ಪ್ರತಿಯೊಬ್ಬರಿಗೂ ಹುಟ್ಟುಹಬ್ಬ ತುಂಬಾ ಸ್ಪೆಷಲ್ ಆಗಿರುತ್ತದೆ. . ಹುಟ್ಟುಹಬ್ಬವನ್ನು ಹೆಚ್ಚಾಗಿ ಜನರು ಸ್ನೇಹಿತರೊಂದಿಗೆ ಸೆಲೆಬ್ರೇಟ್ ಮಾಡುತ್ತಾರೆ. ಮತ್ತೆ ಕೆಲವರು ಫ್ಯಾಮಿಲಿ ಜೊತೆಗೆ ಸೆಲೆಬ್ರೇಟ್ ಮಡುತ್ತಾರೆ. ಒಂದು ವೇಳೆ ನೀವು ಬರ್ತ್ಡೇ ಅನ್ನು ಹೊರಗೆ ಆಚರಿಸಲು ಇಚ್ಛಿಸದೇ ಇದ್ದರೆ ಮನೆಯಲ್ಲಿಯೇ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆಚರಿಸಿ. ಅಲ್ಲದೇ ಈ ದಿನವನ್ನು ನೆನಪಿನಲ್ಲಿ ಉಳಿಯುವಂತೆ ಮಾಡಲು ಕೆಲ ಟಿಪ್ಸ್ಗಳನ್ನು ಫಾಲೋ ಮಾಡಿ.
ಇದರಿಂದ ನಿಜಕ್ಕೂ ಹೊರಗಿಗಿಂತ ಮನೆಯಲ್ಲಿಯೇ ಬರ್ತ್ಡೇ ಅನ್ನು ಅತ್ಯುತ್ತಮವಾಗಿ ಆಚರಿಸಬಹುದು. ಇಷ್ಟೇ ಅಲ್ಲದೇ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ನೀವು ಸಖತ್ ಎಂಜಾಯ್ ಮಾಡಬಹುದು. ನಿಮ್ಮ ಬರ್ತ್ಡೇಯನ್ನು ಮತ್ತಷ್ಟು ಸ್ಪೆಷಲ್ಗೊಳಿಸಲು ನಾವು ನಿಮಗೆ ಮನೆಯಲ್ಲಿ ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು ಎಂಬ ಬಗ್ಗೆ ಕೆಲ ಟಿಪ್ಸ್ಗಳನ್ನು ನೀಡುತ್ತಿದ್ದೇವೆ. ನೀವು ಕೂಡ ಇದನ್ನು ಟ್ರೈ ಮಾಡಿ ಬೆಸ್ಟ್ ಎಕ್ಸ್ಪಿರಿಯನ್ಸ್ ಪಡೆಯಬಹುದು.
ಹೋಮ್ ಥಿಯೇಟರ್ ನಿರ್ಮಿಸಿ: ಹುಟ್ಟುಹಬ್ಬದ ಆಚರಣೆಯನ್ನು ವಿಶೇಷವಾಗಿಸಲು ನೀವು ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಸಿನಿಮಾ ನೋಡಲು ಟ್ರೈ ಮಾಡಬಹುದು. ಇದಕ್ಕಾಗಿ ಮನೆಯಲ್ಲೇ ಹೋಮ್ ಥಿಯೇಟರ್ ಸಿದ್ಧಪಡಿಸಿ ಒಳ್ಳೆಯ ಸಿನಿಮಾ ನೋಡಬಹುದು. ಇದಲ್ಲದೇ ಸ್ನೇಹಿತರು ಮತ್ತು ಆಪ್ತರಿಗೆ ಡ್ರೆಸ್ ಕೋಡ್ ಅಥವಾ ಪೈಜಾಮಾಗಳನ್ನು ಹಾಕಿಕೊಳ್ಳುವಂತೆ ರೂಲ್ಸ್ ಮಾಡಿ. ಅಲ್ಲದೇ ಸಿನಿಮಾ ವೀಕ್ಷಿಸುವ ವೇಳೆ ಪಾಪ್ಕಾರ್ನ್ ಮತ್ತು ತಿಂಡಿಗಳನ್ನು ತಿನ್ನುವುದನ್ನು ಮರೆಯಬೇಡಿ.
ಪಾರ್ಟಿಯಲ್ಲಿ ಶಾಂಪೇನ್ : ಶಾಂಪೇನ್ ಇಲ್ಲದೆ ಪಾರ್ಟಿಯು ಕಂಪ್ಲೀಟ್ ಆಗುವುದಿಲ್ಲ. ಅದಕ್ಕಾಗಿಯೇ ನಿಮ್ಮ ಹುಟ್ಟುಹಬ್ಬದ ವೇಳೆ ಶಾಂಪೇನ್ ಅನ್ನು ಖಂಡಿತವಾಗಿ ಸೇರಿಸಿ. ಇದಕ್ಕಾಗಿ, ನೀವು ಮನೆಯ ಟೆರೇಸ್ ಮೇಲೆ ರುಚಿಕರವಾದ ಭಕ್ಷ್ಯಗಳೊಂದಿಗೆ ಶಾಂಪೇನ್ ಅನ್ನು ಜೋಡಿಸಬಹುದು ಮತ್ತು ನಂತರ ಸ್ನೇಹಿತರೊಂದಿಗೆ ನೃತ್ಯ ಮತ್ತು ಹಾಡುವ ಮೂಲಕ ಶಾಂಪೇನ್ ಮಾಡುವ ಮೂಲಕ ಪಾರ್ಟಿ ಮಾಡಬಹುದು.