Weight Loss Tips: ಒಂದೇ ತಿಂಗಳಲ್ಲಿ ತೂಕ ಇಳಿಸಲು ಹೀಗೆ ಮಾಡಿ
Tips To Lose Weight: ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರನ್ನು ಕಾಡುತ್ತಿರುವ ಸಮಸ್ಯೆ ತೂಕ . ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡುವುದರ ಹೊರತಾಗಿ ತೂಕವನ್ನು ಹೇಗೆ ಕಳೆದುಕೊಳ್ಳುವುದು ಎಂಬುದು ಹಲವರ ಪ್ರಶ್ನೆ. ಆದರೆ ಕೆಲ ಟಿಪ್ಸ್ ಬಳಸುವುದರಿಂದ ತೂಕ ಬೇಗ ಇಳಿಸಬಹುದು. ಈ ಟಿಪ್ಸ್ ಫಾಲೋ ಮಾಡಿದ್ರೆ ಒಂದು ತಿಂಗಳಲ್ಲಿ ತೂಕ ಇಳಿಸಬಹುದು. ಹೇಗೆ ಇಲ್ಲಿದೆ ನೋಡಿ.
ತೂಕ ಇಳಿಸಲು ಉತ್ತಮವಾದ ಆ್ಯಂಟಿ ಆಕ್ಸಿಡೆಂಟ್ಗಳು ಅಗತ್ಯ. ಅದು ಆಹಾರದ ಮೂಲಕ ಲಭಿಸುತ್ತದೆ. ಸಕ್ಕರೆ ಇಲ್ಲದ ಆಹಾರವನ್ನು ತಿನ್ನುವುದು ಕೊಬ್ಬನ್ನು ಕರಗಿಸಲು ಒಳ್ಳೆಯದು.
2/ 8
ನೀವು ತೂಕ ಇಳಿಸಿಕೊಳ್ಳಲು ಬಯಸಿದಾಗ ಮೊದಲು ನಿಮ್ಮ ಜೀವನಶೈಲಿಯಲ್ಲಿ ಕೆಲವು ಹೊಂದಾಣಿಕೆಗಳನ್ನು ಮಾಡಬೇಕಾಗುತ್ತದೆ. ತಿನ್ನುವಾಗ ನಿಯಂತ್ರಣ ಬಹಳ ಅಗತ್ಯ. ಆಹಾರದಲ್ಲಿ ಯಾವ ಪದಾರ್ಥಗಳನ್ನು ಸೇರಿಸಬೇಕು ಮತ್ತು ಯಾವುದನ್ನು ಹೊರಗಿಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
3/ 8
ಸ್ಥೂಲಕಾಯತೆ, ತೂಕ ಹೆಚ್ಚಾಗುವುದು ಮತ್ತು ದೇಹದ ಕೊಬ್ಬಿನ ಶೇಖರಣೆಯಂತಹ ಆಕ್ಸಿಡೇಟಿವ್ ಹಾನಿಯನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು. ಆಹಾರಗಳನ್ನು ಸೇವನೆ ಮಾಡುವಾಗ ಎಚ್ಚರದಿಂದಿರಬೇಕು.
4/ 8
ಬೆಳಗ್ಗೆ ತಿಂಡಿಯಲ್ಲಿ ಹೆಚ್ಚು ಪ್ರೋಟೀನ್ ಸೇವನೆ ಮಾಡಿ. ಅದು ನಿಮಗೆ ಬೇಗ ಹಸಿವಾಗುವುದನ್ನ ತಡೆಯುತ್ತದೆ. ಇದರಿಂದ ಜಂಕ್ ಆಹಾರಗಳನ್ನು ತಿನ್ನುವುದನ್ನ ತಪ್ಪಿಸುತ್ತದೆ.
5/ 8
ಹಾಗೆಯೇ ತಿಂಡಿಯ ಸಮಯದಲ್ಲಿ ಸಾಧ್ಯವಾದರೇ ಸಲಾಡ್ಗಳನ್ನು ಅಥವಾ ಓಟ್ಸ್ಗಳನ್ನು ತಿನ್ನಿ. ಇದು ತೂಕ ಇಳಿಸಲು ಸಹಾಯ ಮಾಡುತ್ತದೆ.
6/ 8
ಕುಳಿತ ಜಾಗದಲ್ಲೇ ಕುಳಿತಿರಬಾರದು. ಸ್ವಲ್ಪ ಅತ್ತಿಂದಿತ್ತ ಓಡಾಡಬೇಕು. ಕಾಲು ಕೈಗೆ ಸ್ವಲ್ಪ ವ್ಯಾಯಾಮ ಮಾಡಿಸಿ. ಆಕ್ಟೀವ್ ಆಗಿರುವುದು ಹೆಚ್ಚು ಪ್ರಯೋಜನಕಾರಿ.
7/ 8
ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರಿಗೆ ನಿಂಬೆ ಹನಿ ಹಾಕಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ.
8/ 8
ರಾತ್ರಿ ಮಲಗುವ ಮುನ್ನ ಸ್ವಲ್ಪ ವಾಕಿಂಗ್ ಮಾಡಿ, ಹಾಗೆಯೇ ಬೇಗ ಊಟ ಮಾಡಿ, ಮಲಗುವ 2 ಗಂಟೆ ಮೊದಲಾದರೂ ಊಟ ಮಾಡುವುದು ಉತ್ತಮ.