ಬೆಲ್ 1877ರಲ್ಲಿ ಟಿಲಿಫೋನ್ ಕಂಪನಿಯನ್ನು ಸ್ಥಾಪಿಸಿದರು. ಆದರೆ ಎಲಿಷಾ ಗ್ರೆ ಎನ್ನು ಮತ್ತೋರ್ವ ವಿಜ್ಞಾನಿ ದೂರವಾಣಿ ರೀತಿಯ ಇನ್ನೊಂದು ಸಾಧನವನ್ನು ಕಂಡುಹಿಡಿದನು. ಆಗ ಇವರಿಬ್ಬರೂ ಪೇಟೆಂಟ್ಗಾಗಿ ಅರ್ಜಿ ಸಲ್ಲಿಸಿದರು. ಆದರೆ ಕೊನೆಯದಾಗಿ ಬೆಲ್ಗೆ ಇದರ ಪೇಟೆಂಟ್ ದೊರಕಿತು. ನಂತರದ 18 ವರ್ಷಗಳಲ್ಲಿ ಪೇಟೆಂಟ್ ಬಗ್ಗೆಯೇ ಬೆಲ್ 587 ಕೋರ್ಟ್ ಕೇಸ್ಗಳನ್ನು ಎದುರಿಸಬೇಕಾಯಿತು. ಆದರೂ ಎಲ್ಲದರಲ್ಲಿಯೂ ಅವರೇ ಗೆದ್ದಿದ್ದಾರೆ.