ಹೌದು, ನೀವು ಯಾವುದಾದರೂ ಸಿನಿಮಾದಲ್ಲಿ ಲಡಾಖ್ನ ದೃಶ್ಯವನ್ನು ನೋಡಿದ ತಕ್ಷಣ, ಒಮ್ಮೆಯಾದರೂ ಈ ಸುಂದರ ತಾಣಕ್ಕೆ ಭೇಟಿ ನೀಡಬೇಕು ಎಂದು ಅನಿಸುತ್ತದೆ. ಪರ್ವತ ಕಣಿವೆಗಳು, ಜಲಪಾತಗಳು, ನದಿಗಳು ಮತ್ತು ಹಿಮದಿಂದ ಆವೃತವಾದ ಪರ್ವತಗಳನ್ನೇ ಎಲ್ಲೆಡೆ ಹೊಂದಿರುವ ಲಡಾಖ್ ಪ್ರವಾಸವು ನಿಮಗೆ ಮರೆಯಲಾಗದ ಅನುಭವವನ್ನು ನೀಡುವುದು ಖಂಡಿತ. ಈ ಜರ್ನಿ ವೇಳೆ ಕೊಂಡೊಯ್ಯಬೇಕಾದ ಕೆಲವು ಅಗತ್ಯ ವಸ್ತುಗಳನ್ನು ಮರೆಯದಂತೆ ನೆನಪಿನಲ್ಲಿಟ್ಟುಕೊಳ್ಳುವುದು ಕೂಡ ಮುಖ್ಯ.