ಹದಗೆಟ್ಟ ಸಂಬಂಧವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಇದರಿಂದ ಜೀವನ ಹೆಚ್ಚು ಹಾಳಾಗುತ್ತದೆ. ರಿಲೇಷನ್ ಶಿಪ್ನಲ್ಲಿ ಹೇಗೆ ಮೋಸ ಹೋಗುತ್ತಿದ್ದೇವೆ ಎಂಬುವುದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಇದಕ್ಕೆ ಯಾವುದೇ ನಿಶ್ಚಿತ ಮಾನದಂಡಗಳಿಲ್ಲ. ಸಾಮಾನ್ಯವಾಗಿ ಯಾವುದೇ ಸಂಬಂಧದಲ್ಲಿ ಅದರಲ್ಲಿಯೂ ಲವ್ ರಿಲೇಷನ್ ಶಿಪ್ನಲ್ಲಿ ಟೆನ್ಷನ್ ಇದ್ದೆ ಇರುತ್ತದೆ. ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ಯಾವಾಗಲೂ ಅರ್ಥವಾಗುವುದಿಲ್ಲ. ನಿಮ್ಮ ಸಂಗಾತಿ ನಿಮ್ಮನ್ನು ನೋಯಿಸಿದಾಗ, ನಿಮ್ಮನ್ನು ಅಗೌರವಿಸಿದಾಗ ಇದು ನಿಮಗೆ ಸೆನ್ಸ್ ಆಗುತ್ತದೆ.
ಸಂಗಾತಿಯು ನಿಮ್ಮನ್ನು ತಪ್ಪಾಗಿ ಅರ್ಥಮಾಡಿಕೊಂಡರೆ, ನೀವು ಸಂಬಂಧದಲ್ಲಿ ಎಡವಿದ್ದೀರಿ ಎಂದರ್ಥ. ನಿಮ್ಮನ್ನು ನಿರಂತರವಾಗಿ ಕೀಳು ದೃಷ್ಟಿಯಲ್ಲಿ ನೋಡುವ ವ್ಯಕ್ತಿಯ ಜೊತೆಗೆ ಸಂಬಂಧವನ್ನು ಹೊಂದಿರಬೇಡಿ. ಬದಲಾಗಿ ನಿಮ್ಮ ಸಂಗಾತಿ ನಿಮ್ಮನ್ನು ಬೆಂಬಲಿಸಿದರೆ ಅಂತಹವರನ್ನು ಸಂತೋಷದಿಂದ ನೋಡಿಕೊಳ್ಳಿ. ಅವರನ್ನು ಕಡೆಗಣಿಸಬೇಡಿ. ಪಾಲುದಾರ ಯಾವಾಗಲೂ ನಿಮ್ಮನ್ನು ಪ್ರೇರೇಪಿಸುತ್ತಾನೆ. ನಿಮ್ಮ ಸಂತೋಷವನ್ನು ನೋಡಿಕೊಳ್ಳಿ.