ಪ್ರಕೃತಿ ಪ್ರಿಯರು, ಸಾಹಸ ಪ್ರಿಯರು, ಪ್ರವಾಸ ಪ್ರೇಮಿಗಳು, ಇತಿಹಾಸ ತಜ್ಞರು ಹೀಗೆ ಎಲ್ಲ ವರ್ಗದವರನ್ನು ಸಂತೃಪ್ತಿಪಡಿಸುವ ತಾಣ ಕರ್ನಾಟಕ ಎಂದು ಹೇಳಬಹುದು. ಅದರಲ್ಲೂ ಚಿಕ್ಕಮಗಳೂರು ಪ್ರಮುಖ ಪ್ರವಾಸಿ ತಾಣವಾಗಿದೆ. ಸದ್ಯ ಬೇಸಿಗೆ ಮುಗಿದು ಇನ್ನೊಂದು ತಿಂಗಳಿನಲ್ಲಿ ಮಳೆಗಾಲ ಆರಂಭವಾಗುತ್ತಿದೆ. ಈಗಾಗಲೇ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆರಾಯ ಆಗಮಿಸಿದ್ದಾನೆ. ಈ ನಡುವೆ ಮೊದಲೇ ನೀವು ಪ್ರವಾಸ ಕೈಗೊಳ್ಳಬೇಕಾದರೆ ಚಿಕ್ಕಮಗಳೂರು ಚೂಸ್ ಮಾಡುವುದು ಬೆಸ್ಟ್.
ಚಿಕ್ಕಮಗಳೂರು ಪಶ್ಚಿಮ ಘಟ್ಟಗಳಲ್ಲಿ ಟ್ರೆಕ್ಕಿಂಗ್ ಮಾಡಲು ಕೆಲವು ಅತ್ಯುತ್ತಮ ಸ್ಥಳಗಳಿದೆ. ಕೆಲವು ಫೇಮಸ್ ಪ್ಲೇಸ್ಗಳಲ್ಲಿ ಮುಳ್ಳಯ್ಯನಗಿರಿ , ಕುದುರೆಮುಖ ಟ್ರೆಕ್ ಮತ್ತು ಬಾಬಾ ಬುಡನಗಿರಿ ಕೂಡ ಒಂದು. ನಿಮ್ಮನ್ನು ಪರ್ವತಗಳಿಗೆ ಕರೆದೊಯ್ಯಲು ಹಲವು ಖಾಸಗಿ ಟ್ರೆಕ್ಕಿಂಗ್ ಗುಂಪುಗಳಿದೆ. ಒಬ್ಬರೇ ಹೋಗಿ ಕೂಡ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು, ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.