Kitchen Hacks: ಅಡುಗೆಯಲ್ಲಿ ಉಪ್ಪು ಹೆಚ್ಚಾದರೆ ಅದನ್ನು ಸರಿ ಮಾಡೋಕೆ ಸಿಂಪಲ್ ಟ್ರಿಕ್ಸ್ ಇಲ್ಲಿದೆ !

Kitchen Tips: ಅಡುಗೆ ಮಾಡುವಾಗ ಕೆಲವೊಮ್ಮೆ ರುಚಿ ಹೆಚ್ಚು ಕಡಿಮೆಯಾಗುವುದು ಬಹಳ ಸಹಜ. ಒಂದು ಸಲ ಉಪ್ಪು ಜಾಸ್ತಿ ಆದರೆ ಮತ್ತೊಮ್ಮೆ ಉಪ್ಪೇ ಇಲ್ಲ ಎನ್ನುವಂತಾಗುತ್ತದೆ. ಇನ್ನು ಹುಳಿ, ಖಾರ, ಸಿಹಿ ಎಲ್ಲಾ ವಿಚಾರದಲ್ಲೂ ಅಷ್ಟೇ. ಬೆಳಗಾಗೆದ್ದು ನೂರೆಂಟು ಕೆಲಸಗಳ ನಡುವೆ ಎಲ್ಲೋ ಸ್ವಲ್ಪ ರುಚಿ ಹೆಚ್ಚು ಕಡಿಮೆ ಆದರೂ ಅಡುಗೆ ರುಚಿಸುವುದಿಲ್ಲ. ಉಪ್ಪು ಕಡಿಮೆಯಾದರೆ ಸ್ವಲ್ಪ ಸೇರಿಸಿಕೊಳ್ಳಬಹುದು, ಆದರೆ ಹೆಚ್ಚಾದರೆ ಮಾತ್ರ ಏನೂ ಮಾಡಲು ಸಾಧ್ಯವಿಲ್ಲ ಎನಿಸಿಬಿಡುತ್ತದೆ. ಅದೆಷ್ಟೋ ಸಲ ಉಪ್ಪು ಹೆಚ್ಚಾಗಿದ್ದರಿಂದ ಅಡುಗೆಯನ್ನು ಬಿಸಾಡುವಂಥಾ ಪರಿಸ್ಥಿತಿ ಬಹುತೇಕ ಎಲ್ಲರಿಗೂ ಆಗಿರುತ್ತದೆ. ಸಣ್ಣ ಲೆಕ್ಕಾಚಾರವೊಂದು ತಲೆಕೆಳಗಾಗಿ ಇಡೀ ಅಡುಗೆಯೇ ಹಾಳಾಗಿಬಿಡುತ್ತದೆ.

First published: