ಮಕ್ಕಳಲ್ಲಿ ಭಯವನ್ನು ಹುಟ್ಟುಹಾಕಿ: ಮಕ್ಕಳಲ್ಲಿ ಭಯವನ್ನು ಹುಟ್ಟುಹಾಕುವುದು ಒಂದು ಉತ್ತಮ ವಿಧಾನವಾಗಿದೆ. ಇದು ಪ್ರತಿ ಮಗುವಿಗೆ ಕೆಲಸ ಮಾಡದಿರಬಹುದು, ಆದರೆ ಕೆಲ ಮಕ್ಕಳಲ್ಲಿ ಖಂಡಿತ ಕೆಲಸ ಮಾಡುತ್ತದೆ. ಈ ಮೂಲಕ ಮಕ್ಕಳ ಮನಸ್ಸಿನಲ್ಲಿ ಮೊಬೈಲ್, ಟಿವಿ ನೋಡುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಭಯ ಮೂಡಿಸಬಹುದು. ಈ ಭಯವು ಸಾಮಾನ್ಯವಾಗಿ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಹೊರಾಂಗಣ ಕ್ರೀಡೆಗಳಲ್ಲಿ ಆಸಕ್ತಿ: ಮೊಬೈಲ್ ಫೋನ್, ಟಿವಿ ನೋಡುವ ಅಭ್ಯಾಸವು ಯಾವಾಗಲೂ ಮನೆಯಲ್ಲಿಯೇ ಇರುವ ಮತ್ತು ಒಂಟಿಯಾಗಿರುವ ಮಕ್ಕಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ನಿರಂತರವಾಗಿ ಮೊಬೈಲ್ ಬಳಸುವ ಚಟವನ್ನು ಹೋಗಲಾಡಿಸಲು ಮಕ್ಕಳನ್ನು ಹೊರಾಂಗಣ ಆಟಗಳನ್ನು ಆಡಲು ಇಷ್ಟಪಡುವಂತೆ ಮಾಡಿ. ಒಮ್ಮೆ ಮಗು ತಾನಾಗಿಯೇ ಕ್ರೀಡೆಯಲ್ಲಿ ಆಸಕ್ತಿ ತೋರಿದರೆ ಟಿವಿ, ಮೊಬೈಲ್ ನೋಡುವ ಅಭ್ಯಾಸ ತಾನಾಗಿಯೇ ದೂರವಾಗುತ್ತದೆ.