ಹೊರಗೆ ಮೋಡ ಕವಿಯುತ್ತಿದ್ದಂತೆ ಒಳಗೆ ತಣ್ಣಗೆ ಇಣುಕುವ ಸೋಮಾರಿತನ. ಆದ್ರೆ ಕೆಲವೊಮ್ಮೆ ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾಗೋದ್ರಿಂದಲೂ ಹೀಗಾಗುತ್ತದಂತೆ. ಕಬ್ಬಿಣ ಅನೇಮಿಯಾವನ್ನು ಗುಣಪಡಿಸುತ್ತದೆ, ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ದೇಹಕ್ಕೆ ಶಕ್ತಿ ನೀಡುತ್ತದೆ, ದೇಹದ ತಾಪಮಾನವನ್ನು ನಿಯಂತ್ರಣದಲ್ಲಿ ಇಡುತ್ತದೆ. ಹಾಗಾಗಿ ಮಳೆ ಬರುವ ಸಂದರ್ಭದಲ್ಲಿ ದೇಹಕ್ಕೆ ಸೂಕ್ತ ಪ್ರಮಾಣದಲ್ಲಿ ಕಬ್ಬಿಣದ ಅವಶ್ಯಕತೆ ಇರುತ್ತದೆ.