ಗೋವಾದಲ್ಲಿ ಅನೇಕ ಸುಂದರವಾದ ಜಲಪಾತಗಳಿವೆ. ಇಲ್ಲಿ ಎಲ್ಲರನ್ನು ಸೆಳೆಯೋ ಜಲಪಾತವೆಂದರೆ ದೂದ್ ಸಾಗರ್ ಪ್ರಕೃತಿ ನಡುವೆ ಹರಿಯುತ್ತಿದೆ. ಮಳೆಗಾಲದಲ್ಲಿ ಇದನ್ನು ನೋಡುವುದೇ ಒಂದು ಅದ್ಬುತ, ಈ ಜಲಪಾತವು ವನ್ಯಜೀವಿ ಅಭಯಾರಣ್ಯದಲ್ಲಿದೆ. ಅರಣ್ಯ ಮಾರ್ಗಗಳ ಮೂಲಕ ಇದನ್ನು ತಲುಪಬಹುದು. ತಂಬಾಡಿ ಸುರ್ಲಾ ಜಲಪಾತ, ಚೋರ್ಲಾ ಜಲಪಾತ, ಸಕ್ಲಾ-ವಜ್ರ ಜಲಪಾತ, ನೇತ್ರಾವಳಿ ಜಲಪಾತಗಳನ್ನು ನೋಡಲು ಮಾನ್ಸೂನ್ ಸಮಯದಲ್ಲಿ ಭೇಟಿ ನೀಡಿ. ಗೋವಾ ಅನೇಕ ಮೋಡಿಮಾಡುವ ಜಲಪಾತಗಳನ್ನು ಹೊಂದಿದೆ.
ಗೋವಾದಲ್ಲಿ ಅನೇಕ ಅದ್ಭುತ ಬೀಚ್ ಗಳಿವೆ, ಅಲ್ಲಿ ನೀವು ಗುಣಮಟ್ಟದ ಸಮಯವನ್ನು ಕಳೆಯಬಹುದು. ಬಾಗಾ ಬೀಚ್, ಕ್ಯಾಲಂಗುಟ್ ಬೀಚ್, ಕೊಲ್ವಾ ಬೀಚ್, ಅರಾಂಬೋಲ್ ಬೀಚ್, ಮಾಂಡ್ರೆಮ್ ಬೀಚ್, ಮೊರ್ಜಿಮ್ ಬೀಚ್, ಸಿಂಕ್ವೆರಿಮ್ ಬೀಚ್, ಅಶ್ವಮ್ ಬೀಚ್, ಕ್ಯಾವೆಲೋಸಿಮ್ ಬೀಚ್, ಅಗೋಂಡಾ ಬೀಚ್ ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾಗಿವೆ. ಈ ಎಲ್ಲಾ ಸ್ಥಳಗಳು ಸುಂದರವಾಗಿವೆ. ಸಂಜೆಯ ವೇಳೆ ಇಲ್ಲಿ ಓಡಾಡೋದೆ ಚೆಂದ
ಗೋವಾವು ಪ್ರವಾಸಿಗರನ್ನು ಆಕರ್ಷಿಸುವ ಅನೇಕ ಐತಿಹಾಸಿಕ ಚರ್ಚ್ಗಳನ್ನು ಹೊಂದಿದೆ. ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಬಾಮ್ ಜೀಸಸ್ ಬೆಸಿಲಿಕಾ. ಇದು ಗೋವಾದ ಅತ್ಯಂತ ಹಳೆಯ ಚರ್ಚ್ ಆಗಿದ್ದು, ಹೆಚ್ಚಿನ ಸಂಖ್ಯೆಯ ಜನರು ಭೇಟಿ ನೀಡುತ್ತಾರೆ. ಇದಲ್ಲದೇ ಸೇಂಟ್ ಕ್ಯಾಥೆಡ್ರಲ್, ಚರ್ಚ್ ಆಫ್ ಅವರ್ ಲೇಡಿ ಆಫ್ ದಿ ಮೌಂಟ್, ಸೇಂಟ್ ಕ್ಯಾಜೆಟನ್ ಚರ್ಚ್, ಮೈ ಡ್ಯೂಸ್ ಚರ್ಚ್ ಧಾರ್ಮಿಕ ಮತ್ತು ಸಾಂಸ್ಕೃತಿಕ ಸೌಂದರ್ಯಗಳ ಸಂಗಮವಾಗಿದೆ.