ಗೋಕರ್ಣ ಬೀಚ್: ಇದು ಉತ್ತರ ಕನ್ನಡದ ಕುಮಟಾ ತಾಲೂಕಿನಲ್ಲಿದೆ. ಇಲ್ಲಿ ಮಹಾಬಲೇಶ್ವರ ದೇವಸ್ಥಾನ ಎಂದು ಕರೆಯಲ್ಪಡುವ ಪುರಾತನ ಶಿವ ದೇವಾಲಯವಿದೆ. ಈ ದೇವಾಲಯದ ಪಟ್ಟಣದಲ್ಲಿ ಜನರು ಮುಖ್ಯವಾಗಿ ಶಿವನನ್ನು ಪೂಜಿಸುವುದರಿಂದ, ಶಿವರಾತ್ರಿ ಉತ್ಸವವನ್ನು ಬಹಳ ವಿಜೃಂಭಣೆಯಿಂದ ಮತ್ತು ಪ್ರದರ್ಶನದಿಂದ ಆಚರಿಸಲಾಗುತ್ತದೆ. ಆರಾಮದಾಯಕವಾದ ಹೋಮ್ ಸ್ಟೇಗಳು, ವಿವಿಧ ತಿನಿಸುಗಳ ಹೋಟೆಲ್ಗಳು ಇಲ್ಲಿವೆ. ದೋಣಿ ವಿಹಾರಕ್ಕೆ ಹೋಗುವ ಅವಕಾಶ, ಸೂರ್ಯೋದಯ, ಸೂರ್ಯಾಸ್ತ ನೋಡಲು ಗೋಕರ್ಣವು ಭೇಟಿ ನೀಡಲೇಬೇಕಾದ ತಾಣವಾಗಿದೆ. (ಕೃಪೆ: Internet)
ಪ್ಯಾರಡೈಸ್ ಬೀಚ್: ಇದು ಕೂಡ ಗೋಕರ್ಣದಲ್ಲೇ ಇದೆ. ಇಲ್ಲಿ ಸಮೀಪದ ಕಾಡಿನಲ್ಲಿ ಟ್ರೆಕ್ಕಿಂಗ್ ಕೂಡ ಮಾಡಬಹುದು. ‘ಫುಲ್ ಮೂನ್ ಬೀಚ್ ಅಥವಾ ಹುಣ್ಣಿಮೆ ಬೀಚ್’ ಎಂದು ಕರೆಯಲ್ಪಡುವ ಪ್ಯಾರಡೈಸ್ ಬೀಚ್ ಅನ್ನು ತಲುಪಲು ಓಂ ಬೀಚ್ ಅಥವಾ ಹಾಫ್ ಮೂನ್ ಕಡಲತೀರದಿಂದ ಮೋಟಾರು ದೋಣಿ ತೆಗೆದುಕೊಳ್ಳಬೇಕು ಅಥವಾ ಹಾಫ್ ಮೂನ್ ಕಡಲತೀರದಿಂದ ಚಾರಣ ಕೈಗೊಳ್ಳ ಬೇಕು. ಪ್ಯಾರಡೈಸ್ ಬೀಚ್ ಸುಮಾರು 150 ಮೀಟರ್ ಉದ್ದವನ್ನು ಹೊಂದಿದ್ದು ಈಜು ಮತ್ತು ಕ್ಯಾಂಪಿಂಗ್ಗೆ ಸೂಕ್ತ ತಾಣವಾಗಿದೆ. ಕಡಲತೀರದ ಸುಮಾರು 70 ಪ್ರತಿಶತ ಬಂಡೆಗಳಿಂದ ಆವೃತವಾಗಿದೆ. ಇದು ಛಾಯಾಗ್ರಹಣಕ್ಕಾಗಿ ಪರಿಪೂರ್ಣ ತಾಣವಾಗಿದೆ. (ಕೃಪೆ: Internet)
ಕುಡ್ಲೆ ಬೀಚ್: ಇದು ಗೋಕರ್ಣ ಕಡಲತೀರದ ದಕ್ಷಿಣದಲ್ಲಿದೆ. ರೆಸ್ಟೊರೆಂಟ್ಗಳು ಮತ್ತು ಕೆಫೆಗಳ ಸರಮಾಲೆಯನ್ನು ಹೊಂದಿರುವುದರಿಂದ ಮತ್ತು ಕಡಿಮೆ ಬಜೆಟ್ನಲ್ಲಿ ವಸತಿ ಸೌಕರ್ಯವನ್ನು ಒದಗಿಸುವುದರಿಂದ ಕುಡ್ಲೆಯು ಸಾಮಾನ್ಯವಾಗಿ ಕಿಕ್ಕಿರಿದು ತುಂಬಿರುತ್ತದೆ. ಸೂರ್ಯನು ದಿಗಂತದಲ್ಲಿ ಅಸ್ತಮಿಸುತ್ತಿದ್ದಂತೆ ವಿಶಾಲವಾದ ಅರಬ್ಬಿ ಸಮುದ್ರವು ರಂಗಿನಿಂದ ಹೊಳೆಯುತ್ತದೆ. ಅದನ್ನು ನೋಡುವುದೇ ಕಣ್ಣಿಗೆ ಹಬ್ಬ. ಹೆಚ್ಚಾಗಿ ವಿದೇಶಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಸಮುದ್ರದಲ್ಲಿ ಈಜಲು ಮತ್ತು ಬಾಸ್ಕಿಂಗ್ ಮಾಡಲು ಈ ಕಡಲತೀರವು ಅತ್ಯುತ್ಕೃಷ್ಟವಾಗಿದೆ. ಓಂ ಬೀಚ್ನಿಂದ 10 ನಿಮಿಷಗಳ ದೋಣಿ ಸವಾರಿ ಮತ್ತು ಗೋಕರ್ಣ ಬೀಚ್ನಿಂದ 15 ನಿಮಿಷಗಳ ದೋಣಿ ಸವಾರಿ ಮೂಲಕ ನೀವು ಕುಡ್ಲ್ ಬೀಚ್ ತಲುಪಬಹುದು. (ಕೃಪೆ: Internet)