Curd: ಹಾಲು ಮಾತ್ರ ಇದ್ರೆ ಮೊಸರು ಮಾಡೋಕೆ ಆಗೋಲ್ಲ, ಈ ಟಿಪ್ಸ್​ ಫಾಲೋ ಮಾಡಬೇಕು

ಮೊಸರು ಮಾಡುವಾಗ ನೀವು ಯಾವುದೇ ಕಾರಣಕ್ಕೂ ಈ ಅಂಶಗಳನ್ನು ಮರೆಯುವ ಹಾಗಿಲ್ಲ. ಒಂದು ಬಾರಿ ಈ ಟಿಪ್ಸ್​ಗಳನ್ನು ಫಾಲೋ ಮಾಡಿ, ರುಚಿಯಾದ ಮೊಸರು ರೆಡಿ ಇರುತ್ತೆ.

First published:

  • 17

    Curd: ಹಾಲು ಮಾತ್ರ ಇದ್ರೆ ಮೊಸರು ಮಾಡೋಕೆ ಆಗೋಲ್ಲ, ಈ ಟಿಪ್ಸ್​ ಫಾಲೋ ಮಾಡಬೇಕು

    ಅದೆಷ್ಟೋ ಜನರಿಗೆ ಊಟಕ್ಕೆ ಮೊಸರು ಇಲ್ಲ ಅಂದ್ರೆ ತೃಪ್ತಿನೇ ಇರೋಲ್ಲ. ಈ ಮೊಸರು ಆರೋಗ್ಯಕ್ಕೆ ತುಂಬಾ ಒಳಿತು. ಮೊಸರು ತಿಂದ್ರೆ ದಪ್ಪ ಆಗ್ತೀವಿ ಅಂತ ಅದೆಷ್ಟೋ ಜನರು ಪ್ರತಿನಿತ್ಯ ತಿಂತಾರೆ. ಹಾಗಾದ್ರೆ ಈ ಮೊಸರು ಮಾಡಲು ಕೇವಲ ಹಾಲಯ ಇದ್ರೆ ಸಾಕಾಗಾಲ್ಲ. ಏನೇಲ್ಲಾ ಬೇಕು ತಿಳಿಯೋಣ ಬನ್ನಿ.

    MORE
    GALLERIES

  • 27

    Curd: ಹಾಲು ಮಾತ್ರ ಇದ್ರೆ ಮೊಸರು ಮಾಡೋಕೆ ಆಗೋಲ್ಲ, ಈ ಟಿಪ್ಸ್​ ಫಾಲೋ ಮಾಡಬೇಕು

    ಹಾಲು ತೆಳುವಾಗಿದ್ರೆ ಮೊಸರು ಜಾಸ್ತಿ ದಿನ ಉಳಿಯೋದಿಲ್ಲ. ಹಾಗಾಗಿ ಮಿನಿಮಮ್ 20 ನಿಮಿಷಗಳ ಕಾಲ ಹಾಲು ಕುದಿಯಲೇ ಬೇಕು. ನಂತರ ಹೆಪ್ಪಾಕಿದ್ರೆ ಹಾಲು ಹಾಳಾಗೋದಿಲ್ಲ.

    MORE
    GALLERIES

  • 37

    Curd: ಹಾಲು ಮಾತ್ರ ಇದ್ರೆ ಮೊಸರು ಮಾಡೋಕೆ ಆಗೋಲ್ಲ, ಈ ಟಿಪ್ಸ್​ ಫಾಲೋ ಮಾಡಬೇಕು

    ದೊಡ್ಡ ಪಾತ್ರೆ ತುಂಬ ಹಾಲು ಹಾಕಿ ಅದಕ್ಕೆ ಒಂದು ಚಮಚ ಮೊಸರು ಹಾಕಿದ್ರೆ ಆಗ ಹಾಲು ಮೊಸರಾಗೋದಿಲ್ಲ. ಹೀಗಾಗಿ ನೀವು ಎಷ್ಟು ಹಾಲಿಗೆ, ಎಷ್ಟು ಪ್ರಮಾಣದ ಹುಳಿ ಮೊಸರು ಹಾಕಬೇಕು ಅಂತಲೂ ಗೊತ್ತಿರಬೇಕು.

