ಬ್ರೇಕಾಪ್ ಬಳಿಕವೂ ಹಿಂದೆ ನಿಮ್ಮ ಜೊತೆ ರಿಲೇಷನ್ಶಿಪ್ನಲ್ಲಿದ್ದವರು ಈಗಲೂ ನೆನಪಾಗುತ್ತಿದ್ದಾರಾ? ಮನದಲ್ಲಿ ದ್ವೇಷವಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹಳೆಯ ಪ್ರೇಮಿಯನ್ನು ಫಾಲೋ ಮಾಡುತ್ತಿದ್ದೀರಾ? ನೀವು ಎಷ್ಟೇ ಪ್ರಯತ್ನಿಸಿದರೂ ಈ ಅಭ್ಯಾಸವನ್ನು ಬಿಡಲು ಆಗುತ್ತಿಲ್ಲ. ನೀವು ಬ್ಲಾಕ್ ಮಾಡಿದರೂ ಫಾಲೋ ಮಾಡುವುದನ್ನು ಬಿಡಲು ಆಗುತ್ತಿಲ್ಲ ಅಂದರೆ ಈ ಅಭ್ಯಾಸ ಕೊನೆಗೆ ನಿಮ್ಮನ್ನೇ ಕಷ್ಟದಲ್ಲಿ ಸಿಲುಕಿಸುತ್ತದೆ. ಆದ್ದರಿಂದ ಈ ಅಭ್ಯಾಸದಿಂದ ಹೊರಬರಲು ಪ್ರಯತ್ನಿಸಿ.