World Idli Day: ಇದು ಹೊಸ ತರಹದ ರೆಸಿಪಿ; ಇಂದು ಮಾಡಿ ಬಗೆ ಬಗೆಯ ಇಡ್ಲಿ

ಇಂದು ವಿಶ್ವ ಇಡ್ಲಿ ದಿನ. ನೀವು ಇಡ್ಲಿ ಪ್ರಿಯರಾಗಿದ್ದರೆ, ವೆರೈಟಿ ಇಡ್ಲಿ ತಿನ್ನಲು ಇಷ್ಟ ಪಡ್ತೀರಾ. ಇಡ್ಲಿಯನ್ನು ಎಲ್ಲರೂ ಸೇವಿಸಬಹುದು. ರವೆ ಇಡ್ಲಿ ಹೆಚ್ಚು ಜನಪ್ರಿಯ. ಇಲ್ಲಿ ನಾವು ಬೆಳಗಿನ ತಿಂಡಿಗೆ ಕೆಲವು ವೆರೈಟಿ ಇಡ್ಲಿ ರೆಸಿಪಿ ಬಗ್ಗೆ ನೋಡೋಣ.

First published:

  • 18

    World Idli Day: ಇದು ಹೊಸ ತರಹದ ರೆಸಿಪಿ; ಇಂದು ಮಾಡಿ ಬಗೆ ಬಗೆಯ ಇಡ್ಲಿ

    ಇಡ್ಲಿಗಳಲ್ಲಿ ಹಲವು ವಿಧಗಳಿವೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಹಿತದೃಷ್ಟಿ ಮತ್ತು ಕಾಳಜಿ ಹೆಚ್ಚುತ್ತಿದೆ. ಹಾಗಾಗಿ ಇಡ್ಲಿಗಳಲ್ಲಿ ವೆರೈಟಿ ಬಂದಿದೆ. ಕಪ್ಪು ಅಕ್ಕಿ ಇಡ್ಲಿ ಸೇವನೆ ಆರೋಗ್ಯಕರವಾಗಿದೆ.

    MORE
    GALLERIES

  • 28

    World Idli Day: ಇದು ಹೊಸ ತರಹದ ರೆಸಿಪಿ; ಇಂದು ಮಾಡಿ ಬಗೆ ಬಗೆಯ ಇಡ್ಲಿ

    ಕಪ್ಪು ಅಕ್ಕಿ ಇಡ್ಲಿ ತಯಾರಿಕೆಗೆ ಬೇಕಾಗುವ ಪದಾರ್ಥಗಳು- ಇಡ್ಲಿ ಅಕ್ಕಿ - 1 ಕಪ್, ಉದ್ದಿನಬೇಳೆ - 1/2 ಕಪ್, ಮೆಂತ್ಯ – ಚಮಚ, ರುಚಿಗೆ ಉಪ್ಪು, ಅಗತ್ಯವಿರುವಷ್ಟು ನೀರು ಬೇಕು. ಮೊದಲು ಕಪ್ಪು ಅಕ್ಕಿ, ಇಡ್ಲಿ ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತ್ಯ ಪ್ರತ್ಯೇಕವಾಗಿ 6 ಗಂಟೆಗಳ ಕಾಲ ತೊಳೆದು ನೆನೆಸಿ.

    MORE
    GALLERIES

  • 38

    World Idli Day: ಇದು ಹೊಸ ತರಹದ ರೆಸಿಪಿ; ಇಂದು ಮಾಡಿ ಬಗೆ ಬಗೆಯ ಇಡ್ಲಿ

    ನೀರನ್ನು ಬಸಿದು, ಎಲ್ಲವನ್ನೂ ಮಿಕ್ಸ್ ಮಾಡಿ, ರುಬ್ಬಿರಿ. ಈ ಪೇಸ್ಟ್ ಗೆ ಉಪ್ಪು ಸೇರಿಸಿ ಮತ್ತು ಎಂಟು ಗಂಟೆ ಹುದುಗುವಿಕೆಗೆ ಬಿಡಿ. ಇಡ್ಲಿ ಪ್ಲೇಟ್‌ ಗಳನ್ನು ಎಣ್ಣೆಯಿಂದ ಗ್ರೀಸ್ ಮಾಡಿ. ಇಡ್ಲಿ ಹಿಟ್ಟನ್ನು ಸುರಿಯಿರಿ. 10 ನಿಮಿಷ ಸ್ಟೀಮ್ ಮಾಡಿ. ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್ ಜೊತೆ ಬಿಸಿಯಾಗಿ ಬಡಿಸಿ.

    MORE
    GALLERIES

  • 48

    World Idli Day: ಇದು ಹೊಸ ತರಹದ ರೆಸಿಪಿ; ಇಂದು ಮಾಡಿ ಬಗೆ ಬಗೆಯ ಇಡ್ಲಿ

    ಮುತ್ತು ರಾಗಿ ಇಡ್ಲಿ ರೆಸಿಪಿ. ಕಂಬು ಆರೋಗ್ಯಕರ ಆಹಾರವಾಗಿದೆ. ಡಯಟ್ ಮಾಡುವವರು, ಡಯಾಬಿಟೀಸ್ ರೋಗಿಗಳು ರುಚಿಕರ ಇಡ್ಲಿ ಸೇವಿಸಿ. ಬೇಕಾಗುವ ಪದಾರ್ಥಗಳು- ಮುತ್ತು ರಾಗಿ - 3 ಕಪ್, ಉದ್ದಿನ ಬೇಳೆ - ¾ ಕಪ್, ಫೆನು ಗ್ರೀಕ್ ಬೀಜಗಳು - 1 ಟೀಸ್ಪೂನ್, ರುಚಿಗೆ ಉಪ್ಪು, ನೀರು ಬೇಕು.

