ಮದುವೆ ಸೀಸನ್ ಆರಂಭವಾಗಿದೆ. ನವದಂಪತಿಗಳು ಮಧುಚಂದ್ರಕ್ಕೆ ತೆರಳಲು ಯಾವ ಸ್ಥಳ ಸೂಕ್ತ ಎಂಬ ಲೆಕ್ಕಚಾರದಲ್ಲಿ ತೊಡಗಿರುತ್ತಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಅನೇಕ ರಮಣೀಯ ಸ್ಥಳಗಳು ಭಾರತದಲ್ಲಿದ್ದರೂ, ಹನಿಮೂನ್ ವಿದೇಶದಲ್ಲಿ ಆಚರಿಸಲು ಹೆಚ್ಚಿನ ದಂಪತಿಗಳು ಬಯಸುತ್ತಾರೆ. ಅಂತದ್ರಲ್ಲಿ ಕಡಿಮೆ ವೆಚ್ಚದಲ್ಲಿ ನಿಮ್ಮ ಮಧುಚಂದ್ರದ ಅನುಭವವನ್ನು ಹೆಚ್ಚಿಸುವ ಕೆಲ ಸುಂದರ ದೇಶಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಬಾಲಿ ವಿಶ್ವದ ಅತ್ಯಂತ ಸುಂದರ ತಾಣಗಳಲ್ಲಿ ಇದು ಒಂದು. ಇಂಡೋನೇಷ್ಯಾದಲ್ಲಿರುವ ಈ ದ್ವೀಪ ಕೂಡ ಕಡಿಮೆ ಖರ್ಚಿನಲ್ಲಿ ಮಧುಚಂದ್ರಕ್ಕೆ ತೆರಳಲು ಹೇಳಿ ಮಾಡಿಸಿದ ತಾಣವಾಗಿದೆ. ಹನಿಮೂನ್ ಆಚರಿಸಲೆಂದೇ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಬಾಲಿಗೆ ಭೇಟಿ ನೀಡುತ್ತಾರೆ. ಪ್ರಕೃತಿ ರಮಣೀಯ ಸ್ಥಳಗಳೊಂದಿಗೆ ಇಲ್ಲಿನ ಬೀಚ್ಗಳು ಕೂಡ ಆಕರ್ಷಕವಾಗಿದೆ. ಕಡಲತಡಿಯ ರೆಸ್ಟೋರೆಂಟ್ಗಳು ಕೂಡ ನವವಿವಾಹಿತರಿಗೆ ಹೊಸ ಅನುಭವವನ್ನು ಒದಗಿಸಲಿದೆ.