ಪ್ರತಿ ವರ್ಷ ಮೇ 5 ಅನ್ನು ವಿಶ್ವ ಕೈ ನೈರ್ಮಲ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಕೈಗಳ ನೈರ್ಮಲ್ಯವನ್ನು ಉತ್ತೇಜಿಸುವ ಮೂಲಕ ಸೋಂಕು ಮತ್ತು ಸೂಕ್ಷ್ಮಜೀವಿಗಳ ಹರಡುವಿಕೆ ತಡೆಗಟ್ಟುವುದು ಈ ದಿನದ ಮುಖ್ಯ ಉದ್ದೇಶ. ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾನರ್, ಪೋಸ್ಟರ್ ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಕೈ ತೊಳೆಯದೇ ಇರುವುದು ಹಲವು ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಅವುಗಳ ಬಗ್ಗೆ ತಿಳಿಯೋಣ.
ಆರೋಗ್ಯಕರ ಚರ್ಮ ಮತ್ತು ಕಣ್ಣುಗಳಿಗೆ ಕೈ ತೊಳೆಯುವುದು ಅತ್ಯಗತ್ಯ. ಮಕ್ಕಳಲ್ಲಿ ಕೈ ತೊಳೆಯುವ ಅಭ್ಯಾಸವನ್ನು ಬೆಳೆಸುವುದು ಅವಶ್ಯಕ. ಈ ಅಭ್ಯಾಸವು ಮಕ್ಕಳ ಕೈಯಲ್ಲಿ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳನ್ನು ಬೆಳೆಯದಂತೆ ತಡೆಯುತ್ತದೆ. ಚರ್ಮ ಮತ್ತು ಕಣ್ಣುಗಳ ಅಲರ್ಜಿ ಉಂಟು ಮಾಡುವ ಬ್ಯಾಕ್ಟೀರಿಯಾ ತಡೆಯುತ್ತದೆ. ಉಸಿರಾಟದ ತೊಂದರೆ ತಪ್ಪಿಸಲು ಕೈ ತೊಳೆಯುವುದು ಮುಖ್ಯ.