    MORE
    GALLERIES

  • 58

    World Idli Day: ಇದು ಹೊಸ ತರಹದ ರೆಸಿಪಿ; ಇಂದು ಮಾಡಿ ಬಗೆ ಬಗೆಯ ಇಡ್ಲಿ

    ತಯಾರಿಸಲು ಮೊದಲು ಉದ್ದಿನಬೇಳೆ, ಮುತ್ತು ರಾಗಿ ಮತ್ತು ಮೆಂತ್ಯವನ್ನು ಪ್ರತ್ಯೇಕವಾಗಿ 6 ಗಂಟೆಗಳ ಕಾಲ ತೊಳೆದು ನೆನೆಸಿಡಿ. ನಂತರ ರುಬ್ಬಿಕೊಳ್ಳಿ. ಪೇಸ್ಟ್ ಗೆ ಸಮುದ್ರದ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು 8 ಗಂಟೆ ಹುದುಗುವಿಕೆಗೆ ಬಿಡಿ.

    MORE
    GALLERIES

  • 68

    World Idli Day: ಇದು ಹೊಸ ತರಹದ ರೆಸಿಪಿ; ಇಂದು ಮಾಡಿ ಬಗೆ ಬಗೆಯ ಇಡ್ಲಿ

    ಈಗ ಇಡ್ಲಿ ಕುಕ್ಕರ್ ಅನ್ನು ನೀರಿನಿಂದ ಬಿಸಿ ಮಾಡಿ ಮತ್ತು ಕುದಿಯಲು ಬಿಡಿ. ನಂತರ ಇಡ್ಲಿ ಪ್ಲೇಟ್‌ಗಳನ್ನು ಎಣ್ಣೆಯಿಂದ ಗ್ರೀಸ್ ಮಾಡಿ, ಪ್ರತಿ ಕುಳಿಯಲ್ಲಿ ಹಿಟ್ಟನ್ನು ಸುರಿಯಿರಿ. ಅದನ್ನು ಕುದಿಯುವ ನೀರಿನಲ್ಲಿ ಇರಿಸಿ, ಮುಚ್ಚಳ ಮುಚ್ಚಿ 10 ನಿಮಿಷದ ನಂತರ ಬೆಂದ ಇಡ್ಲಿಯನ್ನು ಪ್ಲೇಟ್ ಗೆ ವರ್ಗಾಯಿಸಿ, ಚಟ್ನಿ ಅಥವಾ ಸಾಂಬಾರ್ ಜೊತೆ ಬಡಿಸಿ.

    MORE
    GALLERIES

  • 78

    World Idli Day: ಇದು ಹೊಸ ತರಹದ ರೆಸಿಪಿ; ಇಂದು ಮಾಡಿ ಬಗೆ ಬಗೆಯ ಇಡ್ಲಿ

    ವೆಜಿಟೇರಿಯನ್ ಇಡ್ಲಿ. ಇಡ್ಲಿ ಹಿಟ್ಟು - 1 ಕಪ್, ಕ್ಯಾರೆಟ್ - ½ ಕಪ್ ಸಣ್ಣದಾಗಿ ಕೊಚ್ಚಿದ, ಕ್ಯಾಪ್ಸಿಕಂ - ½ ಕಪ್, ಶುಂಠಿ - 1 ಚಮಚ, ಹಸಿರು ಮೆಣಸಿನಕಾಯಿ – 2, ಕರಿಬೇವಿನ ಎಲೆಗಳು, ಕೊತ್ತಂಬರಿ ಸೊಪ್ಪು, ಕೆಂಪು ಮೆಣಸಿನ ಪುಡಿ - ½ ಟೀಸ್ಪೂನ್, ಅರಿಶಿನ ಪುಡಿ - ¼ ಟೀಸ್ಪೂನ್, ಉದ್ದಿನ ಬೆಳೆ – 1 ಚಮಚ, ಎಣ್ಣೆ - 2 ಟೀಸ್ಪೂನ್, ರುಚಿಗೆ ಉಪ್ಪು ಬೇಕು.

    MORE
    GALLERIES

  • 88

    World Idli Day: ಇದು ಹೊಸ ತರಹದ ರೆಸಿಪಿ; ಇಂದು ಮಾಡಿ ಬಗೆ ಬಗೆಯ ಇಡ್ಲಿ

    ಮೊದಲು ಬಾಣಲೆಗೆ ಎಣ್ಣೆ ಬಿಸಿ ಮಾಡಿ, ಉದ್ದಿನಬೇಳೆ, ಕ್ಯಾರೆಟ್, ಕ್ಯಾಪ್ಸಿಕಂ, ಶುಂಠಿ, ಕರಿಬೇವಿನ ಸೊಪ್ಪು, ಹಸಿರು ಮೆಣಸಿನಕಾಯಿ ಹಾಕಿ. ನಂತರ ಅರಿಶಿನ ಮತ್ತು ಕೆಂಪು ಮೆಣಸಿನ ಪುಡಿ ಹಾಕಿ ಕೊತ್ತಂಬರಿ ಸೊಪ್ಪು ಹಾಕಿ ಬೆಯಿಸಿ. ಇಡ್ಲಿ ಹಿಟ್ಟಿಗೆ ಎಲ್ಲವನ್ನೂ ಮಿಕ್ಸ್ ಮಾಡಿ. ಇಡ್ಲಿ ತಟ್ಟೆಗೆ ಹಾಕಿ, ಬೇಯಿಸಿ. ನಂತರ ಸರ್ವ್ ಮಾಡಿ.

    MORE
    GALLERIES