    MORE
    GALLERIES

  • 47

    Curd: ಹಾಲು ಮಾತ್ರ ಇದ್ರೆ ಮೊಸರು ಮಾಡೋಕೆ ಆಗೋಲ್ಲ, ಈ ಟಿಪ್ಸ್​ ಫಾಲೋ ಮಾಡಬೇಕು

    ಹಾಲಿಗೆ ಹೆಪ್ಪು ಹಾಕಿ 7 ಗಂಟೆಯ ನಂತ್ರ ಮೊಸರು ಆಗುತ್ತದೆ. ಬೇಸಿಗೆ ಕಾಲದಲ್ಲಿ ಇದಕ್ಕೆ ಸ್ವಲ್ಪ ಕಡಿಮೆ ಸಮಯ ಸಾಕು. ಹೆಪ್ಪನ್ನು ಹಾಕಿ ತಕ್ಷಣ ಮೊಸರು ಆಗಿದ್ಯಾ ಅಂತ ನೋಡಿದ್ರೆ ಆಗಲ್ಲ. ಬೇಸಿಗೆ ಸಮಯದಲ್ಲಿ ನೀವು ಮೊಸರನ್ನು ಫ್ರಿಡ್ಜ್ ನಿಂದ ಹೊರಗೆ ಇಟ್ರೆ ಬೇಗ ಹುಳಿಯಾಗುತ್ತದೆ ಎಂಬುದು ಗಮನವಿರಲಿ.

    MORE
    GALLERIES

  • 57

    Curd: ಹಾಲು ಮಾತ್ರ ಇದ್ರೆ ಮೊಸರು ಮಾಡೋಕೆ ಆಗೋಲ್ಲ, ಈ ಟಿಪ್ಸ್​ ಫಾಲೋ ಮಾಡಬೇಕು

    ಹಾಲು ಮೊಸರಾದ್ಮೇಲೆ ಪಾತ್ರೆಯ ಮೇಲ್ಭಾಗದಲ್ಲಿ ನೀರು ನಿಲ್ಲುತ್ತದೆ. ಆ ನೀರನ್ನು ನೀವು ತೆಗೆಯಬೇಕು. ಹತ್ತಿ ಬಟ್ಟೆಯನ್ನು ಬಳಸಿ ಆ ನೀರನ್ನು ಸೋಸಬೇಕು. ನೀರು ತೆಗೆದಿಟ್ಟರೆ ಮೊಸರು ದಪ್ಪಾಗುವ ಜೊತೆಗೆ ಹುಳಿಯಾಗೋದಿಲ್ಲ.

    MORE
    GALLERIES

  • 67

    Curd: ಹಾಲು ಮಾತ್ರ ಇದ್ರೆ ಮೊಸರು ಮಾಡೋಕೆ ಆಗೋಲ್ಲ, ಈ ಟಿಪ್ಸ್​ ಫಾಲೋ ಮಾಡಬೇಕು

    ತುಂಬಾ ಶಾಖವಿರುವ ಮತ್ತು ಕೋಲ್ಡ್​ ಇರುವ ಜಾಗದಲ್ಲಿ ಹಾಲನ್ನು ಹೆಪ್ಪು ಹಾಕಿದ ಪಾತ್ರೆಯನ್ನು ಇಡಬಾರದು. ಹೀಗೆ ಮಾಡಿದ್ರೆ ಹಾಲು ಬೇಗ ಮೊಸರಾಗೋದಿಲ್ಲ. ಸಾಮಾನ್ಯ ತಾಪಮಾನದಲ್ಲಿ ಪಾತ್ರೆಯನ್ನು ಇಡಿ.

    MORE
    GALLERIES

  • 77

    Curd: ಹಾಲು ಮಾತ್ರ ಇದ್ರೆ ಮೊಸರು ಮಾಡೋಕೆ ಆಗೋಲ್ಲ, ಈ ಟಿಪ್ಸ್​ ಫಾಲೋ ಮಾಡಬೇಕು

    ಹಾಲನ್ನು ಬಿಸಿ ಮಾಡಿದ ತಕ್ಷಣ ಬಿಸಿ ಹಾಲಿಗೆ ನೀವು ಮೊಸರು ಸೇರಿಸಬಾರದು. ನೀವು ಹಾಲನ್ನು ಮಣ್ಣಿನ ಪಾತ್ರೆಯಲ್ಲಿ ಹೆಪ್ಪು ಹಾಕಿದ್ರೆ ಮೊಸರು ದಪ್ಪಗೆ ಹಾಗೂ ಸಿಹಿಯಾಗಿರುತ್ತದೆ. ಹಾಲು ಉಗುರು ಬೆಚ್ಚಗಿರುವಾಗ ಅದಕ್ಕೆ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

    MORE
    GALLERIES