Health Tips: ನಿಮ್ಮ ಮಕ್ಕಳ ಬುದ್ಧಿಶಕ್ತಿ ಹೆಚ್ಚಬೇಕಾ? ಈ ಆಹಾರಗಳನ್ನು ಮಿಸ್ ಮಾಡದೆ ಕೊಡಿ
ಮಕ್ಕಳಿಗೆ (Children) ಅಗತ್ಯವಾದ ಪೋಷಕಾಂಶಗಳನ್ನು (Nutrients) ಹೊಂದಿರುವ ಆಹಾರವನ್ನು (Food) ನೀಡುವುದು ಬಹಳ ಮುಖ್ಯ. ಮಕ್ಕಳ ಜೀವನದ ಮೊದಲ 2 ವರ್ಷ ತ್ವರಿತವಾಗಿ ಮೆದುಳಿನ (Brain) ಬೆಳವಣಿಗೆ ಆಗುತ್ತೆ ಹೀಗಾಗಿ ಅವರಿಗೆ ಒಳ್ಳೆ ಫುಡ್ ನೀಡಿ. ಮಕ್ಕಳ ಮೆದುಳಿನ ಆರೋಗ್ಯವನ್ನು ಕಾಪಾಡಲು ಯಾವ ಬಗೆಯ ಆಹಾರ ಸೇರಿಸಬೇಕೆಂದು ತಿಳಿದುಕೊಳ್ಳಿ.
ಮಕ್ಕಳ ಮಿದುಳಿನ ಬೆಳವಣಿಗೆಗೆ ಪೋಷಕಾಂಶ ಅತ್ಯಗತ್ಯ. ಆದ್ದರಿಂದ ಮಕ್ಕಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ನೀಡುವುದು ಬಹಳ ಮುಖ್ಯ. ಮಗುವಿನ ಜೀವನದ ಮೊದಲ 2 ವರ್ಷಗಳಲ್ಲಿ ತ್ವರಿತವಾಗಿ ಮೆದುಳಿನ ಬೆಳವಣಿಗೆ ಆಗುತ್ತೆ.
2/ 8
ಪೀನಟ್ ಬಟರ್: ಮೆದುಳಿನ ಬೆಳವಣಿಗೆಗೆ ಸರಿಯಾದ ಆರೋಗ್ಯಕರ ಆಹಾರವನ್ನು ಆಯ್ಕೆಮಾಡುವಾಗ ಕಡಲೆಕಾಯಿ ಮತ್ತು ಪಿನಟ್ ಬಟರ್ ಪೌಷ್ಟಿಕಾಂಶದ ಆಯ್ಕೆಗಳಾಗಿವೆ. ಇವು ಮೆಮೊರಿ, ಅರಿವಿನ ಕಾರ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್-ಇ ಅಧಿಕವಾಗಿದೆ.
3/ 8
ಮೊಟ್ಟೆಗಳು: ಮೊಟ್ಟೆಗಳು ಪೌಷ್ಟಿಕಾಂಶದ ಆಹಾರಗಳಲ್ಲಿ ಒಂದಾಗಿದೆ. ಮೊಟ್ಟೆಗಳಲ್ಲಿ ಕೋಲೀನ್, ವಿಟಮಿನ್ ಬಿ12, ಪ್ರೊಟೀನ್ ಮತ್ತು ಸೆಲೆನಿಯಮ್ ಸೇರಿದಂತೆ ಹಲವು ಪ್ರಮುಖ ಪೋಷಕಾಂಶಗಳು ಸಮೃದ್ಧವಾಗಿವೆ, ಇದು ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ನೆನೆಪಿನ ಶಕ್ತಿ ಹೆಚ್ಚಿಸುತ್ತೆ
4/ 8
ಹಣ್ಣುಗಳು ಮತ್ತು ತರಕಾರಿಗಳು: ಉತ್ತಮ ಮೆದುಳಿನ ಬೆಳವಣಿಗೆಗಾಗಿ ನಿಮ್ಮ ಮಗುವಿಗೆ ತರಕಾರಿಗಳು ಮತ್ತು ಹಣ್ಣುಗಳನ್ನು ನೀಡಿ. ಪಾಲಕ್ ಸೊಪ್ಪಿನಂಥ ಪೌಷ್ಟಿಕಾಂಶವುಳ್ಳ ತರಕಾರಿಗಳು ಮಕ್ಕಳ ಮೆದುಳಿನ ಆರೋಗ್ಯಕ್ಕೆ ಮುಖ್ಯ.
5/ 8
ಬೀನ್ಸ್: ಬೀನ್ಸ್ನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು, ಆಂಟಿ-ಆಕ್ಸಿಡೆಂಟ್ಗಳು ಮತ್ತು ಖನಿಜಗಳು ಅಧಿಕವಾಗಿವೆ. ಬೀನ್ಸ್ ಜೀರ್ಣಿಸಿಕೊಳ್ಳಲು ನಿಧಾನವಾಗಿದೆ. ಆದ್ದರಿಂದ ಮೆದುಳಿಗೆ ಗ್ಲೂಕೋಸ್ನ ನಿರಂತರ ಮೂಲವನ್ನು ಒದಗಿಸುತ್ತದೆ. ಮೆದುಳಿನ ಆರೋಗ್ಯಕ್ಕಾಗಿ ನಿಮ್ಮ ಮಗುವಿನ ಆಹಾರದಲ್ಲಿ ಬೀನ್ಸ್ ಅನ್ನು ಸೇರಿಸಬೇಕು.
6/ 8
ಓಟ್ಸ್: ಓಟ್ಸ್ ಮತ್ತು ಓಟ್ ಮೀಲ್ ಶಕ್ತಿಯ ಅತ್ಯುತ್ತಮ ಮೂಲಗಳು ಮತ್ತು ಮೆದುಳಿನ ಇಂಧನ ಎನ್ನಬಹುದು. ಓಟ್ಸ್ ನಲ್ಲಿ ನಾರಿನಂಶ ಅಧಿಕವಾಗಿದೆ. ಇದು ವಿಟಮಿನ್ ಇ, ಬಿ ಕಾಂಪ್ಲೆಕ್ಸ್ ಮತ್ತು ಸತುವುಗಳ ಅತ್ಯುತ್ತಮ ಮೂಲವಾಗಿದೆ, ಇದು ಮಕ್ಕಳ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
7/ 8
ಧಾನ್ಯಗಳು: ಬಾರ್ಲಿ ಮತ್ತು ಕ್ವಿನೋವಾದಂತಹ ಧಾನ್ಯಗಳು ಬಿ ಜೀವಸತ್ವಗಳಲ್ಲಿ ಸಮೃದ್ಧವಾಗಿವೆ. ಇವು ನೆನಪಿನ ಶಕ್ತಿಯನ್ನು ಕಾಪಾಡುತ್ತವೆ. ಧಾನ್ಯಗಳ ಹೊರತಾಗಿ ಮೆದುಳಿಗೆ ಅಗತ್ಯವಾದ ಗ್ಲೂಕೋಸ್ನ ಅತ್ಯುತ್ತಮ ಮೂಲವಾಗಿದೆ.
8/ 8
ಮೀನುಗಳಲ್ಲಿ ಒಮೆಗಾ-3 ಸಮೃದ್ಧವಾಗಿದೆ. ಇದು ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ.