

1. ಮನಸ್ಸಿನ ಗೊಂದಲ ಬದಿಗಿಟ್ಟು ಮಲಗಿ: ರಾತ್ರಿ ಹಾಸಿಗೆಗೆ ಹೋಗುವ ಮುನ್ನ ಯಾವುದೇ ಮಾನಸಿಕ ತೊಳಲಾಟಗಳಿದ್ದರೂ ಅದನ್ನ ಬದಿಗಿಡಿ. ಮನಸ್ಸನ್ನ ತಿಳಿಯಾಗಿಸಿಕೊಂಡು ಹಾಸಿಗೆ ಹೋಗಿ. ಚಿಂತೆಗಳನ್ನ ಆದಷ್ಟು ಮರೆತು ಶಾಂತವಾಗಿ ಮಲಗಿ.


2. ಪುಸ್ತಕ ಓದಿ: ಮಲಗುವ ಮುನ್ನ ಪುಸ್ತಕ ಒದುವುದು ಒಳ್ಳೆಯ ಹವ್ಯಾಸ. ಇದರಿಂದ ಮನಸ್ಸಿಗೆ ಆಹ್ಲಾದಕರ ಅನಿಸುತ್ತದೆ. ಕಣ್ಣಿಗೆ ಒಳ್ಳೆಯ ವ್ಯಾಯಾಮ ಸಿಗುವುದರಿಂದ ಒಳ್ಳೆಯ ನಿದ್ದರೆ ಬರುತ್ತದೆ.


3. ಮೊಬೈಲ್, ಕಂಪ್ಯೂಟರ್, ಟಿವಿಯಿಂದ ದೂರವಿರಿ: ಮಲಗುವ ಒಂದೆರಡು ಗಂಟೆ ಮುಂಚೆಯೇ ಮೊಬೈಲ್, ಕಂಪ್ಯೂಟರ್, ಟಿವಿಯಿಂದ ದೂರ ಸರಿಯಿರಿ. ಎಲೆಕ್ಟ್ರಾನಿಕ್ ಉಪಕರಣಗಳಿಂದ ಹೊರಬರುವ ವಿಕಿರಣಗಳು ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುವುದರಿಂದ ನಿದ್ದೆಗೆ ಭಂಗ ಬರುತ್ತದೆ..


4. ಮಲಗುವ ಕೋಣೆ ಶುಭ್ರವಾಗಿರಲಿ: ನೀವು ಮಲಗುವ ಕೋಣೆ ಶುಭ್ರವಾಗಿರಲಿ. ಗಾಳಿ, ಬೆಳಕು ಬರುವಂತಿರಲಿ. ಇದರಿಂದ ನಿಮ್ಮ ಮನಸ್ಸಿಗೆ ಉಲ್ಲಾಸ ಸಿಗುವುದರಿಂದ ನಿದ್ದೆ ಸರಾಗವಾಗುತ್ತದೆ..


5. ಸಣ್ಣ ನಡಿಗೆ ಉತ್ತಮ: ಮಲಗುವ ಮುನ್ನ ಸಣ್ಣದೊಂದು ವಾಕ್ ಮಾಡಿ ದೇಹಕ್ಕೆ ಚಲನೆ ಸಿಗುವುದರಿಂದ ಜಡತ್ವ ದೂರವಾಗಿ ಸಂತಸ ಮೂಡುತ್ತದೆ.