀರಾ. ಅಂಟಾರ್ಕ್ಟಿಕಾದ ಕೆಲವು ಅತ್ಯಂತ ರಮಣೀಯ ಸ್ಥಳಗಳಿಗೆ ಹೋಗಲು ಸಾಧ್ಯ ಆಗದೆಯೂ ಇರಬಹುದು. ಆದ್ದರಿಂದ ಈ ಸಲಹೆ ಪಾಲಿಸುವುದು ಉತ್ತಮ. ಪೊನಾಂಟ್ನ ಲೆ ಕಮಾಂಡೆಂಟ್ ಚಾರ್ಕೋಟ್ನಲ್ಲಿ ನೀವು ನಿಮ್ಮ ಪ್ರಯಾಣವನ್ನು ಬುಕ್ ಮಾಡಿಕೊಳ್ಳಬಹುದು.
ಅಂಟಾರ್ಟಿಕಾದಲ್ಲಿ ನೀವು ಕೆಲವು ಅಂಶಗಳನ್ನು ಮಾತ್ರ ಗಮನದಲ್ಲಿಡಲೇ ಬೇಕು. ಅಲ್ಲಿ ಕಾಣುವ ಪೆಂಗ್ವಿನ್ಗಳಿಗೆ ತೊಂದರೆ ಉಂಟುಮಾಡಬಾರದು. ಹೈಬ್ರಿಡ್ ಎಲೆಕ್ಟ್ರಿಕ್ ನೌಕೆಯಲ್ಲಿ ನೀವು ಪ್ರಯಾಣ ಮಾಡುವುದು ಉತ್ತಮ. ಮರು ಬಳಕೆ ಮಾಡುವ ನೀರಿನ ಬಾಟಲಿಕೊಂಡೊಯ್ಯುವುದು ಕಡ್ಡಾಯ. ಯಾವುದೇ ಪ್ರವಾಸಿತಾಣವಿರಲಿ ಅದನ್ನು ಮಲೀನಗೊಳಿಸದೇ ನೈಜ ಸೌಂದರ್ಯವನ್ನು ಪ್ರವಾಸಿಗರು ಕಾಪಾಡಲೇ ಬೇಕು. (ಚಿತ್ರಗಳ ಕೃಪೆ: ಗೂಗಲ್)