ಬಿಳಿ ತೇಪೆಗಳು
ನಾಲಿಗೆಯಲ್ಲಿ ಬಿಳಿ ತೇಪೆಗಳನ್ನು ಗಮನಿಸಬಹುದು. ನಿಮ್ಮ ನಾಲಿಗೆಯಲ್ಲಿ ಈ ಸ್ಥಿತಿಗೆ ಯೀಸ್ಟ್ ಸೋಂಕು ಒಂದು ಕಾರಣವಾಗಿದೆ. ಇದನ್ನು ಲ್ಯುಕೋಪ್ಲಾಕಿಯಾ ಎಂದು ಕರೆಯಲಾಗುತ್ತದೆ. ಈ ರೀತಿಯ ಬಿಳಿ ತೇಪೆಗಳು ವಿಶೇಷವಾಗಿ ಚಿಕ್ಕ ಮಕ್ಕಳು, ವೃದ್ಧರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಲ್ಲಿ ಸಾಮಾನ್ಯವಾಗಿದೆ. ಅಲ್ಲದೆ ತಂಬಾಕು ಉತ್ಪನ್ನಗಳನ್ನು ಸೇವಿಸುವವರಿಗೆ ಈ ಲಿಗೋಪ್ಲಾಕಿಯಾ ಕಾಯಿಲೆ ಬರುತ್ತದೆ. ಕೆಲವರಿಗೆ ಈ ಬಿಳಿ ತೇಪೆಗಳು ತಾನಾಗಿಯೇ ಮಾಯವಾಗುತ್ತವೆ. ಕೆಲವರಿಗೆ ಇದು ದೇಹಕ್ಕೆ ದೊಡ್ಡ ಹಾನಿಯನ್ನುಂಟು ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಕೆಂಪು ನಾಲಿಗೆ
ಕೆಲವೊಮ್ಮೆ ನಾವು ನಮ್ಮ ನಾಲಿಗೆ ತುಂಬಾ ಕೆಂಪಾಗುವುದನ್ನು ನೋಡಿದ್ದೇವೆ. ದೇಹದಲ್ಲಿ ವಿಟಮಿನ್ ಡಿ, ವಿಟಮಿನ್ ಬಿ12 ಮತ್ತು ಫೋಲಿಕ್ ಆಮ್ಲ ಕಡಿಮೆಯಾದರೆ ನಮ್ಮ ನಾಲಿಗೆ ಕೆಂಪು ಹಣ್ಣಿನಂತೆ ಆಗುತ್ತದೆ. ಮಕ್ಕಳಲ್ಲಿ ಸ್ಕಾರ್ಲೆಟ್ ಜ್ವರದಂತಹ ಯಾವುದಾದರೂ ಕಾರಣದಿಂದ ಇದು ಉಂಟಾಗಬಹುದು. ಕೆಲವರಿಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋದಾಗ ಅಲ್ಲಿನ ವಾತಾವರಣದ ಬದಲಾವಣೆಯಿಂದ ನಾಲಿಗೆ ಕೆಂಪಗಾಗಬಹುದು. ವಿಟಮಿನ್ ಕೊರತೆಯನ್ನು ಸಣ್ಣ ರಕ್ತ ಪರೀಕ್ಷೆಯಿಂದ ಕಂಡುಹಿಡಿಯಬಹುದು.