ಪ್ರತಿದಿನ ಪ್ರತಿಯೊಬ್ಬರು ಟೊಮೆಟೊ ಸೇವಿಸಬೇಕು. ಟೊಮೆಟೊವನ್ನು ಸಾಮಾನ್ಯವಾಗಿ ಎಲ್ಲಾ ತರಕಾರಿಗಳೊಂದಿಗೆ ಅಡುಗೆ ಮಾಡುವಾಗ ಸೇರಿಸಲಾಗುತ್ತದೆ. ಏಕೆಂದರೆ ಇದು ಎಲ್ಲ ರೀತಿಯ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅಲ್ಲದೇ ಅನೇಕ ಮಂದಿ ಟೊಮೆಟೊ, ತರಕಾರಿಗಳು, ಸಲಾಡ್ಗಳು, ಸೂಪ್ಗಳು ಮತ್ತು ಜ್ಯೂಸ್ ಅನ್ನು ಸೇವಿಸುತ್ತಾರೆ, ಇದು ಅನೇಕ ಆರೋಗ್ಯಕರ ಗುಣಗಳಿಂದ ಸಮೃದ್ಧವಾಗಿದೆ. (ಸಾಂಕೇತಿಕ ಚಿತ್ರ)
ಟೊಮೆಟೊ ಜ್ಯೂಸ್ ಅನ್ನು ಅನೇಕ ಮಂದಿ ಕುಡಿಯುತ್ತಾರೆ. ಇದರ ರಸವು ಆರೋಗ್ಯಕ್ಕೆ ಮಾತ್ರವಲ್ಲದೇ ಕೂದಲು ಮತ್ತು ತ್ವಚೆಯನ್ನು ಯೌವನವಾಗಿಡಲು ಪರಿಣಾಮಕಾರಿಯಾಗಿದೆ. ಟೊಮೆಟೊ ಜ್ಯೂಸ್ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ. ಹೆಲ್ತ್ಲೈನ್ನಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಟೊಮೆಟೊದಲ್ಲಿ ವಿಟಮಿನ್ ಎ, ಬಿ ಕಾಂಪ್ಲೆಕ್ಸ್, ವಿಟಮಿನ್ ಕೆ, ಖನಿಜಗಳಾದ ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಫೈಬರ್ ಮುಂತಾದ ಪೋಷಕಾಂಶಗಳಿವೆ. ಸದ್ಯ ನಾವಿಂದು ಟೊಮೆಟೊ ಜ್ಯೂಸ್ನ ಪ್ರಯೋಜನಗಳೇನು ಎಂದು ತಿಳಿದುಕೊಳ್ಳೋಣ ಬನ್ನಿ. (ಸಾಂಕೇತಿಕ ಚಿತ್ರ)
ಟೊಮೆಟೊ ರಸದಲ್ಲಿ ಲೈಕೋಪೀನ್ ಕೂಡ ಸಮೃದ್ಧವಾಗಿದೆ. ಟೊಮೆಟೊಗಳು ತಮ್ಮ ಕೆಂಪು ಬಣ್ಣವನ್ನು ಲೈಕೋಪೀನ್, ಕೊಬ್ಬು ಕರಗಿಸುವ ಉತ್ಕರ್ಷಣ ನಿರೋಧಕದಿಂದ ಪಡೆಯುತ್ತವೆ. ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಪರಿಧಮನಿಯ ಕಾಯಿಲೆ, ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್, ಇತ್ಯಾದಿ ಸೇರಿದಂತೆ ಅನೇಕ ರೀತಿಯ ಕ್ಯಾನ್ಸರ್ ಅಪಾಯವನ್ನು ಲೈಕೋಪೀನ್ ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. (ಸಾಂಕೇತಿಕ ಚಿತ್ರ)
ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ನೀವು ಬಯಸಿದರೆ, ನೀವು ಟೊಮೆಟೊ ಜ್ಯೂಸ್ ಅನ್ನು ಕುಡಿಯಬಹುದು. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಜೊತೆಗೆ ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ. ಇದರಲ್ಲಿ ಸೋಡಿಯಂ ಕಡಿಮೆ ಮತ್ತು ನಾರಿನಂಶ ಹೆಚ್ಚಿರುವುದರಿಂದ ದೇಹ ದೌರ್ಬಲ್ಯವಾಗುವುದಿಲ್ಲ ಮತ್ತು ಬೇಗ ಹಸಿವಾಗುವುದಿಲ್ಲ. (Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ) (ಸಾಂಕೇತಿಕ ಚಿತ್ರ)